ಕೊಳ್ಳೇಗಾಲ| ಸಮಸ್ಯೆ ಪರಿಹರಿಸುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ
ಕೊಳ್ಳೇಗಾಲ: ತಾಲ್ಲೂಕಿನ ಸರಗೂರು ಗ್ರಾಮದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಎರಡೂವರೆ ತಡೆ ನಡೆಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಗ್ರಾಮದ ಮುಖ್ಯರಸ್ತೆಯ ಬಳಿ ಸಮಾವೇಶಗೊಂಡ ಗ್ರಾಮಸ್ಥರು ಬಸ್, ಲಾರಿ, ಕಾರು ಹಾಗೂ ಇತರೆ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.ಸರಗೂರು ಗ್ರಾಮದಲ್ಲಿ ಎರಡು ಸಾವಿರ

ಕೊಳ್ಳೇಗಾಲ: ತಾಲ್ಲೂಕಿನ ಸರಗೂರು ಗ್ರಾಮದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಎರಡೂವರೆ ತಡೆ ನಡೆಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಗ್ರಾಮದ ಮುಖ್ಯರಸ್ತೆಯ ಬಳಿ ಸಮಾವೇಶಗೊಂಡ ಗ್ರಾಮಸ್ಥರು ಬಸ್, ಲಾರಿ, ಕಾರು ಹಾಗೂ ಇತರೆ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.ಸರಗೂರು ಗ್ರಾಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ವಾಸವಿದ್ದು, ನಮ್ಮ ಗ್ರಾಮದ ಕೆರೆ ನೀರಿಲ್ಲದೆ ಜಮೀನುಗಳಲ್ಲಿ ವ್ಯವಸಾಯ ಮಾಡಲು ಆಗುತ್ತಿಲ್ಲ. 60 ವರ್ಷಗಳ ಹಿಂದೆ ಕಾವೇರಿ ನದಿಯ ಪಕ್ಕದಲ್ಲಿ ಏತ ನೀರಾವರಿ ಯೋಜನೆ ಸ್ಥಾಪಿತವಾಗಿತ್ತು. ಗ್ರಾಮದ ಅರ್ಧ ಭಾಗದ ಜನರು ಬೆಳೆ ಬೆಳೆಯುತ್ತಿದ್ದರು. ಆದರೆ 35 ವರ್ಷಗಳಿಂದ ಇದು ಸ್ಥಗಿತಗೊಂಡಿದೆ ಹಾಗೂ ಕಬಿನಿ ನಾಲೆಯಿಂದಲೂ ಜಮೀನುಗಳಿಗೆ ಹಾಗೂ ಕೆರೆಗೆ ನೀರು ಬಿಡದೆ ದನ-ಕರುಗಳಿಗೂ ಕುಡಿಯಲು ನೀರಿಲ್ಲ, ವ್ಯವಸಾಯ ಮಾಡಲು ತುಂಬಾ ತೊಂದರೆಯಾಗಿದೆ. ಇನ್ನೂ ಹಲವಾರು ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿದರು.ನಮ್ಮ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ–209 ಹಾದು ಹೋಗಿದೆ. ಪಕ್ಕದಲ್ಲಿ ಶಾಲೆ ಇದ್ದು, ಮಕ್ಕಳು ಓಡಾಡುತ್ತಿರುತ್ತವೆ. ಜನರು ಅಂಗಡಿ ಮುಂಗಟ್ಟುಗಳಿಗೆ ಹೋಗಬೇಕಾಗಿರುತ್ತದೆ. ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಅಪಘಾತ ತಡೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ರಸ್ತೆ ಉಬ್ಬು ನಿರ್ಮಿಸಿಲ್ಲ. ಏತ ನೀರಾವರಿ ಯೋಜನೆ ಮರುಸ್ಥಾಪಿಸಬೇಕು, ಧನಗೆರೆ (ಸರಗೂರು) ಕೆರೆಗೆ ನೀರು ತುಂಬಿಸಬೇಕು, ಮುಜರಾಯಿ ಇಲಾಖೆಗೆ ಸೇರಿದ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ಗ್ರಾಮದವರನ್ನೇ ಅರ್ಚಕರನ್ನಾಗಿ ನೇಮಿಸಬೇಕು, ದೇವರ ಒಡವೆಗಳನ್ನು ಅರ್ಚಕರು ಅವರ ಮನೆಗೆ ತೆಗೆದುಕೊಂಡು ಹೋಗಿದ್ದು, ಅದನ್ನು ಮರಳಿಸುವಂತೆ ಮಾಡಬೇಕು, ಅಗರ ಮದ್ದೂರು ಕೆರೆಗೆ ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು ಕೈಬಿಡುವುದು. ಧನಗೆರೆ ಗ್ರಾಮ ಪಂಚಾಯಿತಿ ಒಬ್ಬರನ್ನು ನೀರು ಘಂಟಿಯನ್ನಾಗಿ(ವಾಟರ್ಮನ್) ನೇಮಿಸಬೇಕು ಎಂದು ಗ್ರಾಮಸ್ಥರು ಹೇಳಿದರು.ಸ್ಥಳಕ್ಕೆ ಭೇಟಿ ನೀಡಿದ ಗ್ರೇಡ್–2 ತಹಶೀಲ್ದಾರ್ ರಮೇಶ್ ಪ್ರತಿಭಟನೆಯನ್ನು ಕೈಬಿಡಿ ನ.18 ರಂದು ಸಭೆ ನಡೆಸಿ ಸರಗೂರು ಗ್ರಾಮದ ಎಲ್ಲ ಸಮಸ್ಯೆಗಳನ್ನು ಪರಿಶೀಲಿಸ ಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಟ್ಟರು. ಸಭೆ ನಡೆಸದಿದ್ದರೆ, 19ರಂದು ಹೋರಾಟ ನಡೆಸಬೇಕಾಗುತ್ತದೆ ಎಚ್ಚರಿಕೆ ನೀಡಿ ಪ್ರತಿಭಟನೆ ಕೈಬಿಟ್ಟರು.ಶಿವಶಂಕರ್, ಶಿವು, ಕಪ್ಪನಪ್ಪ, ಶಿವರುದ್ರಪ್ಪ, ರಾಜಪ್ಪ, ಕೆಂಪರಾಜು, ಸುನೀಲ್, ರಾಚಪ್ಪಸ್ವಾಮಿ, ಚಿನ್ನಸ್ವಾಮಿ, ಪುಟ್ಟಸ್ವಾಮಿ, ಕೆಂಪಯ್ಯ, ಶಿವಮಾದು, ಮಾದೇಗೌಡ, ನಾರಾಯಣ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಇದ್ದರು.261108-37-1868803805