ಐದು ಲೆವೆಲ್ ಕ್ರಾಸಿಂಗ್ ತೆರವಿಗೆ ಗುತ್ತಿಗೆ
ಬೆಂಗಳೂರು: ಬೆಂಗಳೂರು ಉಪನಗರ ಸಾರಿಗೆ ಯೋಜನೆಯ (ಬಿಎಸ್ಟಿಪಿ) ನಾಲ್ಕನೇ ಕಾರಿಡಾರ್ನಲ್ಲಿ ಒಟ್ಟು ಐದು ಲೆವೆಲ್ ಕ್ರಾಸಿಂಗ್ ತೆರವುಗೊಳಿಸಲು ಎಸ್ವಿ ಕನ್ಸ್ಟ್ರಕ್ಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್– ಎಸ್ಎಲ್ಎನ್ಎಸ್ ಅರ್ಥ್ ಮೂವರ್ಸ್ ಆ್ಯಂಡ್ ಕಾಂಟ್ರಾಕ್ಟರ್ಸ್ (ಎಸ್ಎಸ್ವಿವೈ-ಎಸ್ಎಲ್ಎನ್ಎಸ್) ಜಂಟಿ ಉದ್ಯಮಕ್ಕೆ ಗುತ್ತಿಗೆ ನೀಡಲಾಗಿದೆ.ಬೆಂಗಳೂರು ಇಂಟಿಗ್

ಬೆಂಗಳೂರು: ಬೆಂಗಳೂರು ಉಪನಗರ ಸಾರಿಗೆ ಯೋಜನೆಯ (ಬಿಎಸ್ಟಿಪಿ) ನಾಲ್ಕನೇ ಕಾರಿಡಾರ್ನಲ್ಲಿ ಒಟ್ಟು ಐದು ಲೆವೆಲ್ ಕ್ರಾಸಿಂಗ್ ತೆರವುಗೊಳಿಸಲು ಎಸ್ವಿ ಕನ್ಸ್ಟ್ರಕ್ಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್– ಎಸ್ಎಲ್ಎನ್ಎಸ್ ಅರ್ಥ್ ಮೂವರ್ಸ್ ಆ್ಯಂಡ್ ಕಾಂಟ್ರಾಕ್ಟರ್ಸ್ (ಎಸ್ಎಸ್ವಿವೈ-ಎಸ್ಎಲ್ಎನ್ಎಸ್) ಜಂಟಿ ಉದ್ಯಮಕ್ಕೆ ಗುತ್ತಿಗೆ ನೀಡಲಾಗಿದೆ.ಬೆಂಗಳೂರು ಇಂಟಿಗ್ರೇಟೆಡ್ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಎಂಟರ್ಪ್ರೈಸ್ ಲಿಮಿಟೆಡ್ (ಬಿ–ರೈಡ್) ಸಂಸ್ಥೆಯು ಬಿಎಸ್ಟಿಪಿಯ ನಾಲ್ಕು ಕಾರಿಡಾರ್ಗಳನ್ನು ನಿರ್ಮಿಸುತ್ತಿದೆ. ಅದರಲ್ಲಿ ಚಿಕ್ಕಬಾಣಾವರದಿಂದ ಬೆನ್ನಿಗಾನಹಳ್ಳಿಯನ್ನು ಸಂಪರ್ಕಿಸುವ ಕಾರಿಡಾರ್–2ರ (ಮಲ್ಲಿಗೆ ಮಾರ್ಗ) ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಅದರ ಜೊತೆಗೆ ಹೀಲಲಿಗೆ–ರಾಜಾನುಕುಂಟೆ ಸಂಪರ್ಕಿಸುವ ಕಾರಿಡಾರ್–4ರ (ಕನಕ ಮಾರ್ಗ) ಸಿವಿಲ್ ಕಾಮಗಾರಿಗಳೂ ನಡೆಯುತ್ತಿವೆ. ಕೆಲವು ಕಡೆಗಳಲ್ಲಿ ರೈಲ್ವೆ ಹಳಿಯನ್ನು ದಾಟಿ ಹೋಗುವ ರಸ್ತೆಗಳಿವೆ. ಅದಕ್ಕಾಗಿ ಹಿಂದೆ ಲೆವೆಲ್ ಕ್ರಾಸಿಂಗ್ಗಳನ್ನು ನಿರ್ಮಿಸಲಾಗಿತ್ತು. ರೈಲು ಬರುವ ಹೊತ್ತಿನಲ್ಲಿ ಗೇಟ್ ಹಾಕಿ ವಾಹನ ಸಂಚಾರವನ್ನು ತಡೆಯುತ್ತದೆ. ರೈಲು ಸಂಚಾರ ಇಲ್ಲದ ಸಮಯದಲ್ಲಿ ವಾಹನಗಳು ಸಂಚರಿಸುತ್ತವೆ. ಇದು ದಟ್ಟಣೆಯ ಸಮಯದಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತೆ ಮಾಡುತ್ತಿವೆ.