ಕೃಷ್ಣೆಯಿಂದ ಕಾವೇರಿವರೆಗೆ ಉತ್ಸವಕ್ಕೆ ತೆರೆ: ಚಿಣ್ಣರು ಹಚ್ಚಿದರು ‘ಕನ್ನಡದ ದೀಪ’
ಬೆಂಗಳೂರು: ಇಮ್ತಿಯಾಜ್ ಸುಲ್ತಾನ್ ಅವರ ಗಜಲ್, ಅಪ್ಪಗೆರೆ ತಿಮ್ಮರಾಜು ಅವರ ಜನಪದ ಗಾಯನ, ಸಂಗೀತ ನಿರ್ದೇಶಕ ಪ್ರವೀಣ್ ಡಿ.ರಾವ್ ಮತ್ತು ಕಲಾವಿದ ರಾಘವೇಂದ್ರ ಹೆಗ್ಡೆ ಪ್ರಸ್ತುತಿಯ ‘ಮರಳು ಮಾಧುರ್ಯ’ ಕಾರ್ಯಕ್ರಮದೊಂದಿಗೆ ‘ಕೃಷ್ಣೆಯಿಂದ ಕಾವೇರಿವರೆಗೆ’ ಉತ್ಸವಕ್ಕೆ ವೈಭವದ ತೆರೆಬಿತ್ತು. ಕಲೆ, ಸಂಗೀತ, ಸಂವಾದ, ನಾಟಕಗಳ ಹೂರಣದ ಸವಿ ಎಲ್ಲರದ್ದಾಗಿತ್ತು.ಬೆಂಗಳೂರು ಅಂತರರಾಷ

ಬೆಂಗಳೂರು: ಇಮ್ತಿಯಾಜ್ ಸುಲ್ತಾನ್ ಅವರ ಗಜಲ್, ಅಪ್ಪಗೆರೆ ತಿಮ್ಮರಾಜು ಅವರ ಜನಪದ ಗಾಯನ, ಸಂಗೀತ ನಿರ್ದೇಶಕ ಪ್ರವೀಣ್ ಡಿ.ರಾವ್ ಮತ್ತು ಕಲಾವಿದ ರಾಘವೇಂದ್ರ ಹೆಗ್ಡೆ ಪ್ರಸ್ತುತಿಯ ‘ಮರಳು ಮಾಧುರ್ಯ’ ಕಾರ್ಯಕ್ರಮದೊಂದಿಗೆ ‘ಕೃಷ್ಣೆಯಿಂದ ಕಾವೇರಿವರೆಗೆ’ ಉತ್ಸವಕ್ಕೆ ವೈಭವದ ತೆರೆಬಿತ್ತು. ಕಲೆ, ಸಂಗೀತ, ಸಂವಾದ, ನಾಟಕಗಳ ಹೂರಣದ ಸವಿ ಎಲ್ಲರದ್ದಾಗಿತ್ತು.ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಅಜೀಂಪ್ರೇಮ್ಜಿ ವಿಶ್ವವಿದ್ಯಾಲಯವು ಆಯೋಜಿಸಿದ್ದ ಎರಡು ದಿನಗಳ ಉತ್ಸವವು ಕರುನಾಡಿನ ಬಹುವೈವಿಧ್ಯ ಲೋಕವನ್ನು ಸಹೃದಯರಿಗೆ ತೆರೆದಿಟ್ಟಿತು. ಚಿಣ್ಣರು ಮತ್ತು ಹಿರಿಯರು ಕಲಾ ಕಲಿಕೆಗಳಲ್ಲಿ ಜೊತೆಯಾದರು. ದೀಪಗಳನ್ನು ಬೆಳಗಿ ‘ಕನ್ನಡ ದೀಪಾವಳಿ’ಯನ್ನು ಆಚರಿಸಿ ಸಂಭ್ರಮಿಸಿದರು.ಪಗಡೆ, ಅಳಿಗುಳಿ ಮನೆ, ಹಾವು– ಏಣಿ ಸೇರಿದಂತೆ ದೇಸಿ ಆಟಗಳಲ್ಲಿ ಚಿಣ್ಣರೊಂದಿಗೆ ದೊಡ್ಡವರು ಸೇರಿ ಆಟವಾಡಿದರು. ಕರುನಾಡಿನ ರುಚಿ ವೈವಿಧ್ಯವನ್ನು ಸವಿದರು.ಸಾಹಿತ್ಯೋತ್ಸವ: ಮಕ್ಕಳ ಸಾಹಿತ್ಯೋತ್ಸವದಲ್ಲಿ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ಹೊರತಂದಿರುವ ‘ಕಥಾವನ’ ಮಕ್ಕಳ ಪುಸ್ತಕ ಮಾಲೆ–1 ಸರಣಿಯ 10 ಪುಸ್ತಕಗಳನ್ನು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಲೋಕಾರ್ಪಣೆ ಮಾಡಿದರು.