ತೂಕ ಇಳಿಸುವ ಭರದಲ್ಲಿ ಸ್ನಾಯುಗಳನ್ನು ಕಳೆದುಕೊಳ್ಳಬೇಡಿ
ತೂಕ ಇಳಿಸಿಕೊಳ್ಳಬೇಕು ಎಂದು ನಿರ್ಧರಿಸಿದ ತಕ್ಷಣ ಬಹುತೇಕರು ಏನೇನೋ ಸರ್ಕಸ್ ಆರಂಭಿಸಿ, ಬೆಳಗ್ಗೆದ್ದ ತಕ್ಷಣ ತೂಕದ ಯಂತ್ರದ ಮೇಲೆ ನಿಲ್ಲಲು ಆರಂಭಿಸುತ್ತಾರೆ. ಎಲ್ಲವೂ ಆರಂಭದಲ್ಲಿ ರಿಸಲ್ಟ್ ಕೊಟ್ಟಂತಯೇ ಅನ್ನಿಸುತ್ತದೆ. ಏಕೆಂದರೆ ತೂಕದ ಯಂತ್ರದ ಮೇಲೆ ನಿಲ್ಲುತ್ತಿದ್ದಂತೆಯೇ ಒಂದೆರಡು ಕೆ.ಜಿ. ಕಡಿಮೆಯಾಗಿರುತ್ತದೆ. ಅದನ್ನೇ ವೇಟ್ ಲಾಸ್ ಅಂದುಕೊಂಡು ಖಷಿಪಡುತ್ತೇವೆ.

ತೂಕ ಇಳಿಸಿಕೊಳ್ಳಬೇಕು ಎಂದು ನಿರ್ಧರಿಸಿದ ತಕ್ಷಣ ಬಹುತೇಕರು ಏನೇನೋ ಸರ್ಕಸ್ ಆರಂಭಿಸಿ, ಬೆಳಗ್ಗೆದ್ದ ತಕ್ಷಣ ತೂಕದ ಯಂತ್ರದ ಮೇಲೆ ನಿಲ್ಲಲು ಆರಂಭಿಸುತ್ತಾರೆ. ಎಲ್ಲವೂ ಆರಂಭದಲ್ಲಿ ರಿಸಲ್ಟ್ ಕೊಟ್ಟಂತಯೇ ಅನ್ನಿಸುತ್ತದೆ. ಏಕೆಂದರೆ ತೂಕದ ಯಂತ್ರದ ಮೇಲೆ ನಿಲ್ಲುತ್ತಿದ್ದಂತೆಯೇ ಒಂದೆರಡು ಕೆ.ಜಿ. ಕಡಿಮೆಯಾಗಿರುತ್ತದೆ. ಅದನ್ನೇ ವೇಟ್ ಲಾಸ್ ಅಂದುಕೊಂಡು ಖಷಿಪಡುತ್ತೇವೆ. ಆದರೆ, ಇಲ್ಲಿ ಒಂದು ಮುಖ್ಯವಾದ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ನಾವು ಕಳೆದುಕೊಳ್ಳುತ್ತಿರುವುದು ಕೇವಲ ದೇಹದ ಕೊಬ್ಬನ್ನೇ? ಅಥವಾ ಕೊಬ್ಬಿನ ಜತೆಗೆ ಸ್ನಾಯುಗಳನ್ನೂ ಕಳೆದುಕೊಳ್ಳುತ್ತಿದ್ದೇವೆಯೇ?ತೂಕ ಇಳಿಸುವ ಪ್ರಯತ್ನದಲ್ಲಿ ಬಹಳಷ್ಟು ಮಂದಿ ಗಮನಿಸದೆ ಬಿಡುವ ಒಂದು ಪ್ರಮುಖ ಅಂಶವೇ ಫ್ಯಾಟ್ಫ್ರೀ ಮಾಸ್ (Fat-Free Mass). ದೇಹದ ಆರೋಗ್ಯ, ಶಕ್ತಿ, ಚಯಾಪಚಯ ಕ್ರಿಯೆ ಮತ್ತು ವಯಸ್ಸಾದಂತೆ ನಮ್ಮ ಚಟುವಟಿಕೆಗಳನ್ನು ಕಾಪಾಡಿಕೊಳ್ಳುವಲ್ಲಿ ಇದಕ್ಕೆ ಮಹತ್ವದ ಪಾತ್ರವಿದೆ. ಹಾಗಾದರೆ, ಫ್ಯಾಟ್ಫ್ರೀ ಮಾಸ್ ಎಂದರೇನು? ಇದನ್ನು ಕಾಪಾಡಿಕೊಳ್ಳುವುದು ಏಕೆ ಮುಖ್ಯ? ಬನ್ನಿ, ತಿಳಿದುಕೊಳ್ಳೋಣ.ತಿಂದುಂಡು ಸುಖವಾಗಿ: ಏನು ಮಾಡಿದ್ರೂ ತೂಕ ಇಳೀತಿಲ್ವೇ ? ಈ ಸಮಸ್ಯೆ ಇರಬಹುದು ನೋಡಿತಿಂದುಂಡು ಸುಖವಾಗಿ| ಮೈಗೆ ಒಳ್ಳೆದಲ್ಲ ಮೈದಾ; ಇದನ್ನು ತಿಂದರೆ ದಪ್ಪ ಆಗೋದು ನಿಜವೇ? ಕೊಬ್ಬು ಬಿಟ್ಟರೆ ಇರೋದೇ ಫ್ಯಾಟ್ಫ್ರೀ ಮಾಸ್!ಸರಳವಾಗಿ ಹೇಳುವುದಾದರೆ, ನಮ್ಮ ದೇಹದ ಒಟ್ಟು ತೂಕದಿಂದ ಕೊಬ್ಬಿನ ತೂಕವನ್ನು ತೆಗೆದುಹಾಕಿದರೆ ಉಳಿಯುವ ಭಾಗವೇ ಫ್ಯಾಟ್ಫ್ರೀ ಮಾಸ್. ಇದರಲ್ಲಿ ಸ್ನಾಯುಗಳು, ಮೂಳೆಗಳು, ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡಗಳಂತಹ ಅಂಗಾಂಗಗಳು, ರಕ್ತ ಮತ್ತು ದೇಹದಲ್ಲಿರುವ ನೀರು ಸೇರಿವೆ. ಉದಾಹರಣೆಗೆ, ಒಬ್ಬ ವ್ಯಕ್ತಿಯ ದೇಹದ ತೂಕ 70 ಕೆ.ಜಿ. ಇದೆ ಎಂದುಕೊಳ್ಳಿ. ಅವರ ದೇಹದಲ್ಲಿ 21 ಕೆ.ಜಿ. ಕೊಬ್ಬು ಇದ್ದರೆ, ಉಳಿದ 49 ಕೆ.ಜಿ. ಫ್ಯಾಟ್ಫ್ರೀ ಮಾಸ್ ಆಗಿರುತ್ತದೆ. ಇಲ್ಲಿ ಒಂದು ವಿಷಯ ನೆನಪಿಡಬೇಕು. ಫ್ಯಾಟ್ಫ್ರೀ ಮಾಸ್ ಎಂದರೆ ಕೇವಲ ಸ್ನಾಯುಗಳಲ್ಲ. ಸ್ನಾಯುಗಳು ಅದರ ಪ್ರಮುಖ ಭಾಗವಾಗಿದ್ದರೂ, ದೇಹದ ಇತರ ಕೊಬ್ಬುರಹಿತ ಅಂಗಾಂಶಗಳೂ ಇದರಲ್ಲಿ ಸೇರಿವೆ.ಇದನ್ನು ಇನ್ನೊಂದು ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು. ನಮ್ಮ ದೇಹವನ್ನು ಒಂದು ಮನೆಯೆಂದು ಕಲ್ಪಿಸಿಕೊಳ್ಳಿ. ಮನೆಯ ಗೋಡೆ, ಕಂಬ, ಅಡಿಪಾಯ ಮತ್ತು ಇತರ ರಚನೆಗಳು ಮನೆಯ ಗಟ್ಟಿತನಕ್ಕೆ ಕಾರಣವಾಗುತ್ತವೆ. ಹಾಗೆಯೇ ದೇಹದ ಸ್ನಾಯುಗಳು, ಮೂಳೆಗಳು ಮತ್ತು ಅಂಗಾಂಗಗಳು ಅದರ ರಚನೆ ಹಾಗೂ ಕಾರ್ಯಕ್ಷಮತೆಯನ್ನು ಕಾಪಾಡುತ್ತವೆ. ದೇಹದಲ್ಲಿನ ಕೊಬ್ಬು ಮತ್ತೊಂದು ಪ್ರತ್ಯೇಕ ಭಾಗ. ದೇಹಕ್ಕೆ ಅಗತ್ಯವಾದ ಪ್ರಮಾಣದ ಕೊಬ್ಬು ಬೇಕೇ ಬೇಕು. ಆದರೆ, ಅನಗತ್ಯ ಕೊಬ್ಬು ಹೆಚ್ಚಾಗದಂತೆ ನೋಡಿಕೊಳ್ಳುವುದರ ಜತೆಗೆ ದೇಹದ ರಚನೆಯನ್ನು ಬಲವಾಗಿರಿಸಿಕೊಳ್ಳುವುದೂ ಅಷ್ಟೇ ಮುಖ್ಯ.ತೂಕ ಕಡಿಮೆಯಾದರೆ ಆರೋಗ್ಯ ಸುಧಾರಿಸಿದಂತೆಯೇ?