ದೀಪಾವಳಿ ಸ್ಪೆಷಲ್ – ಮನೆಯಲ್ಲಿ ತಯಾರಿಸಿ ಅತಿರಸ…
ದೀಪಾವಳಿಯ ದೀಪಗಳ ಸಾಲು ಕಣ್ಣಿಗೆ ಹಬ್ಬವನ್ನುಂಟು ಮಾಡುವ ಈ ಸಂಭ್ರಮದ ವೇಳೆಯಲ್ಲಿ, ಬಾಯಲ್ಲಿ ನೀರೂರಿಸುವ ಸಿಹಿಯಿಲ್ಲದೆ ಹಬ್ಬದ ಕಳೆ ಅಪೂರ್ಣ. ಹಬ್ಬದ ಮೆರುಗನ್ನು ಇಮ್ಮಡಿಸಲು ಇಲ್ಲೊಂದು ನಾಲಿಗೆ ಚಪ್ಪರಿಸುವಂತಹ ಸ್ಪೆಷಲ್ ಅತಿರಸ ರೆಸಿಪಿಯ ಇಲ್ಲಿದೆ. ಮನೆಯ ಮೂಲೆಮೂಲೆಯಲ್ಲೂ ಹಣತೆಯ ದೀಪಗಳು ಮಿನುಗುತ್ತಾ, ಬಣ್ಣಬಣ್ಣದ ರಂಗೋಲಿಗಳು ಅಂಗಳವನ್ನು ಅಲಂಕರಿಸಿರುವ ದೀಪಾವಳಿಯ ಈ ಪ

ದೀಪಾವಳಿಯ ದೀಪಗಳ ಸಾಲು ಕಣ್ಣಿಗೆ ಹಬ್ಬವನ್ನುಂಟು ಮಾಡುವ ಈ ಸಂಭ್ರಮದ ವೇಳೆಯಲ್ಲಿ, ಬಾಯಲ್ಲಿ ನೀರೂರಿಸುವ ಸಿಹಿಯಿಲ್ಲದೆ ಹಬ್ಬದ ಕಳೆ ಅಪೂರ್ಣ. ಹಬ್ಬದ ಮೆರುಗನ್ನು ಇಮ್ಮಡಿಸಲು ಇಲ್ಲೊಂದು ನಾಲಿಗೆ ಚಪ್ಪರಿಸುವಂತಹ ಸ್ಪೆಷಲ್ ಅತಿರಸ ರೆಸಿಪಿಯ ಇಲ್ಲಿದೆ. ಮನೆಯ ಮೂಲೆಮೂಲೆಯಲ್ಲೂ ಹಣತೆಯ ದೀಪಗಳು ಮಿನುಗುತ್ತಾ, ಬಣ್ಣಬಣ್ಣದ ರಂಗೋಲಿಗಳು ಅಂಗಳವನ್ನು ಅಲಂಕರಿಸಿರುವ ದೀಪಾವಳಿಯ ಈ ಪವಿತ್ರ ದಿನಗಳಲ್ಲಿ, ತಿನಿಸುಗಳ ಘಮಲು ಪ್ರತಿಯೊಬ್ಬರ ಮನಸ್ಸನ್ನು ಸೆಳೆಯುತ್ತದೆ. ಹಬ್ಬದ ಅಡುಗೆ ಮನೆಯಿಂದ ಹೊರಹೊಮ್ಮುವ ಸಾಂಪ್ರದಾಯಿಕ ಸಿಹಿಯ ಸುವಾಸನೆ ಹಬ್ಬದ ಮೌಲ್ಯವನ್ನು ಹೆಚ್ಚಿಸುತ್ತದೆ. ಈ ಬಾರಿಯ ದೀಪಾವಳಿಗೆ ನಿಮ್ಮ ಮನೆಯವರ ಮತ್ತು ಅತಿಥಿಗಳ ಬಾಯಲ್ಲಿ ಸಿಹಿ ತುಂಬಲು ಸಾಂಪ್ರದಾಯಿಕ ಶೈಲಿಯ ‘ಅತಿರಸ’ (ಕಜ್ಜಾಯ) ತಯಾರಿಸುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಅಕ್ಕಿ ಬೆಲ್ಲ ಏಲಕ್ಕಿ ಪುಡಿ ಬಿಳಿ ಎಳ್ಳು ಎಣ್ಣೆ ಅಥವಾ ತುಪ್ಪ ತಯಾರಿಸುವ ವಿಧಾನ: ನೆನೆಸಿ ಒಣಗಿಸಿದ ಅಕ್ಕಿಯನ್ನು ಸ್ವಲ್ಪ ತೇವವಿರುವಾಗಲೇ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟು ಒಣಗಿಹೋಗದಂತೆ ತೇವದ ಬಟ್ಟೆಯಿಂದ ಮುಚ್ಚಿಡಿ. ಒಂದು ಅಗಲವಾದ ಬಾಣಲೆಯಲ್ಲಿ ಪುಡಿ ಮಾಡಿದ ಬೆಲ್ಲ ಮತ್ತು ಅರ್ಧ ಕಪ್ ನೀರು ಹಾಕಿ ಪಾಕ ತಯಾರಿಸಿ. ಬೆಲ್ಲ ಸಂಪೂರ್ಣವಾಗಿ ಕರಗಿ ನೊರೆ ಬರುವತನಕ ಬೇಯಿಸಿ ಪಾಕ ಸರಿಯಾದ ಹಂತಕ್ಕೆ ಬಂದ ಕೂಡಲೇ ಉರಿಯನ್ನು ಸಣ್ಣ ಮಾಡಿ, ಜರಡಿ ಹಿಡಿದ ಅಕ್ಕಿ ಹಿಟ್ಟನ್ನು ಸ್ವಲ್ಪಸ್ವಲ್ಪವಾಗಿ ಹಾಕುತ್ತಾ ಗಂಟು ಬಾರದಂತೆ ಕೈಯಾಡಿಸಿ. ಇದಕ್ಕೆ ಏಲಕ್ಕಿ ಪುಡಿ ಮತ್ತು ಎಳ್ಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಪಾಕ ಮತ್ತು ಹಿಟ್ಟು ಸೇರಿ ಗಟ್ಟಿಯಾದ ಉಂಡೆಯ ಹಂತಕ್ಕೆ ಬರುತ್ತದೆ. ಇದನ್ನು ರಾತ್ರಿ ಪೂರ್ತಿ ಅಥವಾ 2 ದಿನಗಳ ಕಾಲ ಹಾಗೆಯೇ ಬಿಟ್ಟರೆ ಹಿಟ್ಟು ಹದವಾಗುತ್ತದೆ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಲು ಇಡಿ. ಈಗ ಸಿದ್ಧವಾದ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ತೆಗೆದುಕೊಂಡು, ಬಾಳೆಎಲೆ ಅಥವಾ ಎಣ್ಣೆ ಸವರಿದ ಪ್ಲಾಸ್ಟಿಕ್ ಹಾಳೆಯ ಮೇಲೆ ಅಂಗೈಯಿಂದ ತಟ್ಟಿಕೊಳ್ಳಿ. ಕಾಯಿದ ಎಣ್ಣೆಗೆ ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಕಡೆ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿದು ಹೊರತೆಗೆಯಿರಿ. ಈಗ ಬಿಸಿಬಿಸಿಯಾದ, ಹೊರಗೆ ಗರಿಗರಿಯಾದ ಮತ್ತು ಒಳಗೆ ಮೃದುವಾದ ದೀಪಾವಳಿ ಸ್ಪೆಷಲ್ ಅತಿರಸ ಸವಿಯಲು ಸಿದ್ಧ!