ಮಂಡ್ಯದಿಂದ ಪೋಲೆಂಡ್ವರೆಗೆ: ಜಾಗತಿಕ ವೇದಿಕೆಯಲ್ಲಿ ಸಚಿನ್ ಪಾರ್ಥ ಸಾಧನೆ
ಮಂಡ್ಯದ ಕೆ.ಆರ್. ಪೇಟೆಯಲ್ಲಿ ಹುಟ್ಟಿ, ಮೈಸೂರಿನಲ್ಲಿ ಶಿಕ್ಷಣ ಪಡೆದು, ಏರೋಸ್ಪೇಸ್ ಎಂಜಿನಿಯರಿಂಗ್ನಿಂದ ವೃತ್ತಿಜೀವನ ಆರಂಭಿಸಿದ ಸಚಿನ್ ಪಾರ್ಥ ಇಂದು ಪೋಲೆಂಡ್ನಿಂದ ಅಂತರರಾಷ್ಟ್ರೀಯ ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. 38ಕ್ಕೂ ಹೆಚ್ಚು ದೇಶಗಳಲ್ಲಿ ವೃತ್ತಿಪರ ಅನುಭವ ಹೊಂದಿರುವ ಸಚಿನ್, ಭಾರತ–ಪೋಲೆಂಡ್ ನಡುವಿನ ಉದ್ಯಮ ಸಂಬಂಧಗಳನ್ನು
ಮಂಡ್ಯದ ಕೆ.ಆರ್. ಪೇಟೆಯಲ್ಲಿ ಹುಟ್ಟಿ, ಮೈಸೂರಿನಲ್ಲಿ ಶಿಕ್ಷಣ ಪಡೆದು, ಏರೋಸ್ಪೇಸ್ ಎಂಜಿನಿಯರಿಂಗ್ನಿಂದ ವೃತ್ತಿಜೀವನ ಆರಂಭಿಸಿದ ಸಚಿನ್ ಪಾರ್ಥ ಇಂದು ಪೋಲೆಂಡ್ನಿಂದ ಅಂತರರಾಷ್ಟ್ರೀಯ ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. 38ಕ್ಕೂ ಹೆಚ್ಚು ದೇಶಗಳಲ್ಲಿ ವೃತ್ತಿಪರ ಅನುಭವ ಹೊಂದಿರುವ ಸಚಿನ್, ಭಾರತ–ಪೋಲೆಂಡ್ ನಡುವಿನ ಉದ್ಯಮ ಸಂಬಂಧಗಳನ್ನು ಬೆಸೆಯುವ ಕಾರ್ಯದಲ್ಲೂ ಸಕ್ರಿಯರಾಗಿದ್ದಾರೆ. ಅಂತರರಾಷ್ಟ್ರೀಯ ಉದ್ಯಮ ನಿಯೋಗಗಳಲ್ಲಿ ಭಾರತದ ಪರವಾಗಿ ಪಾಲ್ಗೊಳ್ಳುವುದರ ಜತೆಗೆ, ಪೋಲೆಂಡ್ನಲ್ಲಿ ಕನ್ನಡ ಶಾಲೆ ಆರಂಭಿಸಿ ಅಲ್ಲಿನ ಮಕ್ಕಳಿಗೆ ಕನ್ನಡ ಕಲಿಸುವ ಮೂಲಕ ಭಾಷೆಯೊಂದಿಗಿನ ತಮ್ಮ ನಂಟನ್ನೂ ಮುಂದುವರಿಸಿದ್ದಾರೆ.ಕತಾರಿನಲ್ಲಿ ಕನ್ನಡದ ಸಾಂಸ್ಕೃತಿಕ ಗುರುತು ಮೂಡಿಸಿದ ಸುಬ್ರಹ್ಮಣ್ಯ ಹೆಬ್ಬಾಗಿಲು ಮೈಸೂರಿನ ವೆಸ್ಟ್ ಲಯನ್ಸ್ ಸೇವಾನಿಕೇತನ ಶಾಲೆ ಹಾಗೂ ಮರಿಮಲ್ಲಪ್ಪ ಪ್ರೌಢಶಾಲೆಯಲಿ ಶಿಕ್ಷಣ ಪಡೆದ ಬಳಿಕ, ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ ವಿಮಾನ ಸಂಶೋಧನೆ ಮತ್ತು ವಿನ್ಯಾಸ ಕೇಂದ್ರ, ಮುಂಬೈನ ಏರ್ ಇಂಡಿಯಾ ಹಾಗೂ ತನೇಜಾ ಏರೋಸ್ಪೇಸ್ ಸಂಸ್ಥೆಗಳಲ್ಲಿ ತರಬೇತಿ ಮತ್ತು ಪ್ರಾಯೋಗಿಕ ಅನುಭವ ಪಡೆದರು. ಬೆಂಗಳೂರಿನ ಜೆನ್ಸರ್ ಏರೋಸ್ಪೇಸ್ನಲ್ಲಿ ವಿನ್ಯಾಸ ಎಂಜಿನಿಯರ್ ಆಗಿಯೂ ಕಾರ್ಯನಿರ್ವಹಿಸಿದರು.2014ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಪೋಲೆಂಡ್ನ ವಾರ್ಸಾ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ತೆರಳಿದರು. ಅಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದ ಅವರು, ಯುರೋಪಿಯನ್ ನೆಟ್ವರ್ಕ್ ಆಫ್ ಎಕ್ಸಲೆನ್ಸ್ ಇನ್ ಏರೋಸ್ಪೇಸ್ ಎಂಜಿನಿಯರಿಂಗ್ ಎಜುಕೇಷನ್ನ ಪೆಗಾಸಸ್ ಪ್ರಮಾಣಪತ್ರವನ್ನೂ ಗಳಿಸಿದರು. ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಆರಂಭವಾದ ಅವರ ವೃತ್ತಿಜೀವನ ಕ್ರಮೇಣ ತಂತ್ರಜ್ಞಾನ ಸಲಹೆ, ಅಂತರರಾಷ್ಟ್ರೀಯ ಮಾರಾಟ ಮತ್ತು ಉದ್ಯಮ ಅಭಿವೃದ್ಧಿಯತ್ತ ವಿಸ್ತರಿಸಿತು.ಪ್ರಸ್ತುತ ಟ್ರಾನ್ಸಿಷನ್ ಟೆಕ್ನಾಲಜೀಸ್–ಅಡ್ವಾನ್ಸ್ಡ್ ಸೊಲ್ಯೂಷನ್ಸ್ ಸಂಸ್ಥೆಯಲ್ಲಿ ಮಾರಾಟ ನಿರ್ದೇಶಕರಾಗಿರುವ ಸಚಿನ್, ಇಂಧನ, ವಿದ್ಯುತ್ ಮತ್ತು ಕೈಗಾರಿಕಾ ವಲಯದ ಸಂಸ್ಥೆಗಳಿಗೆ ಆಧುನಿಕ ತಂತ್ರಜ್ಞಾನ ಪರಿಹಾರಗಳನ್ನು ಒದಗಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಂತ್ರೋಪಕರಣಗಳ ನಿರ್ವಹಣೆ, ಉತ್ಪಾದನಾ ದಕ್ಷತೆ ಮತ್ತು ಇಂಧನ ಬಳಕೆಯ ಸುಧಾರಣೆಗೆ ಕೃತಕ ಬುದ್ಧಿಮತ್ತೆ (ಎಐ) ಆಧರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು ಅವರ ಕಾರ್ಯಕ್ಷೇತ್ರದ ಪ್ರಮುಖ ಭಾಗವಾಗಿದೆ.