ಬೀದರ್| ದೀಪಾವಳಿ ಹಬ್ಬಕ್ಕೆ ಖರೀದಿ ಭರಾಟೆ ಜೋರು
ಬೀದರ್: ದೀಪಾವಳಿ ಹಬ್ಬಕ್ಕೆ ನಗರದಲ್ಲಿ ಶನಿವಾರ ಖರೀದಿ ಭರಾಟೆ ಜನರಿಂದ ಜೋರಾಗಿ ನಡೆಯಿತು.ನಗರದ ಮೋಹನ್ ಮಾರ್ಕೆಟ್, ಭಗತ್ ಸಿಂಗ್ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ನೆಹರೂ ಕ್ರೀಡಾಂಗಣ, ಶಿವನಗರ, ಮೈಲೂರ್ ಕ್ರಾಸ್, ಕುಂಬಾರವಾಡ ಕ್ರಾಸ್, ಗುಂಪಾ ರಿಂಗ್ರೋಡ್ ಸೇರಿದಂತೆ ಹಲವು ಕಡೆಗಳಲ್ಲಿ ಶನಿವಾರ ಬೆಳಿಗ್ಗೆಯಿಂದ ರಾತ್ರಿ ತನಕ ಹ

ಬೀದರ್: ದೀಪಾವಳಿ ಹಬ್ಬಕ್ಕೆ ನಗರದಲ್ಲಿ ಶನಿವಾರ ಖರೀದಿ ಭರಾಟೆ ಜನರಿಂದ ಜೋರಾಗಿ ನಡೆಯಿತು.ನಗರದ ಮೋಹನ್ ಮಾರ್ಕೆಟ್, ಭಗತ್ ಸಿಂಗ್ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ನೆಹರೂ ಕ್ರೀಡಾಂಗಣ, ಶಿವನಗರ, ಮೈಲೂರ್ ಕ್ರಾಸ್, ಕುಂಬಾರವಾಡ ಕ್ರಾಸ್, ಗುಂಪಾ ರಿಂಗ್ರೋಡ್ ಸೇರಿದಂತೆ ಹಲವು ಕಡೆಗಳಲ್ಲಿ ಶನಿವಾರ ಬೆಳಿಗ್ಗೆಯಿಂದ ರಾತ್ರಿ ತನಕ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಜನ ಖರೀದಿಸಿದರು.ಚೆಂಡು ಹೂ, ಬಾಳೆ ದಿಂಡು, ಕಬ್ಬು, ಬೂದುಗುಂಬಳ, ಅಲಂಕಾರಿಕ ಪ್ಲಾಸ್ಟಿಕ್ ಹೂಗಳು, ಮಣ್ಣಿನ ಹಣತೆ, ಹಣ್ಣು, ತರಕಾರಿ ಸೇರಿದಂತೆ ಇತರ ವಸ್ತುಗಳನ್ನು ಜನ ಖರೀದಿಸಿದರು. ಭಾನುವಾರದಿಂದ (ನ.8) ಮೂರು ದಿನ ಹಬ್ಬ ಇರುವುದರಿಂದ ಶನಿವಾರ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಇತ್ತು. ವ್ಯಾಪಾರಿಗಳು ಕೂಡ ಹೆಚ್ಚಿನ ದಾಸ್ತಾನು ಮಾಡಿ, ರಸ್ತೆ ಬದಿಯಲ್ಲಿ ಇಟ್ಟುಕೊಂಡು ವ್ಯಾಪಾರ ಮಾಡಿದರು.ದೀಪಾವಳಿ: ಖರೀದಿ ಜೋರುಹುಮನಾಬಾದ್: ದೀಪಾವಳಿ ಹಬ್ಬದ ಪ್ರಯುಕ್ತ ಪಟ್ಟಣದ ಮುಖ್ಯರಸ್ತೆಯಲ್ಲಿ ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಜನರು ಅಗತ್ಯವಾದ ವಸ್ತುಗಳನ್ನು ಖರೀದಿ ಮಾಡಿದರು.ಹಬ್ಬಕ್ಕೆ ಅಗತ್ಯವಾದ ಹೂವು, ಹಣ್ಣು, ಪೂಜಾ ಸಾಮಗ್ರಿ, ಬಟ್ಟೆ, ಸಿಹಿತಿಂಡಿ, ದೀಪಗಳು, ಪಟಾಕಿ ಸೇರಿದಂತೆ ವಿವಿಧ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಜನಸಂದಣಿ ಹೆಚ್ಚಾಗಿದ್ದು, ವ್ಯಾಪಾರ ವಹಿವಾಟು ಗರಿಗೆದರಿದೆ.ಹೊಸ ಬಟ್ಟೆ ಖರೀದಿಸಲು ಕುಟುಂಬ ಸಮೇತ ಮಳಿಗೆಗಳಿಗೆ ಆಗಮಿಸುತ್ತಿರುವ ಜನರು, ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮನೆಗಳನ್ನು ಅಲಂಕರಿಸಲು ವಿದ್ಯುತ್ ದೀಪಗಳು, ಆಕಾಶಬುಟ್ಟಿ ಹಾಗೂ ಮಣ್ಣಿನ ಹಣತೆಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ದೀಪಾವಳಿ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಅಂಗಡಿಗಳನ್ನು ವಿಶೇಷವಾಗಿ ಅಲಂಕರಿಸಿದ್ದು, ಗ್ರಾಹಕರನ್ನು ಆಕರ್ಷಿಸಲು ವಿವಿಧ ಬಗೆಯ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದು ಕಂಡು ಬಂತು.261108-33-972505806