ಇಲ್ಲೊಂದು ಸಣ್ಣ ಉದಾಹರಣೆ ಗಮನಿಸಿ. ಇಬ್ಬರು ವ್ಯಕ್ತಿಗಳು ತೂಕ ಇಳಿಸಿಕೊಳ್ಳಲು ಆಹಾರ ಕ್ರಮ ಮತ್ತು ವ್ಯಾಯಾಮ ಆರಂಭಿಸುತ್ತಾರೆ. ಇಬ್ಬರೂ ಮೂರು ತಿಂಗಳ ನಂತರ ಐದು ಕೆ.ಜಿ. ತೂಕ ಇಳಿಸಿಕೊಳ್ಳುತ್ತಾರೆ. ತೂಕದ ಯಂತ್ರದ ಪ್ರಕಾರ ಇಬ್ಬರ ಸಾಧನೆಯೂ ಒಂದೇ. ಆದರೆ, ಅವರ ದೇಹದಲ್ಲಿ ಆಗಿರುವ ಬದಲಾವಣೆ ಮಾತ್ರ ಬೇರೆಬೇರೆಯಾಗಿರಬಹುದು.ಮೊದಲ ವ್ಯಕ್ತಿ ಮುಖ್ಯವಾಗಿ ದೇಹದ ಕೊಬ್ಬನ್ನು ಕಳೆದುಕೊಂಡಿದ್ದಾರೆ. ಸ್ನಾಯುಗಳನ್ನು ಬಹುತೇಕ ಉಳಿಸಿಕೊಂಡಿದ್ದಾರೆ. ಎರಡನೆಯ ವ್ಯಕ್ತಿ ಆಹಾರವನ್ನು ವಿಪರೀತವಾಗಿ ಕಡಿಮೆ ಮಾಡಿದ್ದರಿಂದ ಕೊಬ್ಬಿನ ಜತೆಗೆ ಸ್ನಾಯುಗಳನ್ನೂ ಕಳೆದುಕೊಂಡಿದ್ದಾರೆ.ಹೀಗಾಗಿ ಇಬ್ಬರ ತೂಕ ಒಂದೇ ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ, ಮೊದಲ ವ್ಯಕ್ತಿಯ ದೇಹದ ಸಂಯೋಜನೆ ಹೆಚ್ಚು ಆರೋಗ್ಯಕರವಾಗಿರಬಹುದು. ಎರಡನೆಯ ವ್ಯಕ್ತಿಗೆ ದೈಹಿಕ ಶಕ್ತಿ ಕಡಿಮೆಯಾಗುವುದು, ಸುಸ್ತು, ವ್ಯಾಯಾಮದ ಸಾಮರ್ಥ್ಯ ಕುಸಿಯುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.ಇದರಿಂದ ತಿಳಿಯುವುದೇನೆಂದರೆ, ತೂಕ ಇಳಿಸುವುದಷ್ಟೇ ಮುಖ್ಯವಲ್ಲ; ಯಾವ ಪ್ರಮಾಣದಲ್ಲಿ ಕೊಬ್ಬು ಕಡಿಮೆಯಾಗುತ್ತಿದೆ ಮತ್ತು ಸ್ನಾಯುಗಳು ಎಷ್ಟರಮಟ್ಟಿಗೆ ಉಳಿಯುತ್ತಿವೆ ಎನ್ನುವುದೂ ಮುಖ್ಯ.ತಿಂದುಂಡು ಸುಖವಾಗಿ | ಒಂದೇ ತಿಂಗಳು ಸಕ್ಕರೆ ಸೇವನೆ ಬಿಡಿ: ಏನೆಲ್ಲ ಬದಲಾವಣೆ ಸಾಧ್ಯತಿಂದುಂಡು ಸುಖವಾಗಿ: ರುಚಿ ಕಡಿಮೆಯಾಗದಂತೆ ಉಪ್ಪು ಕಡಿಮೆ ಮಾಡೋದೇಗೆ? ಉಪಾಯ ಇಲ್ಲಿದೆ ಸ್ನಾಯುಗಳೇ ನಮ್ಮ ಶಕ್ತಿಕೇಂದ್ರಗಳು!