ಈ ಲೆವೆಲ್ ಕ್ರಾಸಿಂಗ್ಗಳನ್ನು ತೆರವುಗೊಳಿಸಿ ರಸ್ತೆ ಮೇಲ್ಸೇತುವೆ ಇಲ್ಲವೇ ರಸ್ತೆ ಕೆಳ ಸೇತುವೆ ನಿರ್ಮಿಸುವ ಯೋಜನೆಯನ್ನು ರೈಲ್ವೆ ಹಾಕಿಕೊಂಡಿದ್ದು, ಬೆಂಗಳೂರಿನಲ್ಲಿ ಬಿ–ರೈಡ್ ಈ ಯೋಜನೆಯನ್ನು ಅನುಷ್ಠಾನ ಮಾಡುತ್ತಿದೆ. ಜೊತೆಗೆ ಬಿಎಸ್ಟಿಪಿ ಯೋಜನೆಯನ್ನೂ ನಿರ್ವಹಿಸುತ್ತಿರುವುದರಿಂದ ಬಿಎಸ್ಟಿಪಿ ಕಾರಿಡಾರ್ಗಳು ಸಾಗುವ ಹಾದಿಯಲ್ಲಿರುವ ರೈಲ್ವೆ ಕ್ರಾಸಿಂಗ್ಗಳನ್ನು ಒಟ್ಟೊಟ್ಟಿಗೆ ತೆರವು ಮಾಡುತ್ತಿದೆ.ಕನಕ ಮಾರ್ಗದಲ್ಲಿ ಒಟ್ಟು 16 ಲೆವೆಲ್ ಕ್ರಾಸಿಂಗ್ಗಳಿದ್ದು, ಮೊದಲ ಹಂತದಲ್ಲಿ ಐದು ಲೆವೆಲ್ ಕ್ರಾಸಿಂಗ್ಗಳನ್ನು ತೆರವುಗೊಳಿಸಲು ಎರಡು ಪ್ಯಾಕೇಜ್ಗಳಲ್ಲಿ ಗುತ್ತಿಗೆ ನೀಡಿದೆ. ಪ್ಯಾಕೇಜ್ ಒಂದರಲ್ಲಿ ಎರಡು ರಸ್ತೆ ಮೇಲ್ಸೇತುವೆಗಳು (ಆರ್ಒಬಿ) ಹಾಗೂ ಒಂದು ರಸ್ತೆ ಕೆಳ ಸೇತುವೆ ನಿರ್ಮಾಣಗೊಳ್ಳಲಿದೆ. ಪ್ಯಾಕೇಜ್–2ರಲ್ಲಿ ಎರಡು ರಸ್ತೆ ಮೇಲ್ಸೇತುವೆಗಳು ನಿರ್ಮಾಣಗೊಳ್ಳಲಿವೆ.ಮಹತ್ವದ ಹೆಜ್ಜೆ: ಕಾರಿಡಾರ್-4ರ ಉದ್ದಕ್ಕೂ ಲೆವೆಲ್ ಕ್ರಾಸಿಂಗ್ಗಳನ್ನು ತೆಗೆದುಹಾಕುವ ಮೂಲಕ ರಸ್ತೆ ಮತ್ತು ರೈಲು ಸುರಕ್ಷತೆಯನ್ನು ಸುಧಾರಿಸುವುದು, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಪ್ರಯಾಣಿಕರ ಸುಗಮ ಸಂಚಾರವನ್ನು ಖಚಿತಪಡಿಸಲಾಗುತ್ತಿದೆ. ಇದು ಬಿಎಸ್ಟಿಪಿ ಅಭಿವೃದ್ಧಿಯಲ್ಲಿ ಪ್ರಮುಖ ಹೆಜ್ಜೆಯಾಗಿದ್ದು, ಭೌತಿಕ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಬಿ–ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ತಿಳಿಸಿದ್ದಾರೆ.ಲಕ್ಷ್ಮಣ್ ಸಿಂಗ್ ಲೆವೆಲ್ ಕ್ರಾಸಿಂಗ್ಗಳು ಸಿಂಗೇನ ಅಗ್ರಹಾರ (ಎಲ್ಸಿ–125) ಚಿಂತಲ ಮಡಿವಾಳ (ಎಲ್ಸಿ–126) ಹುಸ್ಕೂರು ನಿಲ್ದಾಣ ಬಳಿ (ಎಲ್ಸಿ–127) ಮೊದಲ ಪ್ಯಾಕೇಜ್ನಲ್ಲಿ ಹಾಗೂ ಕೊಡತಿ (ಎಲ್ಸಿ–130) ಚಿನ್ನಪ್ಪನಹಳ್ಳಿ (134) ಎರಡನೇ ಪ್ಯಾಕೇಜ್ನಲ್ಲಿ ಲೆವೆಲ್ ಕ್ರಾಸಿಂಗ್ಗಳು ತೆರವಾಗಲಿವೆ ಎಂದು ಬಿ–ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ತಿಳಿಸಿದ್ದಾರೆ. ಎರಡು ಪ್ಯಾಕೇಜ್ನ ಈ ಗುತ್ತಿಗೆಯಲ್ಲಿ ಸರ್ವಿಸ್ ರಸ್ತೆಗಳು ಒಳಚರಂಡಿ ನಿರ್ಮಾಣ ಕಾಮಗಾರಿಗಳು ಕೂಡ ಒಳಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.