ಅಂಗೈಯಲ್ಲಿ ಅರಳಿದ ಅಕ್ಷರಲೋಕ: ಡಿಜಿಟಲ್ ಯುಗದಲ್ಲಿ ಕನ್ನಡದ ಹೊಸ ಪಯಣ
ಜಗತ್ತು ಮುಂದುವರೆದಷ್ಟು ನಾವು ಕೆಲ ವಿಷಯಗಳಲ್ಲಿ ಹಿಂದೆಯೇ ಉಳಿದುಕೊಳ್ಳಬೇಕು, ಆಗ ಮಾತ್ರ ನಮ್ಮ ಬೇರು ಬಲವಾಗಿ ನಿಲ್ಲಲು ಸಾಧ್ಯ!ಇಂದಿನ ಡಿಜಿಟಲ್ ಯುಗದಲ್ಲಿ ಈ ಮಾತು ಎಷ್ಟು ಸತ್ಯ ಅಲ್ಲವೇ? ಒಂದು ಕಾಲವಿತ್ತು, ಕನ್ನಡದಲ್ಲಿ ಬರೆಯಬೇಕು ಅಂದರೆ ದೊಡ್ಡ ಕಂಪ್ಯೂಟರ್ ಬೇಕಿತ್ತು, ನುಡಿ ತಂತ್ರಜ್ಞಾನದ ಜಟಿಲತೆಗಳ ಪರಿಜ್ಞಾನವಿರಬೇಕಿತ್ತು. ಕೀಬೋರ್ಡ್ನಲ್ಲಿ ಯಾವ ಅಕ್ಷರ ಎಲ್ಲಿಹ

ಜಗತ್ತು ಮುಂದುವರೆದಷ್ಟು ನಾವು ಕೆಲ ವಿಷಯಗಳಲ್ಲಿ ಹಿಂದೆಯೇ ಉಳಿದುಕೊಳ್ಳಬೇಕು, ಆಗ ಮಾತ್ರ ನಮ್ಮ ಬೇರು ಬಲವಾಗಿ ನಿಲ್ಲಲು ಸಾಧ್ಯ!ಇಂದಿನ ಡಿಜಿಟಲ್ ಯುಗದಲ್ಲಿ ಈ ಮಾತು ಎಷ್ಟು ಸತ್ಯ ಅಲ್ಲವೇ? ಒಂದು ಕಾಲವಿತ್ತು, ಕನ್ನಡದಲ್ಲಿ ಬರೆಯಬೇಕು ಅಂದರೆ ದೊಡ್ಡ ಕಂಪ್ಯೂಟರ್ ಬೇಕಿತ್ತು, ನುಡಿ ತಂತ್ರಜ್ಞಾನದ ಜಟಿಲತೆಗಳ ಪರಿಜ್ಞಾನವಿರಬೇಕಿತ್ತು. ಕೀಬೋರ್ಡ್ನಲ್ಲಿ ಯಾವ ಅಕ್ಷರ ಎಲ್ಲಿಹುದು ಎಂದು ಹುಡುಕಾಡಿ ಸುಸ್ತಾಗುತ್ತಿದ್ದೆವು. ಒಮ್ಮೆ ಕೈಕುಂತರೆ ಅದೇನು ಅಷ್ಟು ಜಟಿಲವಲ್ಲ. ಆದರೆ ಇಂಗ್ಲಿಷ್ನಷ್ಟು ಸುಲಭವಾಗಿ ಕೈಕೂರುವಂತದ್ದೂ ಅಲ್ಲ. ಆದರೆ ಕಾಲ ಬದಲಾದಂತೆ ತಂತ್ರಜ್ಞಾನ ನಮ್ಮ ಅಂಗೈಗೆ ಬಂತು. ಕೀಪ್ಯಾಡ್ ಮೊಬೈಲ್ನಿಂದ ಹಿಡಿದು ಇಂದಿನ ಸ್ಮಾರ್ಟ್ಫೋನ್ಗಳ ಟಚ್ ಸ್ಕ್ರೀನ್ ಯುಗದವರೆಗೆ ಕನ್ನಡ ಟೈಪಿಂಗ್ ಪ್ರಯಾಣ ಬೆಳೆದು ಬಂದ ಹಾದಿಯೇ ಒಂದು ರೋಚಕ ಕಥೆ.