ಬೆಳಕಿನ ಹಬ್ಬಕ್ಕೆ ಚಿತ್ತಾಕರ್ಷಕ ರಂಗೋಲಿ
ಬಲಿ ಚಕ್ರವರ್ತಿಯು ಭೂಮಿಯ ಮೇಲಿರುವ ತನ್ನ ಪ್ರೀತಿಯ ಪ್ರಜೆಗಳನ್ನು ನೋಡಲು ಪ್ರತಿವರ್ಷ ಕಾರ್ತೀಕ ಮಾಸದ ಪ್ರತಿಪದೆಯಂದು ಭೂಮಿಗೆ ಆಗಮಿಸುತ್ತಾನೆ ಎಂಬ ನಂಬಿಕೆಯಿಂದ ಆತನನ್ನು ಸ್ವಾಗತಿಸಲು ಹೆಂಗಳೆಯರು ತಮ್ಮ ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ, ಗೋಮಯದಿಂದ ಸಾರಿಸಿ ಬಣ್ಣ ಬಣ್ಣದ ರಂಗೋಲಿ ಹಾಕುವ ಸಂಪ್ರದಾಯ ದೀಪಾವಳಿ ಹಬ್ಬಕ್ಕೆ ಮೆರಗನ್ನು ಉಂಟು ಮಾಡುತ್ತದೆ.ಗೋಮಯದಿಂದ ಬಲಿ ಚಕ

ಬಲಿ ಚಕ್ರವರ್ತಿಯು ಭೂಮಿಯ ಮೇಲಿರುವ ತನ್ನ ಪ್ರೀತಿಯ ಪ್ರಜೆಗಳನ್ನು ನೋಡಲು ಪ್ರತಿವರ್ಷ ಕಾರ್ತೀಕ ಮಾಸದ ಪ್ರತಿಪದೆಯಂದು ಭೂಮಿಗೆ ಆಗಮಿಸುತ್ತಾನೆ ಎಂಬ ನಂಬಿಕೆಯಿಂದ ಆತನನ್ನು ಸ್ವಾಗತಿಸಲು ಹೆಂಗಳೆಯರು ತಮ್ಮ ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ, ಗೋಮಯದಿಂದ ಸಾರಿಸಿ ಬಣ್ಣ ಬಣ್ಣದ ರಂಗೋಲಿ ಹಾಕುವ ಸಂಪ್ರದಾಯ ದೀಪಾವಳಿ ಹಬ್ಬಕ್ಕೆ ಮೆರಗನ್ನು ಉಂಟು ಮಾಡುತ್ತದೆ.ಗೋಮಯದಿಂದ ಬಲಿ ಚಕ್ರವರ್ತಿಯ ಸ್ವರೂಪವನ್ನು ರಚಿಸಿ ಅದನ್ನು ಚೆಂಡು ಹೂಗಳಿಂದ ಅಲಂಕರಿಸಿ ರಂಗೋಲಿಯಿಂದ ಶೃಂಗರಿಸಿದ ಅಂಗಳದಲ್ಲಿಟ್ಟು ಪೂಜಿಸುವ ಪದ್ಧತಿ ಶತ ಶತಮಾನಗಳಿಂದ ನಡೆದುಬಂದಿದೆ.ಕಾರ್ತೀಕ ಮಾಸದ ಆರಂಭದ ವೇಳೆಗೆ ಮಳೆಗಾಲ ಮುಗಿದು, ಸುತ್ತಲಿನ ಪರಿಸರದಲ್ಲಿರುವ ಗಿಡಮರಗಳು ವಿವಿಧ ಹೂಗಳಿಂದ ಕಂಗೊಳಿಸುತ್ತವೆ. ಇಂತಹ ಸಮಯದಲ್ಲಿ ಬರುವ ದೀಪಾವಳಿಗೆ ಹೆಣ್ಣು ಮಕ್ಕಳು ಸ್ಪರ್ಧೆಯ ಮೇಲೆ ತಮ್ಮ ಮನೆಯ ಅಂಗಳಕ್ಕೆ ರಂಗೋಲಿಯಿಂದ ಮೆರಗು ನೀಡುತ್ತಾರೆ. ಈ ರಂಗೋಲಿಯಲ್ಲಿ ಗಿಡಗಳು, ಮರಗಳು, ಹಣ್ಣುಗಳು, ಹೂಗಳು, ಪಕ್ಷಿಗಳು, ವಿವಿಧ ದೇವಿಯರು, ದೀಪಗಳು, ಶಂಖ, ಚಕ್ರ, ಪದ್ಮ, ಸ್ವಸ್ತಿಕ್, ನಕ್ಷತ್ರ, ಸೂರ್ಯ, ಚಂದ್ರರನ್ನು ವಿವಿಧ ಬಣ್ಣಗಳನ್ನು ಬಳಸಿ ರಚಿಸಲಾಗುತ್ತದೆ.ಹಬ್ಬದ ದಿನದಂದು ಇವುಗಳನ್ನು ನೋಡಲು ಮನೆಮನೆಗೆ ಭೇಟಿ ನೀಡಿ ಮೆಚ್ಚುಗೆ ಸೂಚಿಸುವ ಬಾಲಕಿಯರು, ಯುವತಿಯರು, ಮಧ್ಯ ವಯಸ್ಸಿನ ಹೆಣ್ಣು ಮಕ್ಕಳು ಈ ಕಲೆಯನ್ನು ಕಂಡು ಸಂತಸ ಪಡುವ ಸಂದರ್ಭ ದೀಪಾವಳಿ ಹಬ್ಬದಲ್ಲಿ ಕಂಡು ಬರುತ್ತದೆ.‘ಮನೆಯ ಮುಂದೆ ಹಾಗೂ ದೇವರ ಮನೆಯಲ್ಲಿ ವಿವಿಧ ಆಕಾರದ ರಂಗೋಲಿ ಬಿಡಿಸುವುದು ಭಾರತೀಯ ಪರಂಪರೆಯಲ್ಲಿರುವ ಒಂದು ಜಾನಪದ ಕಲೆ. ಈ ಕಲೆಯನ್ನು ತಾಯಂದಿರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸುತ್ತಾರೆ. ಕಾರ್ತೀಕ ಮಾಸದ 30 ದಿನಗಳಲ್ಲಿಯೂ ಪ್ರತಿ ಮನೆಯ ಮುಂದೆ ದಿನಕ್ಕೊಂದು ರೀತಿಯ ರಂಗೋಲಿ ಚಿತ್ರಗಳನ್ನು ಬಿಡಿಸುವ ಪದ್ಧತಿ ನಮ್ಮಲ್ಲಿ ಇನ್ನೂ ಜೀವಂತವಾಗಿದೆ. ಒತ್ತಡದ ಈ ದಿನಗಳಲ್ಲಿ ದೀಪಾವಳಿಯ ರಂಗೋಲಿ ನಮ್ಮ ಸಂಸ್ಕೃತಿಯನ್ನು ಭವ್ಯವಾಗಿ ಪ್ರತಿಬಿಂಬಿಸುವ ಸಂಪ್ರದಾಯವಾಗಿದೆ ಎನ್ನುತ್ತಾರೆ ಶಾಂತಮ್ಮ ಕೃಷ್ಣಭಟ್ ಮತ್ತು ಲಕ್ಷ್ಮಿದೇವಿ.261108-43-1222028864