ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಕಮಾಲ್: ಎರಡೇ ದಿನಕ್ಕೆ ಗಳಿಸಿದ್ದಿಷ್ಟು
ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ನೂತನ ದಾಖಲೆ ಬರೆದಿದೆ. ನವೆಂಬರ್ 5ರಂದು ತೆರೆಗೆ ಬಂದ ಈ ಚಿತ್ರವು ವಿಶ್ವದಾದ್ಯಂತ ₹221.5 ಕೋಟಿ ಗಳಿಕೆ ಮಾಡಿದೆ.‘ಸ್ಯಾಕ್ನಿಲ್ಕ್’ ಮಾಹಿತಿಯಂತೆ, ಶುಕ್ರವಾರ (ಎರಡನೇ ದಿನ) ಭಾರ

ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ನೂತನ ದಾಖಲೆ ಬರೆದಿದೆ. ನವೆಂಬರ್ 5ರಂದು ತೆರೆಗೆ ಬಂದ ಈ ಚಿತ್ರವು ವಿಶ್ವದಾದ್ಯಂತ ₹221.5 ಕೋಟಿ ಗಳಿಕೆ ಮಾಡಿದೆ.‘ಸ್ಯಾಕ್ನಿಲ್ಕ್’ ಮಾಹಿತಿಯಂತೆ, ಶುಕ್ರವಾರ (ಎರಡನೇ ದಿನ) ಭಾರತದಲ್ಲಿ ₹48.05 ಕೋಟಿ ನಿವ್ವಳ ಗಳಿಕೆ ಮಾಡಿರುವ ಈ ಚಿತ್ರ, ವಿದೇಶಿ ಮಾರುಕಟ್ಟೆಯಿಂದ ₹35 ಕೋಟಿ ಸಂಗ್ರಹಿಸಿದೆ. ಇದರೊಂದಿಗೆ ಸಿನಿಮಾ ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಜಾಗತಿಕವಾಗಿ ಬರೋಬ್ಬರಿ ₹221.05 ಕೋಟಿ ಗಳಿಕೆ ಮಾಡಿದೆ.ಈ ಮೂಲಕ ‘ರಾಮಾಯಣ’ ಸಿನಿಮಾವು ಬಿಡುಗಡೆಯಾದ ಕೇವಲ 2 ದಿನಗಳಲ್ಲಿ ವಿಶ್ವದಾದ್ಯಂತ ₹200 ಕೋಟಿ ಕ್ಲಬ್ ಸೇರಿದ ‘ಪಠಾಣ್’, ‘ಆರ್ಆರ್ಆರ್’, ‘ಪುಷ್ಪ 2’, ‘ಜೈಲರ್ 2’ ಹಾಗೂ ‘ಧುರಂಧರ್ 2’ ಸಿನಿಮಾಗಳ ಸಾಲಿಗೆ ಹೆಮ್ಮೆಯಿಂದ ಸೇರ್ಪಡೆಗೊಂಡಿದೆ.ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಸಿನಿಮಾದಲ್ಲಿ ರವಿ ದುಬೆ, ಸನ್ನಿ ಡಿಯೋಲ್, ಅರುಣ್ ಗೋವಿಲ್, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್ ಹಾಗೂ ಕುನಾಲ್ ಕಪೂರ್ ಸೇರಿದಂತೆ ಬೃಹತ್ ತಾರಾಗಣವಿದೆ.