ಮುಕ್ತಾಯದ ಹಂತದಲ್ಲಿ ‘ಅಮೃತಧಾರೆ’: ನಟ ರಾಜೇಶ್ ನಟರಂಗ ಭಾವುಕ ಮಾತು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ ಮುಕ್ತಾಯ ಹಂತಕ್ಕೆ ತಲುಪಿದೆ. ಧಾರಾವಾಹಿಯ ಕೊನೆಯ ಸಂಚಿಕೆಗಳ ಪ್ರಸಾರ ಪ್ರಕ್ರಿಯೆ ನಡೆಯುತ್ತಿದ್ದು, ಶುಕ್ರವಾರ (ನ.6) ಕೊನೆಯ ದಿನದ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿದೆ ಎಂದು ನಟ ರಾಜೇಶ್ ನಟರಂಗ ತಿಳಿಸಿದ್ದಾರೆ.ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿರುವ ನಟ ರಾ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ ಮುಕ್ತಾಯ ಹಂತಕ್ಕೆ ತಲುಪಿದೆ. ಧಾರಾವಾಹಿಯ ಕೊನೆಯ ಸಂಚಿಕೆಗಳ ಪ್ರಸಾರ ಪ್ರಕ್ರಿಯೆ ನಡೆಯುತ್ತಿದ್ದು, ಶುಕ್ರವಾರ (ನ.6) ಕೊನೆಯ ದಿನದ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿದೆ ಎಂದು ನಟ ರಾಜೇಶ್ ನಟರಂಗ ತಿಳಿಸಿದ್ದಾರೆ.ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿರುವ ನಟ ರಾಜೇಶ್ ನಟರಂಗ, ಇಷ್ಟು ದಿನ ತಮ್ಮ ಪಾತ್ರಕ್ಕೆ ಪ್ರೀತಿ ಮತ್ತು ಬೆಂಬಲ ನೀಡಿದ ವೀಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ.ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್: ಬಡ್ಡಿ ಬಂಗಾರಮ್ಮ ಅವತಾರದಲ್ಲಿ ಭೂಮಿಕಾಅಮೃತಧಾರೆ: ಕ್ಯಾನ್ಸರ್ ವಿರುದ್ಧ ಗೆದ್ದ ಭೂಮಿಕಾ ಮುಖದಲ್ಲಿ ನಗುವಿನ ಹಣತೆ View this post on Instagram ಧಾರಾವಾಹಿಯಲ್ಲಿ ‘ಗೌತಮ್ ದಿವಾನ್’ ಎಂಬ ಪ್ರಮುಖ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ರಾಜೇಶ್, ‘ಶುಕ್ರವಾರ ಅಮೃತಧಾರೆ ಧಾರಾವಾಹಿಯ ಕೊನೆಯ ದಿನದ ಚಿತ್ರೀಕರಣ ಪೂರ್ಣಗೊಂಡಿದೆ. ಪ್ರತಿಯೊಂದಕ್ಕೂ ಮುಕ್ತಾಯದ ದಿನಾಂಕ ಇದ್ದೇ ಇರುತ್ತದೆ. ಅಂತೆಯೇ ಅಮೃತಧಾರೆಗೂ ಅಂತ್ಯದ ಸಮಯ ಬಂದಿದೆ. ಇನ್ನು ಕೆಲವೇ ಕಂತುಗಳು ಬಾಕಿ ಉಳಿದಿದ್ದು, ಯಾರೂ ಬೇಸರ ಮಾಡಿಕೊಳ್ಳಬೇಡಿ’ ಎಂದಿದ್ದಾರೆ.ತಮ್ಮ ಪ್ರಯಾಣದ ಬಗ್ಗೆ ಭಾವುಕರಾದ ಅವರು, ‘ಧಾರಾವಾಹಿಯನ್ನು ನೀವು ಸ್ವೀಕರಿಸಿ ಯಶಸ್ವಿಗೊಳಿಸಿದ ರೀತಿಗೆ ನಾನು ಋಣಿ. ಕಳೆದ ಮೂರೂವರೆ ವರ್ಷಗಳಿಂದ ಗೌತಮ್ ದಿವಾನ್ ಪಾತ್ರಕ್ಕೆ ಜೀವತುಂಬಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಧಾರಾವಾಹಿಯ ಸಮಸ್ತ ತಾಂತ್ರಿಕ ವರ್ಗ, ಕಲಾವಿದರು ಹಾಗೂ ಮುಖ್ಯವಾಗಿ ಭೂಮಿಕಾ ಪಾತ್ರದಲ್ಲಿ ನಟಿಸಿದ ಛಾಯಾ ಸಿಂಗ್ ಅವರಿಗೆ ನನ್ನ ಕೃತಜ್ಞತೆಗಳು. 20 ವರ್ಷಗಳ ನಂತರ ಕಿರುತೆರೆಯಲ್ಲಿ ಇಷ್ಟು ಸುದೀರ್ಘ ಪಯಣ ಮಾಡುತ್ತೇನೆ ಎಂದು ಭಾವಿಸಿರಲಿಲ್ಲ. ಪ್ರೇಕ್ಷಕರು ನನ್ನನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಸಣ್ಣ ಭಯವಿತ್ತು. ಆದರೆ ಜನ ನೀಡಿದ ಅಪಾರ ಪ್ರೀತಿಗೆ ಕೃತಜ್ಞತೆ ತಿಳಿಸಲು ಮಾತುಗಳೇ ಸಾಲುತ್ತಿಲ್ಲ’ ಎಂದು ಹೇಳಿದ್ದಾರೆ.