ಗುಂಡ್ಲುಪೇಟೆ| ಪರಿಸರ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ: ಜಾವಗಲ್ ಶ್ರೀನಾಥ್
ಗುಂಡ್ಲುಪೇಟೆ: ಅರಣ್ಯ, ವನ್ಯಜೀವಿ ಹಾಗೂ ಪ್ರಕೃತಿ ಸಂರಕ್ಷಣೆಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ‘ಫ್ರೆಂಡ್ಸ್ ಆಫ್ ಬಂಡೀಪುರ’ ಕಾರ್ಯಕ್ರಮದ 50ನೇ ಆವೃತ್ತಿಗೆ ಹೆಸರಾಂತ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್ ಹಾಗೂ ರೋಜರ್ ಬಿನ್ನಿ ಶನಿವಾರ ಚಾಲನೆ ನೀಡಿದರು.‘ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ನಾನು ಹಿಂದ

ಗುಂಡ್ಲುಪೇಟೆ: ಅರಣ್ಯ, ವನ್ಯಜೀವಿ ಹಾಗೂ ಪ್ರಕೃತಿ ಸಂರಕ್ಷಣೆಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ‘ಫ್ರೆಂಡ್ಸ್ ಆಫ್ ಬಂಡೀಪುರ’ ಕಾರ್ಯಕ್ರಮದ 50ನೇ ಆವೃತ್ತಿಗೆ ಹೆಸರಾಂತ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್ ಹಾಗೂ ರೋಜರ್ ಬಿನ್ನಿ ಶನಿವಾರ ಚಾಲನೆ ನೀಡಿದರು.‘ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ನಾನು ಹಿಂದೆ ಭೇಟಿ ನೀಡಿದ್ದೆ. ಅರಣ್ಯ ಮತ್ತು ವನ್ಯಜೀವಿಗಳ ಮಹತ್ವವನ್ನು ಅರಿತುಕೊಳ್ಳುವ ಅಗತ್ಯ ಈಗ ಇದೆ. ಪ್ರತಿಯೊಬ್ಬರೂ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಕೈಜೋಡಿಸಿ’ ಎಂದು ಜಾವಗಲ್ ಶ್ರೀನಾಥ್ ತಿಳಿಸಿದರು.ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ರೋಜರ್ ಬಿನ್ನಿ ಮಾತನಾಡಿ, ‘ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅತ್ಯಂತ ಪ್ರಮುಖ ವನ್ಯಜೀವಿ ಮತ್ತು ಪರಿಸರ ಜೀವ ವೈವಿಧ್ಯ ತಾಣ. ಇಲ್ಲಿನ ನೈಸರ್ಗಿಕ ಪರಂಪರೆಯನ್ನು ಸಂರಕ್ಷಿಸುವ ಮಹತ್ವದ ಬಗ್ಗೆ ಎಲ್ಲರೂ ತಿಳಿದಿರಬೇಕು’ ಎಂದು ಸಲಹೆ ನೀಡಿದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಎಲ್. ನಂದೀಶ್ ಮಾತನಾಡಿ, ‘2024ರ ಮೇ 3ರಂದು ಆರಂಭವಾದ ‘ಫ್ರೆಂಡ್ಸ್ ಆಫ್ ಬಂಡೀಪುರ’ ಕಾರ್ಯಕ್ರಮ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪ್ರಮುಖ ಸಂರಕ್ಷಣಾ ಜಾಗೃತಿ ಉಪಕ್ರಮವಾಗಿ ಬೆಳೆದಿದೆ. ವನ್ಯಜೀವಿ ಸಫಾರಿ, ತಜ್ಞರೊಂದಿಗೆ ಸಂವಾದ, ಪ್ರಕೃತಿ ಆಧಾರಿತ ಕಲಿಕೆ ಹಾಗೂ ಮುಂಚೂಣಿ ಅರಣ್ಯ ಸಿಬ್ಬಂದಿಯ ಸಂರಕ್ಷಣಾ ಕಾರ್ಯಗಳ ನೇರ ಪರಿಚಯದ ಮೂಲಕ ಸಾರ್ವಜನಿಕರಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಕುರಿತು ಅರಿವು ಮೂಡಿಸುತ್ತಿದೆ’ ಎಂದು ತಿಳಿಸಿದರು.ವನ್ಯಜೀವಿ ಸಂರಕ್ಷಣಾ ಜಾಗೃತಿಗೆ ಕಾರ್ಯಕ್ರಮ ನೀಡಿರುವ ಕೊಡುಗೆಗಳನ್ನು ಒಳಗೊಂಡ ವಿಶೇಷ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಬಂಡೀಪುರ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್, ವಲಯದ ಸಿಬ್ಬಂದಿ ಹಾಗೂ ಫ್ರೆಂಡ್ಸ್ ಆಫ್ ಬಂಡೀಪುರ ಕಾರ್ಯಕ್ರಮ ತಂಡದ ಸದಸ್ಯರು ಭಾಗವಹಿಸಿದ್ದರು.261108-37-1323793797