ಕರುನಾಡೋತ್ಸವ: ವಿದೇಶದಲ್ಲೂ ಕನ್ನಡಿಗ ಬಾಲುವಿನ ‘ಜಂಬೆ’ ಝಲಕ್
ಕರುನಾಡೋತ್ಸವದ ವಿಶೇಷ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ...ಚಿಕ್ಕಬಳ್ಳಾಪುರ ತಾಲ್ಲೂಕು ನಲ್ಲಕದಿರೇನಹಳ್ಳಿ ಗ್ರಾಮದ ಬಾಲು ಅವರು ‘ಜಂಬೆ’ ವಾದ್ಯ ಪರಿಕರ ನುಡಿಸುವ ಮೂಲಕ ಈಗ ‘ಜಂಬೆ ಬಾಲು’ ಎಂದೇ ರಾಜ್ಯದಲ್ಲಿ ಪರಿಚಿತರು. ಆದಿಮ ವಾದ್ಯ ಪರಿಕರಗಳನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನುಡಿಸಿ ಗಮನ ಸೆಳೆಯುತ್ತಿದ್ದಾರೆ.‘ಇಂಡಿಯಾ ಫೋಕ್ ಬ್ಯಾಂಡ್’ ಮೂಲಕ ಹಲವು ದೇಶಗಳಲ್ಲಿ

ಕರುನಾಡೋತ್ಸವದ ವಿಶೇಷ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ...ಚಿಕ್ಕಬಳ್ಳಾಪುರ ತಾಲ್ಲೂಕು ನಲ್ಲಕದಿರೇನಹಳ್ಳಿ ಗ್ರಾಮದ ಬಾಲು ಅವರು ‘ಜಂಬೆ’ ವಾದ್ಯ ಪರಿಕರ ನುಡಿಸುವ ಮೂಲಕ ಈಗ ‘ಜಂಬೆ ಬಾಲು’ ಎಂದೇ ರಾಜ್ಯದಲ್ಲಿ ಪರಿಚಿತರು. ಆದಿಮ ವಾದ್ಯ ಪರಿಕರಗಳನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನುಡಿಸಿ ಗಮನ ಸೆಳೆಯುತ್ತಿದ್ದಾರೆ.‘ಇಂಡಿಯಾ ಫೋಕ್ ಬ್ಯಾಂಡ್’ ಮೂಲಕ ಹಲವು ದೇಶಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಅವರದ್ದು. ಕನ್ನಡ ನೆಲದ ಈ ಪ್ರತಿಭಾವಂತ ಈಗ ಅಂತರರಾಷ್ಟ್ರೀಯ ಮಟ್ಟದ ಜಂಬೆ ಕಲಾವಿದರಾಗಿ ಗುರುತು ಪಡೆದಿದ್ದಾರೆ.ಜಪಾನ್, ಚೀನಾ, ಥಾಯ್ಲೆಂಡ್, ದುಬೈ, ಸಿಂಗಪುರ, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಲ್ಲಿ ಬಾಲು ನೇತೃತ್ವದ ‘ಇಂಡಿಯಾ ಫೋಕ್ ಬ್ಯಾಂಡ್’, ‘ಜಂಬೆ ಝಲಕ್’ ಸಂಗೀಯ ಕಾರ್ಯಕ್ರಮ ಪ್ರಸ್ತುತಿಪಡಿಸಿದೆ. ಜಂಬೆ, ತಮಟೆ, ಪುಂಗಿ, ಕೊಳಲು, ದಮಡಿ, ಬುಡಬುಡಿಕೆ ವಾದ್ಯಗಳ ನಿನಾದವನ್ನು ‘ಜಂಬೆ ಝಲಕ್’ ಒಳಗೊಂಡಿದೆ.ಸಂಪನ್ಮೂಲ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಬೇಕು - ಸಚಿವ ಎಚ್.