ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ:ಹಿಮಾಂಶಿಗೆ ಪ್ರಶಸ್ತಿ ‘ಟ್ರಿಪಲ್’
ಪ್ರಜಾವಾಣಿ ವಾರ್ತೆಬೆಂಗಳೂರು: ಗೆಲುವಿನ ಓಟ ಮುಂದುವರಿಸಿದ ಭರವಸೆಯ ಆಟಗಾರ್ತಿ ಹಿಮಾಂಶಿ ಚೌಧರಿ ಅವರು ಕಬ್ಬನ್ಪಾರ್ಕ್ನ ಕೆ.ಜಿ.ಎಸ್ ಕ್ಲಬ್ನಲ್ಲಿ ಶನಿವಾರ ಮುಕ್ತಾಯವಾದ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡರು. ಅದರೊಂದಿಗೆ, ಟೂರ್ನಿಯಲ್ಲಿ ‘ಪ್ರಶಸ್ತಿ ಟ್ರಿಪಲ್’ ಸಾಧಿಸಿದರು.ಬೆಂಗಳೂರು ಜಿಲ್ಲಾ ಟೇಬಲ್

ಪ್ರಜಾವಾಣಿ ವಾರ್ತೆಬೆಂಗಳೂರು: ಗೆಲುವಿನ ಓಟ ಮುಂದುವರಿಸಿದ ಭರವಸೆಯ ಆಟಗಾರ್ತಿ ಹಿಮಾಂಶಿ ಚೌಧರಿ ಅವರು ಕಬ್ಬನ್ಪಾರ್ಕ್ನ ಕೆ.ಜಿ.ಎಸ್ ಕ್ಲಬ್ನಲ್ಲಿ ಶನಿವಾರ ಮುಕ್ತಾಯವಾದ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡರು. ಅದರೊಂದಿಗೆ, ಟೂರ್ನಿಯಲ್ಲಿ ‘ಪ್ರಶಸ್ತಿ ಟ್ರಿಪಲ್’ ಸಾಧಿಸಿದರು.ಬೆಂಗಳೂರು ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಯೋಜಿಸಿದ್ದ ಈ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಅಭಿನವ್ ಕೆ. ಮೂರ್ತಿ ಗೆದ್ದುಕೊಂಡರು.ಮ್ಯಾರಥಾನ್ನಂತೆ ಸಾಗಿದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಹಿಮಾಂಶಿ 11–8, 6–11, 5–11, 8–11, 11–7, 11–8, 13–11ರಿಂದ ದೇಶ್ನಾ ಎಂ. ವಂಶಿಕಾ ವಿರುದ್ಧ ರೋಚಕ ಜಯ ಸಾಧಿಸಿದರು.ಸೆಮಿಫೈನಲ್ ಪಂದ್ಯಗಳಲ್ಲಿ ದೇಶ್ನಾ 12–10, 11–7, 13–15, 11–8, 11–9ರಿಂದ ತೃಪ್ತಿ ಪುರೋಹಿತ್ ವಿರುದ್ಧ ಮತ್ತು ಹಿಮಾಂಶಿ 11–4, 12–10, 11–4, 13–11ರಿಂದ ಖುಷಿ ವಿ. ಎದುರು ಗೆಲುವು ಸಾಧಿಸಿದ್ದರು.ಅಭಿನವ್ ಅವರು ಫೈನಲ್ ಹಣಾಹಣಿಯಲ್ಲಿ 12–10, 7–11, 11–8, 12–10, 11–8ರಿಂದ ಆಕಾಶ್ ಕೆ.ಜೆ. ವಿರುದ್ಧ ಗೆಲುವು ಸಾಧಿಸಿದರು. ನಾಲ್ಕರ ಘಟ್ಟದ ರೋಚಕ ಪಂದ್ಯದಲ್ಲಿ ಆಕಾಶ್ 11–7, 11–13, 2–11, 9–11, 11–7, 11–4, 11–8ರಿಂದ ಯಶವಂತ್ ಪಿ. ವಿರುದ್ಧ ಜಯಿಸಿದರೆ, ಅಭಿನವ್ 11–7, 12–10, 11–4, 7–11, 11–9ರಿಂದ ಶುಭಂ ತ್ರಿವೇದಿ ಅವರನ್ನು ಸೋಲಿಸಿದರು.ಅರ್ಣವ್ಗೆ ಕಿರೀಟ: ನಾನ್–ಮೆಡಲಿಸ್ಟ್ ಸಿಂಗಲ್ಸ್ನಲ್ಲಿ ಅರ್ಣವ್ ಮಿಥುನ್ ಚಾಂಪಿಯನ್ ಆದರು. ಫೈನಲ್ನಲ್ಲಿ 11-9, 6-11, 13-11, 11-2ರಿಂದ ಮೋಹಿತ್ ದೀಪಕ್ ಬೆಳವಾಡಿ ವಿರುದ್ಧ ಜಯಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ಅರ್ಣವ್ 11–3, 11–8, 11–9ರಿಂದ ಮಿಹಿಕಾ ಉಡುಪ ವಿರುದ್ಧ ಮತ್ತು ಮೋಹಿತ್ 11–9, 10–12, 9–11, 11–8, 11–8ರಿಂದ ಅವ್ಧಿ ರಾಂಕಾ ವಿರುದ್ಧ ಗೆದ್ದಿದ್ದರು.