ಸ್ಟ್ರಿಂಗ್ ಆಪರೇಷನ್; ಸಿದ್ದರಾಮಯ್ಯರಿಂದ ರಾಹುಲ್ ಗಾಂಧಿಗೆ ಮಾಹಿತಿ: ಯತೀಂದ್ರ
ಮೈಸೂರು: ‘ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ದೆಹಲಿಯಲ್ಲಿ ಈಚೆಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ವೇಳೆ ಸ್ಟ್ರಿಂಗ್ ಆಪರೇಷನ್ ಕುರಿತು ತಮ್ಮ ವಿಚಾರ ಏನಿತ್ತೋ ಅದನ್ನು ಹೇಳಿದ್ದಾರೆ’ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಇಲ್ಲಿ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ‘ರಾಹುಲ್ ಗಾಂಧಿ
ಮೈಸೂರು: ‘ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ದೆಹಲಿಯಲ್ಲಿ ಈಚೆಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ವೇಳೆ ಸ್ಟ್ರಿಂಗ್ ಆಪರೇಷನ್ ಕುರಿತು ತಮ್ಮ ವಿಚಾರ ಏನಿತ್ತೋ ಅದನ್ನು ಹೇಳಿದ್ದಾರೆ’ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಇಲ್ಲಿ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ‘ರಾಹುಲ್ ಗಾಂಧಿ ಭೇಟಿಗೆ ನಾನು ತಂದೆಯ ಜೊತೆ ಹೋಗಿದ್ದು, ಕುಶಲೋಪರಿ ವಿಚಾರಿಸಿ ಹೊರಬಂದೆ. ತಂದೆ ಒಬ್ಬರೇ ಅವರೊಟ್ಟಿಗೆ ಮಾತನಾಡಿದರು. ಹೀಗಾಗಿ ಏನು ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ’ ಎಂದರು.‘ಸ್ಟ್ರಿಂಗ್ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ತಾಳ್ಮೆಯಿಂದ ಕಾಯುತ್ತೇವೆ. ಆರೋಪಿಗಳ ವಿರುದ್ಧ ಕ್ರಮ ಆಗುತ್ತದೆ ಎಂಬ ನಂಬಿಕೆ ಇದೆ’ ಎಂದರು. ಯಾರು ಕಟ್ಟಿಸಿದ್ದರೂ ಜನರದ್ದೇ ಹಣ‘ಮೈಸೂರು ಅರಮನೆ ಕಟ್ಟಿಸಿರುವುದು ಮಹಾರಾಜರೇ. ಆದರೆ, ಮಹಾರಾಜರೇ ಕಟ್ಟಿಸಲಿ, ಸರ್ಕಾರವೇ ಕಟ್ಟಿಸಲಿ. ಅದಕ್ಕೆ ಬಳಸುವುದು ಜನರ ತೆರಿಗೆಯ ಹಣ. ಹೀಗಾಗಿ ಎಲ್ಲವೂ ಕೂಡ ಜನರ ಸ್ವತ್ತೇ. ಸರ್ಕಾರ ದಸರಾ ನಡೆಸುವುದು ಜನರಿಗಾಗಿ. ರಾಜವಂಶಸ್ಥರು ಯಾವಾಗಲೂ ಅದಕ್ಕೆ ಸಹಕಾರ ನೀಡುತ್ತ ಬಂದಿದ್ದಾರೆ. ಈ ಮಧ್ಯೆ ಸ್ವಲ್ಪ ಗೊಂದಲವಾಗಿದೆ. ಅದನ್ನು ಮಾತುಕತೆ ಮೂಲಕ ಬಗೆಹರಿಸುವುದಾಗಿ ಮುಖ್ಯಮಂತ್ರಿ ಈಗಾಗಲೇ ಹೇಳಿದ್ದಾರೆ’ ಎಂದರು.‘ಸಿಂಹಾಸನ, ಅಂಬಾರಿ ರಾಜವಂಶಸ್ಥರ ಆಸ್ತಿಯೇ. ಅದು ಸರ್ಕಾರದ್ದು ಎಂದು ನಾನು ಎಲ್ಲಿಯೂ ಹೇಳಿಲ್ಲ. ನಾವು ಬಾಡಿಗೆ ಕೊಡುತ್ತೇವೆ ಎಂದು ಹೇಳಿದ್ದೆ. ಅವರು ಅದನ್ನು ಗೌರವಧನ ಎಂದು ಹೇಳಿದ್ದಾರೆ. ಇದರಲ್ಲಿ ಅಂತಹ ವ್ಯತ್ಯಾಸವೇನೂ ಇಲ್ಲ’ ಎಂದು ಹೇಳಿದರು. ಮಹದೇವಪ್ಪ ಜೊತೆ ಮುನಿಸಿಲ್ಲ‘ಸಿದ್ದರಾಮಯ್ಯ– ಎಚ್.ಸಿ. ಮಹದೇವಪ್ಪ ನಡುವಿನ ಸಂಬಂಧ ಚೆನ್ನಾಗಿದೆ. ನಾನು ಕಳೆದ ವಾರ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದೇನೆ. ಇದೇ ತಿಂಗಳ 26ರಂದು ಮೈಸೂರಿನಲ್ಲಿ ನಡೆಯಲಿರುವ ಸಂವಿಧಾನ ದಿನಾಚರಣೆಯಲ್ಲಿ ಭಾಗಿಯಾಗುವಂತೆ ಕೋರಿದ್ದೇನೆ. ಮಹದೇವಪ್ಪ ಪ್ರತ್ಯೇಕ ಕಾರ್ಯಕ್ರಮ ಮಾಡುತ್ತಿಲ್ಲ. ಸಂಘಟನೆಗಳು ಮಾಡಬಹುದು, ಅದರಲ್ಲಿ ಭಾಗಿಯಾಗುವುದಿಲ್ಲ. ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ಅವರು ಹೇಳಿದ್ದಾರೆ’ ಎಂದರು.