ಕೈಗಾರಿಕೆಗಳಲ್ಲಿ ಎಐ ಪರಿಣಾಮಕಾರಿಯಾಗಿ ಬಳಕೆಯಾಗಬೇಕಾದರೆ ಅದನ್ನು ಎಂಜಿನಿಯರಿಂಗ್ ಪರಿಣತಿ ಮತ್ತು ವಿಶ್ವಾಸಾರ್ಹ ದತ್ತಾಂಶದೊಂದಿಗೆ ಸಂಯೋಜಿಸಬೇಕು ಎಂಬುದು ಅವರ ಅಭಿಪ್ರಾಯ. ಯಂತ್ರೋಪಕರಣಗಳಲ್ಲಿ ಉಂಟಾಗಬಹುದಾದ ದೋಷಗಳನ್ನು ಮುಂಚಿತವಾಗಿ ಗುರುತಿಸುವುದು, ನಿರ್ವಹಣಾ ವೆಚ್ಚ ತಗ್ಗಿಸುವುದು ಹಾಗೂ ಉತ್ಪಾದನಾ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವಲ್ಲಿ ಇಂತಹ ತಂತ್ರಜ್ಞಾನಗಳು ನೆರವಾಗುತ್ತವೆ. ಭಾರತದಲ್ಲಿ 20ಕ್ಕೂ ಹೆಚ್ಚು ವಿಶ್ಲೇಷಣಾ ಯೋಜನೆಗಳ ಗುತ್ತಿಗೆ ಪಡೆಯುವಲ್ಲಿ ಅವರು ಪಾತ್ರ ವಹಿಸಿದ್ದು, ಎನ್ಟಿಪಿಸಿ ಸೇರಿದಂತೆ ಪ್ರಮುಖ ಸಂಸ್ಥೆಗಳ ಯೋಜನೆಗಳೂ ಇದರಲ್ಲಿವೆ.ವಿದೇಶಿ ನೆಲದಲ್ಲಿ ಕನ್ನಡದ ಅಕ್ಷರ ಕೃಷಿ: ಯು.ಕೆ.ಯಲ್ಲಿ ಸಾಹಿತ್ಯದ ಕಂಪುಭಾರತ–ಪೋಲೆಂಡ್ ಉದ್ಯಮ ಸಂಬಂಧಕ್ಕೆ ಕೊಂಡಿಸಚಿನ್ ಅವರ ವೃತ್ತಿಪರ ಚಟುವಟಿಕೆಗಳು ಒಂದು ಸಂಸ್ಥೆಯ ವ್ಯವಹಾರಕ್ಕೆ ಸೀಮಿತವಾಗಿಲ್ಲ. ಭಾರತ ಮತ್ತು ಪೋಲೆಂಡ್ ನಡುವಿನ ವಾಣಿಜ್ಯ ಹಾಗೂ ತಂತ್ರಜ್ಞಾನ ಸಹಕಾರವನ್ನು ವಿಸ್ತರಿಸುವ ಕೆಲಸದಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಇಂಡೋ–ಪೋಲಿಷ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಎರಡೂ ದೇಶಗಳ ಉದ್ಯಮಗಳ ನಡುವೆ ಸಂಪರ್ಕ ಕಲ್ಪಿಸುತ್ತಿದ್ದಾರೆ. ಉದ್ಯಮ ನಿಯೋಗಗಳ ಭೇಟಿ, ಹೂಡಿಕೆ ಮಾತುಕತೆ, ತಂತ್ರಜ್ಞಾನ ಪಾಲುದಾರಿಕೆ ಮತ್ತು ಸಂಸ್ಥೆಗಳ ನಡುವಿನ ಸಹಕಾರಕ್ಕೆ ವೇದಿಕೆ ರೂಪಿಸುವುದು ಅವರ ಜವಾಬ್ದಾರಿಯಾಗಿದೆ.ಭಾರತದ ವಿಶಾಲ ಮಾರುಕಟ್ಟೆ, ನುರಿತ ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನ ಸಾಮರ್ಥ್ಯ ಹಾಗೂ ಪೋಲೆಂಡ್ನ ಸುಧಾರಿತ ಉತ್ಪಾದನಾ ವ್ಯವಸ್ಥೆ, ಎಂಜಿನಿಯರಿಂಗ್ ಪರಿಣತಿ ಮತ್ತು ಯುರೋಪಿನ ಮಾರುಕಟ್ಟೆ ಪ್ರವೇಶದ ಅವಕಾಶಗಳನ್ನು ಪರಸ್ಪರ ಬೆಸೆಯುವ ಸಾಧ್ಯತೆಗಳಿವೆ. ವಿಶೇಷವಾಗಿ ಕರ್ನಾಟಕದ ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಕೈಗಾರಿಕಾ ಯಾಂತ್ರೀಕರಣ, ನವೀಕರಿಸಬಹುದಾದ ಇಂಧನ ಮತ್ತು ಪರಿಸರ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳಿಗೆ ಯುರೋಪಿನ ಮಾರುಕಟ್ಟೆಯಲ್ಲಿ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಕರ್ನಾಟಕದ ಉದ್ಯಮಗಳನ್ನು ಪೋಲೆಂಡ್ನ ಕಂಪನಿಗಳೊಂದಿಗೆ ಸಂಪರ್ಕಿಸುವ ಪ್ರಯತ್ನದಲ್ಲಿದ್ದಾರೆ.2025ರ ಬೆಂಗಳೂರು ಟೆಕ್ ಸಮಿಟ್ನಲ್ಲಿ ಜಾಗತಿಕ ಮೈತ್ರಿ ಪಾಲುದಾರರಾಗಿ ಭಾಗವಹಿಸಿದ್ದ ಸಚಿನ್, 'ಐಟಿ ಮತ್ತು ಇತರ ಕ್ಷೇತ್ರಗಳಲ್ಲಿ ಪೋಲೆಂಡ್ ವಿಶ್ವಾಸಾರ್ಹ ಉದ್ಯಮ ಪಾಲುದಾರ' ಎಂಬ ಅಧಿವೇಶನದಲ್ಲಿ ಮಾತನಾಡಿದ್ದರು. ಭಾರತ–ಪೋಲೆಂಡ್ ನಡುವಿನ ತಂತ್ರಜ್ಞಾನ ಮತ್ತು ಉದ್ಯಮ ಸಹಕಾರದ ಸಾಧ್ಯತೆಗಳನ್ನು ಅಲ್ಲಿ ಪ್ರಸ್ತಾಪಿಸಿದ್ದರು.2026ರ ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ನಲ್ಲಿ ಪೋಲೆಂಡ್ನ ಡಿಜಿಟಲ್ ವ್ಯವಹಾರಗಳ ಸಚಿವಾಲಯದ ಉಪಸಚಿವ ರಫಾಲ್ ರೋಸಿನ್ಸ್ಕಿ ನೇತೃತ್ವದ ಅಧಿಕೃತ ನಿಯೋಗದ ಭಾಗವಾಗಿ ಪಾಲ್ಗೊಂಡಿದ್ದರು. ಜವಾಬ್ದಾರಿಯುತ ಎಐ ಬಳಕೆ, ಡಿಜಿಟಲ್ ಪರಿವರ್ತನೆ ಮತ್ತು ಸೈಬರ್ ಭದ್ರತೆ ಕುರಿತ ಚರ್ಚೆಗಳಲ್ಲಿ ಭಾಗವಹಿಸಿದ್ದರು.2026ರ ಅಕ್ಟೋಬರ್ನಲ್ಲಿ ಭಾರತಕ್ಕೆ ಭೇಟಿ ನೀಡಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರೊಂದಿಗೆ ಆಗಮಿಸಿದ್ದ ಉದ್ಯಮ ನಿಯೋಗದಲ್ಲಿಯೂ ಸಚಿನ್ ಸ್ಥಾನ ಪಡೆದಿದ್ದರು. ಪೋಲೆಂಡ್ನ ಹಣಕಾಸು ಮತ್ತು ಆರ್ಥಿಕ ಸಚಿವ ಆಂಡ್ರೆಜ್ ಡೊಮಾನ್ಸ್ಕಿ ಅವರೂ ಈ ನಿಯೋಗದಲ್ಲಿದ್ದರು. ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಉದ್ಯಮ ಸಭೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರವನ್ನು ಪ್ರತಿನಿಧಿಸಿ ಮಾತನಾಡಿದ ಸಚಿನ್, ವಿದ್ಯುತ್ ಮತ್ತು ಯುಟಿಲಿಟಿ ವಲಯದಲ್ಲಿ ಎಐ ಬಳಕೆ, ಯಂತ್ರೋಪಕರಣಗಳ ನಿರ್ವಹಣೆ ಹಾಗೂ ಕೈಗಾರಿಕಾ ದಕ್ಷತೆ ಹೆಚ್ಚಿಸುವ ತಂತ್ರಜ್ಞಾನಗಳ ಕುರಿತು ತಮ್ಮ ಸಂಸ್ಥೆಯ ಅನುಭವ ಹಂಚಿಕೊಂಡಿದ್ದರು. ಈವರೆಗೆ 80ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಉದ್ಯಮ ನಿಯೋಗಗಳಲ್ಲಿ ಭಾಗವಹಿಸಿದ್ದಾರೆ.ಬ್ರಿಟನ್ನಲ್ಲಿ ಯಕ್ಷಗಾನದ ಚೆಂಡೆ–ಮದ್ದಳೆ: ಕರಾವಳಿಯ ಗಂಡುಕಲೆಗೆ ಹೊಸ ಮೆರುಗು ಪರಿಸರ ತಂತ್ರಜ್ಞಾನದಲ್ಲಿಯೂ ತೊಡಗಿಸಿಕೊಳ್ಳುವಿಕೆಕೈಗಾರಿಕಾ ತಂತ್ರಜ್ಞಾನದ ಜತೆಗೆ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿಯೂ ಸಚಿನ್ ಕಾರ್ಯನಿರ್ವಹಿಸುತ್ತಿದ್ದಾರೆ. ಟಿ ಗ್ಲೋಬಲ್ ಕನ್ಸಲ್ಟೆಂಟ್ಸ್ ಸಂಸ್ಥೆಯ ಮಂಡಳಿ ಸದಸ್ಯ ಹಾಗೂ ಎಐ ಪರಿಹಾರಗಳ ಸಲಹೆಗಾರರಾಗಿ ನೀರು ನಿರ್ವಹಣೆ, ತ್ಯಾಜ್ಯ ಸಂಸ್ಕರಣೆ ಮತ್ತು ಪರಿಸರ ಸಂರಕ್ಷಣೆಗೆ ತಂತ್ರಜ್ಞಾನ ಬಳಕೆಯ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.ನೀರಿನ ಗುಣಮಟ್ಟದ ಮೇಲ್ವಿಚಾರಣೆ, ತ್ಯಾಜ್ಯನೀರಿನ ಸಂಸ್ಕರಣೆಯ ದಕ್ಷತೆ ಹೆಚ್ಚಿಸುವುದು ಮತ್ತು ಇಂಧನ ಬಳಕೆ ತಗ್ಗಿಸುವ ಉದ್ದೇಶದಿಂದ ಸಂವೇದಕಗಳು, ಯಾಂತ್ರೀಕರಣ, ಎಐ ಹಾಗೂ ದತ್ತಾಂಶ ವಿಶ್ಲೇಷಣೆಯಂತಹ ತಂತ್ರಜ್ಞಾನಗಳನ್ನು ಬಳಸುವ ಪರಿಹಾರಗಳ ಕುರಿತು ಕೆಲಸ ಮಾಡುತ್ತಿದ್ದಾರೆ. ಯುರೋಪಿನಲ್ಲಿ ಬಳಕೆಯಲ್ಲಿರುವ ಇಂತಹ ತಂತ್ರಜ್ಞಾನಗಳನ್ನು ಸ್ಥಳೀಯ ಅಗತ್ಯಗಳಿಗೆ ಹೊಂದಿಸಿಕೊಂಡು ಕರ್ನಾಟಕದಲ್ಲಿಯೂ ಅಳವಡಿಸುವ ಸಾಧ್ಯತೆಗಳ ಬಗ್ಗೆ ಅವರು ಆಸಕ್ತಿ ಹೊಂದಿದ್ದಾರೆ.