ಸ್ನಾಯುಗಳು ಎಂದರೆ ಕೇವಲ ದೇಹಕ್ಕೆ ಆಕಾರ ಕೊಡುವ ಅಂಗಾಂಶಗಳಲ್ಲ. ಅವು ನಮ್ಮ ದೇಹದ ಚಟುವಟಿಕೆಗಳ ಹಿಂದಿರುವ ಶಕ್ತಿಕೇಂದ್ರಗಳೂ ಹೌದು. ನಡೆಯುವುದು, ಓಡುವುದು, ಮೆಟ್ಟಿಲು ಹತ್ತುವುದು, ಕುಳಿತು ಏಳುವುದು, ವಸ್ತುಗಳನ್ನು ಎತ್ತುವುದು ಹೀಗೆ ನಾವು ಪ್ರತಿದಿನ ಮಾಡುವ ಬಹುತೇಕ ಕೆಲಸಗಳಿಗೆ ಸ್ನಾಯುಗಳ ನೆರವು ಬೇಕು.ಇದರ ಜತೆಗೆ ಸ್ನಾಯುಗಳು ರಕ್ತದಲ್ಲಿನ ಸಕ್ಕರೆಯ ನಿಯಂತ್ರಣದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ. ನಾವು ಸೇವಿಸುವ ಆಹಾರದಿಂದ ದೊರೆಯುವ ಗ್ಲೂಕೋಸ್ ಅನ್ನು ಸ್ನಾಯುಗಳು ಶಕ್ತಿಗಾಗಿ ಬಳಸುತ್ತವೆ. ಹೀಗಾಗಿ ಸ್ನಾಯುಗಳ ಆರೋಗ್ಯ ಉತ್ತಮವಾಗಿದ್ದರೆ ಇನ್ಸುಲಿನ್ ಸಂವೇದನಾಶೀಲತೆ ಸುಧಾರಿಸಲು ನೆರವಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಅನುಕೂಲಕರ.ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಸ್ನಾಯುಗಳು ವಿಶ್ರಾಂತಿಯ ಸಂದರ್ಭದಲ್ಲಿಯೂ ಶಕ್ತಿಯನ್ನು ಬಳಸುತ್ತವೆ. ಅಂದರೆ, ನಾವು ಕುಳಿತಿರುವಾಗ ಅಥವಾ ಮಲಗಿರುವಾಗಲೂ ದೇಹದ ಸ್ನಾಯುಗಳು ನಿರ್ದಿಷ್ಟ ಪ್ರಮಾಣದ ಕ್ಯಾಲೊರಿಗಳನ್ನು ಬಳಸುತ್ತಿರುತ್ತವೆ. ಸ್ನಾಯುಗಳ ಪ್ರಮಾಣ ಹೆಚ್ಚಾದಂತೆ ವಿಶ್ರಾಂತಿಯಲ್ಲಿನ ಶಕ್ತಿಯ ಬಳಕೆಯೂ ಸ್ವಲ್ಪ ಹೆಚ್ಚಾಗುತ್ತದೆ. ಆದರೆ, ಇದರಿಂದ ಚಯಾಪಚಯ ಕ್ರಿಯೆಯಲ್ಲಿ ಆಗುವ ಬದಲಾವಣೆ ದೊಡ್ಡ ಪ್ರಮಾಣದ್ದಾಗಿರುತ್ತದೆ ಎಂದು ಭಾವಿಸಬಾರದು.ಹಾಗಾದರೆ, ಸ್ನಾಯುಗಳನ್ನು ಬಲವಾಗಿರಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಇನ್ನೇನು ಪ್ರಯೋಜನಗಳಿವೆ? ಫ್ಯಾಟ್ಫ್ರೀ ಮಾಸ್ ಹೆಚ್ಚಿಸಿಕೊಳ್ಳಲು ಯಾವ ಆಹಾರ ಸೇವಿಸಬೇಕು? ಯಾವ ವ್ಯಾಯಾಮ ಮಾಡಬೇಕು? ಮುಂದಿನ ಕಂತಿನಲ್ಲಿ ನೋಡೋಣ.ತಿಂದುಂಡು ಸುಖವಾಗಿ: ಮಂಡಿ, ಬೆನ್ನು ನೋವೇ? ಮಾತ್ರೆ ನುಂಗುವ ಮೊದಲು ಇಷ್ಟು ಮಾಡಿತಿಂದುಂಡು ಸುಖವಾಗಿ | ಕೂದಲಿನ ಆರೈಕೆ; ಅಜ್ಜಿಯ ಕಾಲದ ಸರಳ ಸೂತ್ರಗಳೇ ಸೂಕ್ತವೇ?