ನಂತರ ಮಾತನಾಡಿ, ‘ಕನ್ನಡ ಮಕ್ಕಳಿಗಾಗಿ ಅಪೂರ್ವ ಪುಸ್ತಕಗಳನ್ನು ಹೊರತಂದಿರುವುದು ಶ್ಲಾಘನೀಯವಾದ ಕೆಲಸ. ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ’ ಎಂದರು.‘ಬೇರೆಲ್ಲ ದೇಶಗಳಿಗಿಂತ ಸೋವಿಯತ್ ರಷ್ಯಾ ಒಕ್ಕೂಟವು ಪುಸ್ತಕ ಸಂಸ್ಕೃತಿಯನ್ನು ಬೆಳೆಸಲು ಉತ್ತಮ ಕೆಲಸಗಳನ್ನು ಮಾಡಿತು. ಅದಕ್ಕೆ ನವಕರ್ನಾಟಕ ಪ್ರಕಾಶನವು ಉತ್ತಮ ಸಹಕಾರ ಕೊಟ್ಟಿತು. ರಷ್ಯಾದ ಸಾಹಿತ್ಯದ ಪುಸ್ತಕಗಳು ಕನ್ನಡಕ್ಕೆ ಅನುವಾದಗೊಂಡವು. ಕಡಿಮೆ ಬೆಲೆಯಲ್ಲಿ ನಾಡಿನ ಓದುಗರಿಗೆ ಸಿಕ್ಕವು’ ಎಂದರು.ವಿಶ್ವವಿದ್ಯಾಲಯದ ಮುಖ್ಯ ಸಂವಹನಾಧಿಕಾರಿ ಸುಧೀಶ್ ವೆಂಕಟೇಶ್, ಕನ್ನಡ ವಿಭಾಗದ ಮುಖ್ಯಸ್ಥ ಎಸ್.ವಿ.ಮಂಜುನಾಥ್, ನವಕರ್ನಾಟಕ ಪ್ರಕಾಶನದ ರಮೇಶ್ ಉಡುಪ, ತೇಜಸ್ವಿ, ದಿನೇಶ್ ಮಡಗಾಂವ್ಕರ್ ಪಾಲ್ಗೊಂಡಿದ್ದರು.ಕಲಾಗಂಗೋತ್ರಿ ತಂಡದವರು ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕವಿತೆಗಳನ್ನು ಆಧರಿಸಿದ ಸಂಗೀತ ನಾಟಕ ‘ಮೈಸೂರು ಮಲ್ಲಿಗೆ’ ಪ್ರದರ್ಶಿಸಿ ದರು. ‘ಕೃತಕ ಬುದ್ಧಿಮತ್ತೆ ಯುಗದಲ್ಲಿ ಕನ್ನಡಿಗರ ಉದ್ಯಮಶೀಲತೆಗೆ ಲಭ್ಯವಿರುವ ಅವಕಾಶಗಳು ಮತ್ತು ಸವಾಲುಗಳ’ ಕುರಿತು ವಸಂತ ಶೆಟ್ಟಿ, ಸಂಜಯ್ ಆನಂದರಾಮ್ ಹಾಗೂ ಸಚಿನ್ ನಾಯ್ಕ್ ಸಂವಾದ ನಡೆಸಿದರು.ದೇಸಿ ಆಟಗಳಲ್ಲಿ ಮುಳುಗಿದ ವಿದ್ಯಾರ್ಥಿಗಳು ‘ಜಗವೆಲ್ಲ ತೊಯ್ದ ಬೆಳಕು–ರಾಜ್’ ಸಾಕ್ಷ್ಯಚಿತ್ರದ ಪ್ರದರ್ಶನ ಮತ್ತು ಸಂವಾದದಲ್ಲಿ ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ರಾಜ್ಕುಮಾರ್ ಅವರ ಕೊಡುಗೆಯನ್ನು ಸ್ಮರಿಸಲಾಯಿತು. ನಿರ್ದೇಶಕಿ ಬಿ.ಕೆ.