ವಾರ್ಸಾದಲ್ಲಿ ಕನ್ನಡ ಕಲಿಕೆಯ ಹೊಸ ಪ್ರಯತ್ನಜಾಗತಿಕ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಗುರುತು ಮೂಡಿಸಿರುವ ಸಚಿನ್, ಪೋಲೆಂಡ್ನ ಕನ್ನಡಿಗರ ಸಂಘದ ಅಧ್ಯಕ್ಷರಾಗಿ ಭಾಷೆ ಮತ್ತು ಸಂಸ್ಕೃತಿಯ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಪೋಲೆಂಡ್ನಲ್ಲಿ ನೆಲೆಸಿರುವ ಕನ್ನಡಿಗರನ್ನು ಒಗ್ಗೂಡಿಸುವುದರ ಜತೆಗೆ ಕನ್ನಡ ರಾಜ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಕ್ಕಳಿಗೆ ಕನ್ನಡ ಕಲಿಸುವ ಪ್ರಯತ್ನಗಳಿಗೆ ನೇತೃತ್ವ ನೀಡುತ್ತಿದ್ದಾರೆ.ವಿದೇಶದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರಚಾರಕ್ಕಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರನ್ನು ಸನ್ಮಾನಿಸಲಾಗಿತ್ತು. ‘ಹುಟ್ಟಿ ಬೆಳೆದ ಜಿಲ್ಲೆಯಲ್ಲಿಯೇ ಈ ಗೌರವ ದೊರೆತಿರುವುದು ವಿಶೇಷ ಸಂತಸ ತಂದಿದೆ. ಈ ಸನ್ಮಾನವನ್ನು ವೈಯಕ್ತಿಕ ಸಾಧನೆಗಿಂತ ಪೋಲೆಂಡ್ನ ಕನ್ನಡಿಗರ ಒಗ್ಗಟ್ಟಿನ ಪ್ರಯತ್ನಕ್ಕೆ ದೊರೆತ ಮನ್ನಣೆ ಎಂದು ಭಾವಿಸುವೆ‘ ಎಂದರು ಅವರು.ಏರೋಸ್ಪೇಸ್ ಎಂಜಿನಿಯರಿಂಗ್ನಿಂದ ಅಂತರರಾಷ್ಟ್ರೀಯ ತಂತ್ರಜ್ಞಾನ ಕ್ಷೇತ್ರದವರೆಗೆ, ಉದ್ಯಮ ಪಾಲುದಾರಿಕೆಯಿಂದ ಪರಿಸರ ತಂತ್ರಜ್ಞಾನದವರೆಗೆ ಸಚಿನ್ ಅವರ ವೃತ್ತಿಪಯಣ ವಿಸ್ತರಿಸಿದೆ. 38ಕ್ಕೂ ಹೆಚ್ಚು ದೇಶಗಳ ಅನುಭವದೊಂದಿಗೆ ಜಾಗತಿಕ ಉದ್ಯಮ ವೇದಿಕೆಗಳಲ್ಲಿ ಗುರುತಿಸಿಕೊಂಡಿರುವ ಅವರು, ಪೋಲೆಂಡ್ನಲ್ಲಿ ಕನ್ನಡ ಶಾಲೆ ಆರಂಭಿಸುವ ಮೂಲಕ ಅಲ್ಲಿನ ಮುಂದಿನ ಪೀಳಿಗೆಗೆ ಕನ್ನಡ ಕಲಿಸುವ ಪ್ರಯತ್ನಕ್ಕೂ ನೇತೃತ್ವ ನೀಡಿದ್ದಾರೆ. ಅಂತರರಾಷ್ಟ್ರೀಯ ವೃತ್ತಿಜೀವನದ ನಡುವೆಯೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗಾಗಿ ಅವರು ಕೈಗೊಂಡಿರುವ ಈ ಕೆಲಸವೇ ಅವರ ಸಾಧನೆಯ ಪಯಣಕ್ಕೆ ಮತ್ತೊಂದು ಆಯಾಮ ನೀಡಿದೆ.ವಿದೇಶದಲ್ಲಿ ಕನ್ನಡದ ಅಕ್ಷರಲೋಕ: ಸಾಗರದಾಚೆ ಕನ್ನಡಿಗರ ಬೆಸೆಯುವ 'ಗಲ್ಫ್ ಇಶಾರ'