ಬ್ಲಾಗಿಂಗ್ ತಳಹದಿಯಲ್ಲಿ ಅರಳಿದ ಕನ್ನಡ ಡಿಜಿಟಲ್ ಪತ್ರಿಕೋದ್ಯಮAI ಯುಗದಲ್ಲಿ ಕನ್ನಡ ಭಾಷೆಯ ಮುಂದಿರುವ ಸವಾಲುಗಳು ಮೊದಲೆಲ್ಲಾ ಮೊಬೈಲ್ನಲ್ಲಿ ಕನ್ನಡ ಬರೆಯಲು ಬಾರದೆ, ಇಂಗ್ಲಿಷ್ ಅಕ್ಷರಗಳಲ್ಲೇ ಕನ್ನಡ ಪದಗಳನ್ನು (Kanglish) ಟೈಪ್ ಮಾಡಿ ಕಳುಹಿಸುತ್ತಿದ್ದ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ. "Yella Hegiddira?" ಎಂದು ಸಂದೇಶ ಕಳುಹಿಸಿ ಅರ್ಥೈಸಿಕೊಳ್ಳುತ್ತಿದ್ದ ನಮಗೆ, ಈಗ ಜಿಬೋರ್ಡ್ (Gboard), ಫೋನೆಟಿಕ್ ಕೀಲಿಮಣೆಗಳು ಮತ್ತು ನಾನಾ ಆ್ಯಪ್ಗಳು ಕ್ರಾಂತಿಯನ್ನೇ ಸೃಷ್ಟಿಸಿವೆ. ಈಗ "ಕನ್ನಡ" ಎಂದು ಇಂಗ್ಲಿಷ್ನಲ್ಲಿ ಟೈಪ್ ಮಾಡಿದರೆ ಸಾಕು, ಅಚ್ಚ ಕನ್ನಡದ ಪದಗಳು ತೆರೆದುಕೊಳ್ಳುತ್ತವೆ. ಕೇವಲ ಬರವಣಿಗೆ ಮಾತ್ರವಲ್ಲ, ಇಂದಿನ ಅತ್ಯಾಧುನಿಕ ವಾಯ್ಸ್ ಟೈಪಿಂಗ್ ತಂತ್ರಜ್ಞಾನದಿಂದಾಗಿ ಬಾಯಲ್ಲಿ ಮಾತಾಡಿದರೆ ಸಾಕು, ಕ್ಷಣಾರ್ಧದಲ್ಲಿ ಸುಂದರ ಕನ್ನಡ ವಾಕ್ಯಗಳು ಮೂಡಿಬರುತ್ತಿವೆ. ಇದರಿಂದಾಗಿ ಈಗ ಅಕ್ಷರಜ್ಞಾನವಿರುವ ಪ್ರತಿಯೊಬ್ಬರೂ ತಮ್ಮ ಮೊಬೈಲ್ನಲ್ಲಿ ಸರಾಗವಾಗಿ ಕನ್ನಡದಲ್ಲೇ ಚಾಟ್ ಮಾಡುತ್ತಿದ್ದಾರೆ, ಸ್ಟೇಟಸ್ ಹಾಕುತ್ತಿದ್ದಾರೆ.ಕರುನಾಡೋತ್ಸವ ಜಸ್ಟ್ ಕನ್ನಡ (Just Kannada Keyboard) ಆಪ್ ಸ್ಮಾರ್ಟ್ಫೋನ್ಗಳಲ್ಲಿ ಕನ್ನಡ ಭಾಷೆಯನ್ನು ಅತ್ಯಂತ ಸುಲಭವಾಗಿ ಮತ್ತು ನಿಖರವಾಗಿ ಟೈಪ್ ಮಾಡಲು ತುಂಬಾ ಸಹಕಾರಿಯಾಗಿದೆ. ಕಂಪ್ಯೂಟರ್ನಲ್ಲಿ ನುಡಿ ಬಳಸಿ ತಿಳಿದವರಿಗಂತು ಈ ಕೀಬೋರ್ಡ್ ಬಳಕೆ ಮಾಡುವುದು ನೀರು ಕುಡಿದಷ್ಟು ಸುಲಭ. ಇದನ್ನು ಹೊರತುಪಡಿಸಿ ಇನ್ನಷ್ಟು ಕನ್ನಡ ಟೈಪಿಂಗ್ ಅಪ್ಲಿಕೇಷನ್ಗಳ ಬಗ್ಗೆ ಹೇಳುವುದಾದರೆ ಅಕ್ಷರ ಸಿರಿಇಂಡಿಯಾ ಟೈಪಿಂಗ್ಬ್ರಾನಾ ಕೀಬೋರ್ಡ್ದೇಶ ಕನ್ನಡ ಕೀಬೋರ್ಡ್ಗಳು ಲಭ್ಯವಿದೆಕರ್ನಾಟಕದಲ್ಲಿ ಜನಸ್ನೇಹಿ ಇ-ಆಡಳಿತ ಜಾರಿ: 2 ದಶಕದ ಹಾದಿ ದೇಶಕ್ಕೆ ಮಾದರಿನ್ಯಾಯಾಂಗ ಕನ್ನಡೀಕರಣಕ್ಕೆ ಡಿಜಿಟಲ್ ರಾಜಮಾರ್ಗ ಅಷ್ಟೇ ಯಾಕೆ, ಡಿಸೈನಿಂಗ್ ಕ್ಷೇತ್ರದಲ್ಲೂ ಇಂದು ಕನ್ನಡ ತನ್ನದೇ ಆದ ಹೊಸ ಸೊಗಡನ್ನು ಮೂಡಿಸುತ್ತಿದೆ. ನೂರಾರು ಸುಂದರ ಫಾಂಟ್ಗಳು ಲಭ್ಯವಿದ್ದು, ಬ್ಯಾನರ್ಗಳು, ಸೋಶಿಯಲ್ ಮೀಡಿಯಾ ಪೋಸ್ಟ್ಗಳು ಎಲ್ಲವೂ ಕರಾವಳಿಯ ತೆಂಗಿನ ಮರಗಳ ಸಾಲಿನಂತೆ ಕಣ್ಣಿಗೆ ಮುದ ನೀಡುತ್ತಿವೆ. ಕನ್ನಡ ಬರೆಯಲು ಕಂಪ್ಯೂಟರೇ ಬೇಕು ಎಂಬ ತಲೆನೋವನ್ನು ಹೋಗಲಾಡಿಸಿ, ಕೈಯಳತೆಯ ಮೊಬೈಲ್ನಲ್ಲೇ ಕನ್ನಡದ ಕಂಪನ್ನು ಮನೆ ಮನೆಗೆ ಹರಡಿದ ತಂತ್ರಜ್ಞಾನ ರೂಪಕರಿಗೆ ಹಾಗೂ ಆ್ಯಪ್ಗಳನ್ನು ಸಿದ್ಧಪಡಿಸಿದ ಎಲ್ಲರಿಗೂ ಕನ್ನಡಿಗರು ಸದಾ ಚಿರಋಣಿ.ಇವತ್ತು ಜಾಗತೀಕರಣದ ಭರಾಟೆಯಲ್ಲಿ ಎಲ್ಲವೂ ಇಂಗ್ಲಿಷ್ಮಯವಾಗುತ್ತಿರುವಾಗ, ನಮ್ಮ ಭಾಷೆಯನ್ನು ನಾವು ಮೊಬೈಲ್ನ ಮುಖಾಂತರ ನಿತ್ಯ ಜೀವನದಲ್ಲಿ ಜೀವಂತವಾಗಿರಿಸಿಕೊಂಡಿರುವುದು ಕನ್ನಡಿಗರ ಹೆಮ್ಮೆ. ಹೊರಲೋಕದ ಎಷ್ಟೇ ಆಧುನಿಕತೆಯನ್ನು ನಾವು ಮೈಗೂಡಿಸಿಕೊಂಡರೂ, ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬೇರುಗಳು ಮಾತ್ರ ಸದಾ ಗಟ್ಟಿಯಾಗಿರಬೇಕು. ಮೊಬೈಲ್ ಪರದೆಯ ಮೇಲಿನ ನಮ್ಮ ಅಚ್ಚ ಕನ್ನಡದ ಅಕ್ಷರಗಳೇ ಇದಕ್ಕೆ ಸಾಕ್ಷಿ.ಕರ್ನಾಟಕದ ಸಾರ್ವಜನಿಕ ಸೇವೆಗಳಲ್ಲಿ ಕನ್ನಡ ತಂತ್ರಜ್ಞಾನ ಬಳಕೆ: ಮುಂದೆ ಹೇಗಿರಬೇಕು?ಆನ್ಲೈನ್ ಖರೀದಿ: ಎಷ್ಟು ಸರಾಗವೋ ಅಷ್ಟೇ ಅಪಾಯಕಾರಿಲೇಖಕರು: ಸುಮಾ ಕಂಚೀಪಾಲ್