ಗದಗ | ಇಕ್ಕಟ್ಟಿಗೆ ಸಿಲುಕಿದ ಹೋಟೆಲ್ ಉದ್ಯಮ
ಗದಗ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಹೋಟೆಲ್ ಹಾಗೂ ಬೇಕರಿ ಉದ್ಯಮಿಗಳನ್ನು ಹಾಲು ಹಾಗೂ ಹಾಲಿನ ಉತ್ಪನ್ನಗಳ ದರ ಏರಿಕೆಯು ಇಕ್ಕಟ್ಟಿಗೆ ಸಿಲುಕಿಸಿದೆ. ತಮ್ಮ ಉತ್ಪನ್ನಗಳಿಗೆ ದರ ಹೆಚ್ಚಿಸಲೇ ಬೇಕಾದ ಅನಿವಾರ್ಯತೆ ಒದಗಿದೆ.ಪ್ಯಾಕಿಟ್ನಲ್ಲಿ ಸಿಗುವ ಹಾಲಿನ ದರವನ್ನು ಲೀಟರ್ ₹8ರಿಂದ ₹16ರವರೆಗೆ ಹೆಚ್ಚಿಸಲಾಗಿದೆ. ಗ್ರಾಹಕರಿಗೆ ನೇರವಾಗಿ ಹಾಲು ಮಾರಾಟ ಮಾಡ

ಗದಗ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಹೋಟೆಲ್ ಹಾಗೂ ಬೇಕರಿ ಉದ್ಯಮಿಗಳನ್ನು ಹಾಲು ಹಾಗೂ ಹಾಲಿನ ಉತ್ಪನ್ನಗಳ ದರ ಏರಿಕೆಯು ಇಕ್ಕಟ್ಟಿಗೆ ಸಿಲುಕಿಸಿದೆ. ತಮ್ಮ ಉತ್ಪನ್ನಗಳಿಗೆ ದರ ಹೆಚ್ಚಿಸಲೇ ಬೇಕಾದ ಅನಿವಾರ್ಯತೆ ಒದಗಿದೆ.ಪ್ಯಾಕಿಟ್ನಲ್ಲಿ ಸಿಗುವ ಹಾಲಿನ ದರವನ್ನು ಲೀಟರ್ ₹8ರಿಂದ ₹16ರವರೆಗೆ ಹೆಚ್ಚಿಸಲಾಗಿದೆ. ಗ್ರಾಹಕರಿಗೆ ನೇರವಾಗಿ ಹಾಲು ಮಾರಾಟ ಮಾಡುವ ಹೈನುಗಾರರು ಸಹ ಹಾಲಿನ ದರ ಹೆಚ್ಚಿಸಿದ್ದಾರೆ. ಇದರಿಂದಾಗಿ, ಹಾಲು, ಮೊಸರು, ಬೆಣ್ಣೆ, ತುಪ್ಪ ಬಳಸಿ ಖಾದ್ಯ ತಯಾರಿಸುವ ಹೋಟೆಲ್ ಹಾಗೂ ಬೇಕರಿ ಉದ್ಯಮಗಳಿಗೆ ಹೊರೆಯಾಗಿದೆ. ‘ಹಾಲು ಸೇರಿದಂತೆ ದಿನಸಿ ಸಾಮಗ್ರಿ, ತರಕಾರಿ, ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಯಿಂದ ಹೋಟೆಲ್ ಉದ್ಯಮಕ್ಕೆ ಸಾಕಷ್ಟು ತೊಂದರೆಯಾಗಿದೆ. ಇವುಗಳ ದರ ಏರಿಕೆಯಾಗಿದ್ದಕ್ಕೆ ಒಮ್ಮೆಲೆ ಆಹಾರ ಪದಾರ್ಥಗಳ ದರ ಏರಿಕೆ ಮಾಡಿದರೆ ಗ್ರಾಹಕರು ಹೋಟೆಲ್ಗೆ ಬರುವುದನ್ನೇ ನಿಲ್ಲಿಸುತ್ತಾರೆ. ಹಾಗಾಗಿ, ಸದ್ಯಕ್ಕೆ ದರ ಹೆಚ್ಚಿಸಿಲ್ಲ’ ಎಂದು ನಗರದ ಶ್ರಾವಣಿ ಹೋಟೆಲ್ನ ಜಯಪಾಲ್ ಶೆಟ್ಟಿ ಹೇಳಿದರು.‘ಗದಗದಂತಹ ಸಣ್ಣ ನಗರದಲ್ಲಿ ಹೋಟೆಲ್ಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆ. ದೀಪವಾಳಿ ಸಂದರ್ಭದಲ್ಲಿ ಹೆಚ್ಚು ಜನರು ಬರುತ್ತಿದ್ದರು. ಬರ ಪರಿಸ್ಥಿತಿ ಕಾರಣ ಈ ಬಾರಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಜನ ಬರುತ್ತಿಲ್ಲ. ನಮ್ಮಲ್ಲಿ 15 ಮಂದಿ ಕೆಲಸಗಾರರಿದ್ದು, ಅವರಿಗೆ ವೇತನ, ಹೋಟೆಲ್ ನಿರ್ವಹಣೆ ಕಷ್ಟವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ನಗರದ ಎರಡು ಹೋಟೆಲ್ಗಳಲ್ಲಿ ಕೊಂಚ ದರ ಏರಿಕೆಯಾಗಿದೆ. ಮತ್ತಿತರ ಹೋಟೆಲ್ಗಳಲ್ಲಿ ಇನ್ನೂ ಏರಿಕೆಯಾಗಿಲ್ಲ. ಅಡುಗೆ ಅನಿಲದ ಸಿಲಿಂಡರ್ ದರ ಏರಿಕೆಯಾದಾಗ ಆಹಾರದ ದರ ಹೆಚ್ಚಿಸಲಾಗಿತ್ತು. ಮತ್ತೆ ದರ ಹೆಚ್ಚಿಸಿದರೆ ಗ್ರಾಹಕರನ್ನು ಕಳೆದುಕೊಳ್ಳುವ ಆತಂಕ ಹೋಟೆಲ್ ಉದ್ಯಮಿಗಳದ್ದಾಗಿದೆ’ ಎಂದು ಹೋಟೆಲ್ ಒಡೆಯರ ಸಂಘ ಅಧ್ಯಕ್ಷ ಎಚ್. ವಿಶ್ವನಾಥ ಶೆಟ್ಟಿ ತಿಳಿಸಿದರು.‘ಕೆಲವು ಸ್ಥಳೀಯ ಗ್ರಾಹಕರು ಆಗಾಗ್ಗೆ ಹೋಟೆಲ್ಗಳಿಗೆ ಬರುತ್ತಾರೆ. ಮದುವೆ ಸಂದರ್ಭಗಳ ಹೊರತಾಗಿ ನಗರಕ್ಕೆ ಬರುವವರ ಸಂಖ್ಯೆ ತೀರಾ ಕಡಿಮೆ. ದರ ಏರಿಕೆಯು ಉದ್ಯಮಕ್ಕೆ ಇನ್ನಷ್ಟು ತೊಂದರೆ ಉಂಟುಮಾಡಿದೆ. ಆಹಾರದ ದರ ಏರಿಸಿದರೂ ಜನರಿಗೆ ಮನವರಿಕೆ ಮಾಡಿಕೊಡುವುದು ಸವಾಲಿನ ಕೆಲಸ’ ಎಂದು ವಿವರಿಸಿದರು. ಹೋಟೆಲ್ ಒಡೆಯರ ಸಂಘದಲ್ಲಿ 30 ಸದಸ್ಯರು ಬೀದಿಬದಿ ಆಹಾರ ಮಾರಾಟಗಾರರಿಗೂ ಸಂಕಷ್ಟ ಸೂಕ್ತ ಕ್ರಮ ವಹಿಸಲು ಸರ್ಕಾರಕ್ಕೆ ಆಗ್ರಹರಾಜಶೇಖರ ಹಿರೇಮಠ ಸ್ಥಳೀಯ ನಿವಾಸಿಉತ್ತರ ಕರ್ನಾಟಕದ ಮಂದಿ ಚಹಾ ಕುಡಿಯವುದು ಹೆಚ್ಚು. ಈಗ ಅದಕ್ಕೂ ಯೋಚನೆ ಮಾಡುವಂತಾಗಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ ‘ಮುಂದಿನ ವಾರದಿಂದ ದರ ಹೆಚ್ಚಳ’ ಹಾಲು ತುಪ್ಪ ಬೆಣ್ಣೆ ಸೇರಿದಂತೆ ಹಾಲಿನ ಉಪ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಬೇಕರಿ ಉದ್ಯಮದಾರರೂ ಬೆಲೆ ಏರಿಕೆಯಿಂದ ನಲುಗುವಂತಾಗಿದೆ. ಮುಂದಿನ ವಾರದಿಂದ ಸಿಹಿ ತಯಾರಕರು ದರ ಹೆಚ್ಚಿಸಲು ನಿರ್ಧರಿಸಿರುವುದರಿಂದ ಅವರಿಂದ ಖಾದ್ಯಗಳನ್ನು ಖರೀದಿಸುವ ಕೆಲವು ಬೇಕರಿಯವರು ದರ ಹೆಚ್ಚಿಸುವು ಅನಿವಾರ್ಯ ಎನ್ನುತ್ತಾರೆ ಬೇಕರಿ ಉದ್ಯಮದಾರರೂ. ‘ಈಚೆಗಷ್ಟೇ ಸಕ್ಕರೆ ತುಪ್ಪದ ದರ ಏರಿಕೆಯಾಯಿತು. ಈಗ ಹಾಲಿನ ದರ ಹೆಚ್ಚಳವಾಗಿದೆ. ಒಮ್ಮೆಲೆ ದರ ಏರಿಸಿದರೆ ಗ್ರಾಹಕರು ಹೌಹಾರುತ್ತಾರೆ. ಅವರ ವಿಶ್ವಾಸ ಕಳೆದುಕೊಂಡರೆ ದೈನಂದಿನ ವ್ಯವಹಾರ ನಡೆಸುವುದು ಕಷ್ಟ. ಹಬ್ಬದ ಸಂದರ್ಭವಾದ್ದರಿಂದ ದರ ಹೆಚ್ಚಳದ ಬಗ್ಗೆ ನಿರ್ಧರಿಸಿಲ್ಲ. ಅನಿವಾರ್ಯವಾದರೆ ಹೆಚ್ಚಳ ಮಾಡಬೇಕಾಗುತ್ತದೆ’ ಎಂದು ಸಾಸನೂರ ಬೇಕರಿಯ ಶ್ರಿಕಾಂತ್ ತಿಳಿಸಿದರು.