ಸಿ ಬಾಲಕೃಷ್ಣಕರುನಾಡೋತ್ಸವ| ಕನ್ನಡಕ್ಕಾಗಿ ಹೋರಾಟ, ಹೋರಾಟಗಾರರ ಒಡನಾಟ: ರಾ.ನಂ. ಚಂದ್ರಶೇಖರ ಮಾತು‘ಇಂಡಿಯಾ ಫೋಕ್ ಬ್ಯಾಂಡ್’ಮೂಲಕ ಸಂಗೀತ ಕಾರ್ಯಕ್ರಮ ನೀಡುತ್ತಿರುವ ಬಾಲು, ‘ಇಂಡಿಯಾ ಫೋಕ್ ಟ್ರಸ್ಟ್’ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿದ್ದಾರೆ. ಬಾಲು ಅವರ ತಂಡಚಿಕ್ಕಬಳ್ಳಾಪುರ ತಾಲ್ಲೂಕಿನ ನಲ್ಲಕದಿರೇನಹಳ್ಳಿ, ಪೋಶೆಟ್ಟಹಳ್ಳಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಬೇಸಿಗೆ ಶಿಬಿರಗಳು, ‘ಕಣಿವೆ ಕಲರವ’ ಕಾರ್ಯಕ್ರಮ–ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ‘ಕಲೆಯ ಮೂಲಕ ಶಿಕ್ಷಣ’ ಪರಿಕಲ್ಪನೆಯಡಿ ಬೆಂಗಳೂರಿನ ಸಹಕಾರ ನಗರದ ಕೊಳೆಗೇರಿಗಳ ಮಕ್ಕಳಿಗೆ ಓದು, ಬರಹ ಕಲಿಸುತ್ತಿದ್ದಾರೆ.ಕಲಾ ನಿರ್ದೇಶಕ ಮತ್ತು ರಂಗಕರ್ಮಿ ಜಾನ್ ದೇವರಾಜ್, ಬಾಲು ಅವರ ಗುರು.‘ಜಾನ್ ದೇವರಾಜ್ ಅವರ ಸಂಪರ್ಕ ನನ್ನ ಈ ಮಟ್ಟಕ್ಕೆ ಬೆಳೆಸಿದೆ. ಅವರೇ ನನ್ನ ಗುರು’ ಎನ್ನುವ ಬಾಲು, ನಲ್ಲಕದಿರೇನಹಳ್ಳಿಯ ಬಡ ಕುಟುಂಬದಲ್ಲಿ ಜನಿಸಿದವರು. ಓದು ತಲೆಗೆ ಹತ್ತದಿದ್ದಾಗ ಬೆಂಗಳೂರಿನತ್ತ ಮುಖ ಮಾಡಿದರು.ಬಾಲ ಆಧಾರ್ ಉಚಿತ ನೋಂದಣಿ ಶಿಬಿರಕ್ಕೆ ಜಿಲ್ಲಾಧಿಕಾರಿ ಭೇಟಿ‘ಶಾಲೆಗೆ ಹೋಗುವಾಗ ಡೆಸ್ಕ್ಗಳು ಮತ್ತು ಸೀಮೆಎಣ್ಣೆ ಡಬ್ಬಗಳೇ ನಮ್ಮ ವಾದ್ಯ ಪರಿಕರಗಳಾಗಿದ್ದವು. ನನಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಮನೆಯಲ್ಲಿ ಬಿಡುತ್ತಿರಲಿಲ್ಲ. ಓದು ತಲೆಗೆ ಹತ್ತಲಿಲ್ಲ. ಎಸ್ಎಸ್ಎಲ್ಸಿ ನಂತರ ಬೆಂಗಳೂರಿಗೆ ಬಂದೆ. ಯುಬಿ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದೆ. ಕಬ್ಬನ್ ಪಾರ್ಕ್ನಲ್ಲಿ ಜಾನ್ ದೇವರಾಜ್, ಮಕ್ಕಳಿಗೆ ಕಲಾ ಶಿಬಿರ ಆಯೋಜಿಸಿದ್ದರು. ನಾನೂ ಭಾಗಿಯಾಗಿವೆ ಎಂದೆ. ಜೊತೆಗೆ ಸೇರಿಸಿಕೊಂಡರು’ ಎಂದು ಗುರುವಿನ ಭೇಟಿಯ ಮೊದಲ ಕ್ಷಣಗಳನ್ನು ಬಾಲು ನೆನಪಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕೇಂದ್ರ ಕಟ್ಟುವ ಕನಸನ್ನು ಬಾಲು ಹೊಂದಿದ್ದಾರೆ. ಈ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಅವರದ್ದೇ ಆದ ಪ್ರಸಿದ್ಧ ಆದಿಮ ವಾದ್ಯ ಪರಿಕರಗಳು, ಸಂಗೀತ, ನೃತ್ಯಗಳು ಇವೆ. ಅವುಗಳನ್ನು ಕನ್ನಡಿಗರಿಗೂ ಕಲಿಸಬೇಕು ಎನ್ನುವುದು ಕೇಂದ್ರದ ಉದ್ದೇಶ.ಅಂತರರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕೇಂದ್ರದ ಕನಸುಬಾಲುಕರ್ಣಾಟಬಲಂ ಅಜೇಯಂ ಹಾಡಿಗೆ ಜನಪದ ಝಲಕ್‘ಕಾರ್ಯಕ್ರಮಗಳಿಗಾಗಿ ಹೊರ ದೇಶಗಳಿಗೆ ತೆರಳಿದಾಗ ಅಲ್ಲಿನ ಸ್ಥಳೀಯ ಜನಪದ ವಾದ್ಯ ಪ್ರಕಾರಗಳ ಬಗ್ಗೆ ತಿಳಿದುಕೊಳ್ಳುವೆ. ನಮ್ಮಲ್ಲಿ ತಮಟೆಯನ್ನು ಸಾವಿನ ಸಂದರ್ಭದಲ್ಲಿ ಮಾತ್ರ ಹೆಚ್ಚು ಬಳಸಲಾಗುತ್ತಿದೆ. ‘ತಮಟೆ ಹಬ್ಬ’ಮಾಡಿದರೆ ದಲಿತರ ಕಾರ್ಯಕ್ರಮ ಎನ್ನುವ ಹಣೆಪಟ್ಟಿ ಹಚ್ಚುವರು. ಇಂತಹ ಚೌಕಟ್ಟುಗಳನ್ನು ಇರಬಾರದು. ವೀರಗಾಸೆ, ಡೊಳ್ಳು ಕುಣಿತ, ಬುಡಬುಡಿಕೆಗೆ ತನ್ನದೇ ಆದ ಕಾಸ್ಟ್ಯೂಮ್ ಇದೆ. ಆದರೆ ತಮಟೆ ಕಲಾವಿದರಿಗೆ ನಿರ್ದಿಷ್ಟವಾದ ಕಾಸ್ಟ್ಯೂಮ್ ಇಲ್ಲ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಗುರುತಿಗಾಗಿ ತಮಟೆ ಕಲಾವಿದರಿಗೂ ಕಾಸ್ಟ್ಯೂಮ್ ರೂಪಿಸಬೇಕಿದೆ ಎನ್ನುತ್ತಾರೆ ಬಾಲು.ತಮಟೆ ಕಲಾವಿದರಿಗೆ ಕಾಸ್ಟ್ಯೂಮ್ ಅಗತ್ಯಕೋಣಂದೂರು: ಬಾಲಕರಿಗಿಲ್ಲ ಹಾಸ್ಟೆಲ್ ಸೌಲಭ್ಯ!‘ಅಂತರರಾಷ್ಟ್ರೀಯ ಸಾಂಸ್ಕೃತಿಕ ಕೇಂದ್ರಕ್ಕೆ ವರ್ಷದಲ್ಲಿ ಮೂರು ತಿಂಗಳು ಬೇರೆ ದೇಶಗಳ ಕಲಾವಿದರನ್ನು ಕರೆಯಿಸಿ ಅಲ್ಲಿನ ವಾದ್ಯ ಪರಿಕರಗಳು, ಸಂಗೀತಕ್ಕೆ ಸಂಬಂಧಿಸಿದಂತೆ ಶಿಬಿರ ಆಯೋಜಿಬೇಕು ಎನ್ನುವ ಚಿಂತನೆ ಇದೆ. ಹೀಗೆ ಆ ವಾದ್ಯ ಪರಿಕರಗಳನ್ನು ಕಲಿತರೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ನೆಲದ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಜಂಬೆ ಆಫ್ರಿಕಾ ಮೂಲದ ಪರಿಕರ. ಎಸ್ಎಸ್ಎಲ್ಸಿಯನ್ನು ಮೂರು ಬಾರಿ ಅನುತ್ತೀರ್ಣನಾಗಿರುವ ನಾನು ಈಗ ವಿಶ್ವವಿದ್ಯಾಲಯಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿದ್ದೇನೆ. ಸಾಂಸ್ಕೃತಿಕ ವಿಚಾರಗಳ ಬಗ್ಗೆ ಅಲ್ಲಿನ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದೇನೆ’ ಎನ್ನುತ್ತಾರೆ ಬಾಲು.ಬುಡುಬುಡಕಿ, ದಮಡಿ, ಪುಂಗಿ ಸೇರಿದಂತೆ ತಳಸಮುದಾಯಗಳ ವಾದ್ಯಗಳನ್ನು ಜನರಿಗೆ ಮತ್ತಷ್ಟು ದೀರ್ಘವಾಗಿ ತಲುಪಿಸಬೇಕು. ಈ ದಿಕ್ಕಿನಲ್ಲಿ ‘ಜನರೊಂದಿಗೆ ಜಂಬೆ ಝಲಕ್’ ಎಂದು ರಾಜ್ಯದಾದ್ಯಂತ ತಿರುಗಾಟ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎನ್ನುತ್ತಾರೆ.‘ಗನ್ ಬೇಡ ಪೆನ್ನು ಬೇಕು’ ಎಂದು 2008ರಲ್ಲಿ ಬೆಂಗಳೂರಿನಿಂದ ಲಾಹೋರ್ಗೆ ಬೈಸಿಕಲ್ ಮೂಲಕ ‘ಶಾಂತಿ ಯಾತ್ರೆ’ಯನ್ನು ಬಾಲು ಕೈಗೊಂಡಿದ್ದರು. ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಕ್ಷುಬ್ಧ ಸನ್ನಿವೇಶದ ಕಾರಣ ವಾಘಾ ಗಡಿವರೆಗೆ ಮಾತ್ರ ‘ಶಾಂತಿ ಯಾತ್ರೆ’ ಸಾಧ್ಯವಾಯಿತು ಎನ್ನುತ್ತಾರೆ ಬಾಲು.ಗನ್ ಬೇಡ ಪೆನ್ನು ಬೇಕು2019ರ ಆಗಸ್ಟ್ನಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೋಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಾನ್ ಪ್ರೀ ಆರ್ಟ್ ಜಪಾನ್ ಮತ್ತು ಇಂಡಿಯನ್ ಫೋಕ್ ಟ್ರಸ್ಟ್ ಸಹಯೋಗದಲ್ಲಿ ‘ಯುದ್ದ ಬೇಡ ಶಾಂತಿ ಬೇಕು’ ಕಾರ್ಯಕ್ರಮ ಸಂಘಟಿಸಿದ್ದರು. ಆಗ ಜಪಾನಿನ ಬಾನ್ ಪ್ರೀ ಆರ್ಟ್ ಅಧ್ಯಕ್ಷ ಶಿಯೋಸಾಗುಚಿ ಸಾನ್ ಸಹ ಪಾಲ್ಗೊಂಡಿದ್ದರು. ಈಗಲೂ ಈ ಶಿಬಿರಗಳನ್ನು ಸಂಘಟಿಸುತ್ತಿದ್ದಾರೆ ಬಾಲು.