ಸುಮತಿ ಅವರು ಸಾಕ್ಷ್ಯಚಿತ್ರ ನಿರ್ಮಾಣವಾದ ಬಗೆಯನ್ನು ಹೇಳಿದರು. ಸಾಂಸ್ಕೃತಿಕ ಪರಂಪರೆ ಹಾಗೂ ಸಮಾಜದ ಮೇಲೆ ರಾಜ್ ಅವರು ಬೀರಿದ ಪ್ರಭಾವವನ್ನು ವಿಶ್ಲೇಷಿಸಿದರು.‘ಕರ್ನಾಟಕದ ಸಾಂಪ್ರದಾಯಿಕ ತಿನಿಸು’ಗಳು ಸಂವಾದದಲ್ಲಿ ಆಹಾರ ತಜ್ಞರಾದ ಮೇಘಾ ನೀಡಿದ ಸೊಪ್ಪು ಬಿಡಿಸುವ ಚಟುವಟಿಕೆಯಲ್ಲಿ ನಿರತರಾದ ಪ್ರೇಕ್ಷಕರುHighlights - ಗಜಲ್, ಜಾನಪದ ಗಾಯನ ವೈವಿಧ್ಯ ದೇಸಿ ಆಟಗಳಲ್ಲಿ ಮುಳುಗಿದ ಮಕ್ಕಳು ಸೆಳೆದ ‘ಮೈಸೂರು ಮಲ್ಲಿಗೆ’ ಸಂಗೀತ ನಾಟಕಅಡುಗೆ ಉಪನ್ಯಾಸದಲ್ಲಿ ‘ರಸಾಸ್ವಾದ’ ಬಿಲ್ವಪತ್ರೆ ತಂಬುಳಿ ಅಳವಿ ಪಾಯಸ ಹುರಳಿ ಒಬ್ಬಟ್ಟು ಸವಿಯುತ್ತ ‘ಕರ್ನಾಟಕದ ಸಾಂಪ್ರದಾಯಿಕ ತಿನಿಸುಗಳು’ ಕುರಿತ ರಸಭರಿತ ಉಪನ್ಯಾಸವು ನಾಡಿನ ಆಹಾರ ಕ್ರಮದಲ್ಲಿ ಅಡಗಿರುವ ವೈಶಿಷ್ಟ್ಯವನ್ನು ಪ್ರೇಕ್ಷಕರಿಗೆ ನೆನಪಿಸಿಕೊಟ್ಟಿತು. ಪೌಷ್ಟಿಕಾಂಶ ಮತ್ತು ಆಯುರ್ವೇದದ ಅಂತಃಸತ್ವವು ರುಚಿಕರ ತಿನಿಸಿನಲ್ಲಿ ಬೆರೆತಿರುವ ಬಗೆಯನ್ನು ಆಹಾರ ತಜ್ಞರಾದ ಮೇಘಾ ಸದಾಶಿವ ಜಾಧವ್ ವಿವರಿಸಿದರು. ‘ತಲೆಮಾರುಗಳಿಂದ ಬಂದ ಆಹಾರ ಕ್ರಮವು ವೈದ್ಯಕೀಯ ಗುಣಗಳನ್ನು ಹೊಂದಿದೆ. ಬಿಲ್ವಪತ್ರೆಯಲ್ಲಿ 2 ಸಾವಿರಕ್ಕೂ ಹೆಚ್ಚು ಆಯುರ್ವೇದದ ಅಂಶಗಳಿವೆ’ ಎಂದು ಹೇಳಿದ ಮೇಘಾ ಅವರು ತಂಬುಳಿ ಮಾಡುವ ಬಗೆಯನ್ನೂ ಹೇಳಿಕೊಟ್ಟರು. ಪೌಷ್ಟಿಕಾಂಶ ನಾರಿನಾಂಶ ಕಾರ್ಬೊಹೈಡ್ರೇಟ್ಸ್ ಪ್ರಮಾಣ ಯಾವ್ಯಾವ ತಿನಿಸಿನಲ್ಲಿ ಎಷ್ಟಿರುತ್ತದೆ ಎಂಬುದನ್ನು ವಿವರಿಸಿದರು. ಕೆಸುವಿನ ಎಲೆ ಅರಿಶಿಣ ಎಲೆ ನೆಲನಿಂಬೆ ಬೇವು ಕಿಸ್ಕಳೆ ಮಾವು ಪುದೀನ ನುಗ್ಗೆ ಬೂದುಗುಂಬಳ ನಿಂಬೆ ಬಿಲ್ವ ಪುನರ್ನವ ನೆಲಬಸಳೆ ಹೊನಗೊನ್ನೆ ಗಣಕೆ ವೀಳ್ಯ ದೊಡ್ಡಪತ್ರೆ ಬಸಳೆ ಸೊಪ್ಪುಗಳನ್ನು ಮೇಜಿನಲ್ಲಿ ಹರಡಿ ಬಿಡಿಸಿ ಗುಂಪು ಮಾಡುವಂತೆ ಪ್ರೇಕ್ಷಕರಿಗೆ ಕೇಳಿದರು. ಜೊತೆಯಲ್ಲಿಯೇ ಅವುಗಳ ಮಹತ್ವವನ್ನು ತಿಳಿಸಿದರು.