ಭಾರತಕ್ಕೆ ಆಸರೆಯಾದ ವರುಣ; ಕಿವೀಸ್ ವಿರುದ್ಧ ಗಿಲ್ ಪಡೆಗೆ 4 ರನ್ಗಳ ಜಯ
– ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ವೆಲ್ಲಿಂಗ್ಟನ್: ಶನಿವಾರ ವೆಲ್ಲಿಂಗ್ಟನ್ನಲ್ಲಿ ನಡೆದ, ಮಳೆಯಿಂದಾಗಿ ಅಡಚಣೆಗೊಳಗಾದ ರೋಚಕ ಎರಡನೇ ಏಕದಿನ ಪಂದ್ಯದಲ್ಲಿ ಭಾರತ (Team India) ತಂಡವು ಡಿಎಲ್ಎಸ್ ನಿಯಮದ ಅನ್ವಯ ನ್ಯೂಜಿಲೆಂಡ್ (New Zealand) ವಿರುದ್ಧ 4 ರನ್ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂ

– ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ವೆಲ್ಲಿಂಗ್ಟನ್: ಶನಿವಾರ ವೆಲ್ಲಿಂಗ್ಟನ್ನಲ್ಲಿ ನಡೆದ, ಮಳೆಯಿಂದಾಗಿ ಅಡಚಣೆಗೊಳಗಾದ ರೋಚಕ ಎರಡನೇ ಏಕದಿನ ಪಂದ್ಯದಲ್ಲಿ ಭಾರತ (Team India) ತಂಡವು ಡಿಎಲ್ಎಸ್ ನಿಯಮದ ಅನ್ವಯ ನ್ಯೂಜಿಲೆಂಡ್ (New Zealand) ವಿರುದ್ಧ 4 ರನ್ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವನ್ನು ಭಾರತದ ವೇಗದ ಬೌಲರ್ಗಳು ಕೇವಲ 134 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದರು. ಗುರ್ನೂರ್ ಬ್ರಾರ್ ನಾಲ್ಕು ವಿಕೆಟ್ಗಳನ್ನು ಕಬಳಿಸಿ ಮಿಂಚಿದರೆ, ಆಕಿಬ್ ನಬಿ, ಅಂಶುಲ್ ಕಂಬೋಜ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ಗಳನ್ನು ಪಡೆದರು. ನ್ಯೂಜಿಲೆಂಡ್ ಪರ ಡೇರಿಲ್ ಮಿಚೆಲ್ ಹೋರಾಟದ ಅರ್ಧಶತಕವನ್ನು ದಾಖಲಿಸಿದರು. ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ಗೆ ಟೀಂ ಇಂಡಿಯಾದ ಬೆಂಕಿ ಬೌಲರ್ ಶಮಿ ಗುಡ್ಬೈ ಇದಕ್ಕೆ ಪ್ರತಿಯಾಗಿ, ಭಾರತದ ಆರಂಭ ಕೂಡ ಕಳಪೆಯಾಗಿತ್ತು. ನಾಯಕ ಶುಭಮನ್ ಗಿಲ್ ಮೊದಲ ಎಸೆತದಲ್ಲೇ (ಗೋಲ್ಡನ್ ಡಕ್) ಔಟಾದರು. ವಿರಾಟ್ ಕೊಹ್ಲಿ ಕೇವಲ 7 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ನಿಯಮಿತ ಅಂತರದಲ್ಲಿ ವಿಕೆಟ್ಗಳು ಬೀಳುತ್ತಿದ್ದರೂ, ರೋಹಿತ್ ಶರ್ಮಾ (23), ಶ್ರೇಯಸ್ ಅಯ್ಯರ್ (30) ಮತ್ತು ಕೆ.ಎಲ್.ರಾಹುಲ್ (26*) ಅವರ ಉಪಯುಕ್ತ ಕೊಡುಗೆಗಳಿಂದ ಭಾರತವು 26 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು. ಈ ನಡುವೆ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಅಂತಿಮವಾಗಿ ಡಿಎಲ್ಎಸ್ ನಿಯಮದ ಅನ್ವಯ ನ್ಯೂಜಿಲೆಂಡ್ ವಿರುದ್ಧ ಭಾರತ 4 ರನ್ಗಳ ಜಯ ಸಾಧಿಸಿತು. ಈ ಫಲಿತಾಂಶದೊಂದಿಗೆ, ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-0 ಅಂತರದ ಮುನ್ನಡೆ ಸಾಧಿಸಿದೆ. ಇದನ್ನೂ ಓದಿ: ಒಬ್ಬ ಆಟಗಾರನಿಗೆ 40 ಕೋಟಿ ಡಿಮ್ಯಾಂಡ್ – ಐಪಿಎಲ್ನ ಸ್ಟಾರ್ ಆಟಗಾರರಿಂದ ಫ್ರಾಂಚೈಸಿಗಳಿಗೆ ಬಿಗ್ ಶಾಕ್?