ಬಸ್ತಾರ್ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ರಾಯ್ಪುರ/ಗ್ಯಾಂಗ್ಟಕ್: ಛತ್ತೀಸಗಢದ ಬಸ್ತಾರ್ನಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಸಿಬ್ಬಂದಿಯೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಬಸ್ತಾರ್ನಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ಬಾರಿಯ ದೀಪಾವಳಿ ಅತ್ಯಂತ ವಿಶೇಷವಾಗಿದೆ ಎಂದು ಹೇಳಿದ್ದಾರೆ.ತುಮಕೂರಿನ ಅಮ್ಮಸಂದ್ರದ ಹ

ರಾಯ್ಪುರ/ಗ್ಯಾಂಗ್ಟಕ್: ಛತ್ತೀಸಗಢದ ಬಸ್ತಾರ್ನಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಸಿಬ್ಬಂದಿಯೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಬಸ್ತಾರ್ನಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ಬಾರಿಯ ದೀಪಾವಳಿ ಅತ್ಯಂತ ವಿಶೇಷವಾಗಿದೆ ಎಂದು ಹೇಳಿದ್ದಾರೆ.ತುಮಕೂರಿನ ಅಮ್ಮಸಂದ್ರದ ಹುಡುಗಿಯ ₹1,500 ಕೋಟಿಯ ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆಇಳುವರಿ ತೀವ್ರ ಕುಸಿತ: ಸಾರ್ವಕಾಲಿಕ ದಾಖಲೆಯತ್ತ ಮುನ್ನುಗ್ಗಿದ ಹಳದಿ ಚಿನ್ನ! ದಶಕಗಳ ಕಾಲ ದೇಶವನ್ನು ಕಾಡಿದ ನಕ್ಸಲಿಸಂ ಹಾಗೂ ಮಾವೋವಾದಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಜಯಗಳಿಸಿದೆ. ದೇಶದ ಪ್ರತಿಯೊಂದು ಜಿಲ್ಲೆಯೂ ಇಂದು ನಕ್ಸಲ್ ಮುಕ್ತವಾಗಿದ್ದು, ಕೋಟ್ಯಂತರ ಜನರು ಭಯಮುಕ್ತ ವಾತಾವರಣದಲ್ಲಿದ್ದಾರೆ ಎಂದೂ ತಿಳಿಸಿದ್ದಾರೆ.ಪ್ರತಿಯೊಬ್ಬರೂ ತಮ್ಮ ಮನೆಗೆ ತೆರಳಿ ಕುಟುಂಬಸ್ಥರೊಂದಿಗೆ ಹಬ್ಬವನ್ನು ಆಚರಿಸುತ್ತಾರೆ. ದೇಶದ ಗಡಿ ಕಾಯುವ ಮತ್ತು ಆಂತರಿಕ ಭದ್ರತೆ ಒದಗಿಸುವ ವೀರ ಯೋಧರೇ ನನ್ನ ಕುಟುಂಬದ ಸದಸ್ಯರು, ಹೀಗಾಗಿ ಅವರೊಂದಿಗೆ ದೀಪಾವಳಿ ಆಚರಿಸಲು ಬಂದಿದ್ದೇನೆ ಎಂದು ಮೋದಿ ಹೇಳಿದ್ದಾರೆ.ಕಳೆದ ಒಂದು ವರ್ಷದ ಕಾರ್ಯಾಚರಣೆಯಲ್ಲಿ ವೇಳೆ ಸಿಆರ್ಪಿಎಫ್ನ ಯಾವುದೇ ಯೋಧನೂ ಪ್ರಾಣ ಕಳೆದುಕೊಂಡಿಲ್ಲ. 47 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಸಾಧನೆ ಸಾಕಾರಗೊಂಡಿದ್ದು, ಇದು ಸರ್ಕಾರದ ನೀತಿ ಮತ್ತು ದೃಢ ಸಂಕಲ್ಪಕ್ಕೆ ಸಿಕ್ಕ ಜಯವಾಗಿದೆ ಎಂದು ಬಣ್ಣಿಸಿದ್ದಾರೆ.ಪ್ರಜಾವಾಣಿ ಕರುನಾಡೋತ್ಸವ| ಗೋವಿಂದ ಪೈ ‘ಗಿಳಿವಿಂಡು’: ಗಡಿನಾಡ ಸಾಂಸ್ಕೃತಿಕ ಕೇಂದ್ರಹಸಿರು ಪಟಾಕಿ ಸಂಪೂರ್ಣ ಸುರಕ್ಷಿತವಲ್ಲ: ವೈದ್ಯರ ಎಚ್ಚರಿಕೆ ನಾಥು ಲಾದಲ್ಲಿ ದೀಪಾವಳಿ ಆಚರಿಸಿದ ರಾಜನಾಥ್ ಸಿಂಗ್ ಮತ್ತೊಂದೆಡೆ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿಕ್ಕಿಂನ ನಾಥು ಲಾ ಪಾಸ್ ಬಳಿಯ ಶೇರ್ಥಾಂಗ್ ಯುದ್ಧ ಸ್ಮಾರಕದ ಬಳಿ ಭಾರತೀಯ ಭೂಸೇನೆಯ ಯೋಧರೊಂದಿಗೆ ದೀಪಾವಳಿ ಆಚರಿಸಿದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಯೋಧರ ಶಿಸ್ತು, ಸಮರ್ಪಣೆ ಮತ್ತು ತ್ಯಾಗದಿಂದಾಗಿ ದೇಶದ ಗಡಿ ಸುರಕ್ಷಿತವಾಗಿದೆ. ದೇಶದ ಜನರು ನೆಮ್ಮದಿಯಿಂದ ಹಬ್ಬಗಳನ್ನು ಆಚರಿಸಲು ಸಾಧ್ಯವಾಗಿದೆ ಎಂದು ಪ್ರಶಂಸಿಸಿದ್ದಾರೆ.ಛತ್ತೀಸಗಢದ ಬಸ್ತಾರ್ನಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಸಿಬ್ಬಂದಿಯೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.#NarendraModi #Diwali2026 #Naxalism #naxalfreeindia pic.twitter.com/nMxgqGiCdE— Prajavani (@prajavani) November 8, 2026