PHOTOS: ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ರಣಬೀರ್ ಕಪೂರ್–ಆಲಿಯಾ ಭಟ್ ಜೋಡಿ
ಬಾಲಿವುಡ್ ತಾರಾ ಜೋಡಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ದಂಪತಿ ತಮ್ಮ ಮುದ್ದಿನ ಮಗಳು ರಾಹಾಳ 4ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ನವೆಂಬರ್ 6ರಂದು ನಡೆದ ಹುಟ್ಟುಹಬ್ಬದ ಫೋಟೊಗಳನ್ನು ನಟಿ ಆಲಿಯಾ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಹಸಿರು ಹುಲ್ಲುಹಾಸಿನ ಮೇಲೆ ಆಟವಾಡುತ್ತಿರುವ ಕ್ಷಣಗಳು, ಬಣ್ಣ ಬಣ್ಣದ ಕಾಮನಬಿಲ್ಲು ಚಿತ್ರಗಳಿಗೆ

ಬಾಲಿವುಡ್ ತಾರಾ ಜೋಡಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ದಂಪತಿ ತಮ್ಮ ಮುದ್ದಿನ ಮಗಳು ರಾಹಾಳ 4ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ನವೆಂಬರ್ 6ರಂದು ನಡೆದ ಹುಟ್ಟುಹಬ್ಬದ ಫೋಟೊಗಳನ್ನು ನಟಿ ಆಲಿಯಾ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಹಸಿರು ಹುಲ್ಲುಹಾಸಿನ ಮೇಲೆ ಆಟವಾಡುತ್ತಿರುವ ಕ್ಷಣಗಳು, ಬಣ್ಣ ಬಣ್ಣದ ಕಾಮನಬಿಲ್ಲು ಚಿತ್ರಗಳಿಗೆ ಬಣ್ಣ ತುಂಬುವುದು ಹಾಗೂ ಕ್ಯಾಂಪರ್ ವ್ಯಾನ್ ಥೀಮ್ ಅಲಂಕಾರದ ನಡುವೆ ಮಗಳನ್ನು ಅಪ್ಪಿ ಮುದ್ದಾಡುತ್ತಿರುವ ಚಿತ್ರಗಳನ್ನು ಆಲಿಯಾ ಪೋಸ್ಟ್ ಮಾಡಿದ್ದಾರೆ. View this post on Instagram 2022ರಲ್ಲಿ ಜನಿಸಿದ ರಾಹಾ ಇದೀಗ 4ನೇ ವರ್ಷಕ್ಕೆ ಕಾಲಿಟ್ಟಿದ್ದು, ಕುಟುಂಬದ ಈ ಸರಳ ಹಾಗೂ ಸುಂದರ ಹುಟ್ಟುಹಬ್ಬದ ಆಚರಣೆ ಅಭಿಮಾನಿಗಳ ಮನ ಗೆದ್ದಿದೆ. ಹೂವಿನ ವಿನ್ಯಾಸದ ಸುಂದರ ಗೌನ್ ಧರಿಸಿದ್ದ ರಾಹಾಳ ಮುದ್ದಾದ ಲುಕ್ ಮತ್ತು ಕಪೂರ್ ಕುಟುಂಬದ ಈ ಸಂಭ್ರಮದ ಕ್ಷಣಗಳಿಗೆ ಜಾಲತಾಣಗಳಲ್ಲಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Read the complete story at Prajavani