ಗಾಳಿ ಇಲ್ಲದೂರಿನ ತೀರದಲ್ಲಿ: ಕಪಿಲ ಪಿ.ಹುಮನಾಬಾದೆ ಅವರ ಕವಿತೆ
ಗಾಳಿ ಇಲ್ಲದೂರಿನ ತೀರದಲ್ಲಿಕನಸು ಹಾರಿ ಹೋದ ಎದೆಯ ಮೇಲೆಕಂಬಳಿ ಹುಳವೊಂದು ಚಿಟ್ಟೆಯಾಗಿದೆಹಾರಲು ರೆಕ್ಕೆಗಳಿವೆಗಾಳಿಯಿಲ್ಲ !ಗಾಳಿ ಇಲ್ಲದೂರಿನ ತೀರದಲ್ಲಿನಿಂತಿದೆಯೊಂದು ಭೂಮಿ ದೋಣಿಗಿರ ಗಿರ ತಿರುಗವ ಕಪ್ಪು ಚಾವಣಿಮುರಿದ ಬಿದ್ದ ಕಾಮನಬಿಲ್ಲಿನ ಚೂರಿಆಕಾಶಗಂಗೆ ಎದೆಯ ದೋಣಿ ಭೂಮಿಜಾರಿ ಹೋಯಿತು ಮೋಡ ದಾಟಿಧೂಮಕೇತುವಿನ ಬೆನ್ನಮೇಲೆ ಸವಾರಿತಿರುಗಿ ಬಾರದ ಹಸಿರೆಲೆಯ ಹಾಸಿಗಿನೀರು

ಗಾಳಿ ಇಲ್ಲದೂರಿನ ತೀರದಲ್ಲಿಕನಸು ಹಾರಿ ಹೋದ ಎದೆಯ ಮೇಲೆಕಂಬಳಿ ಹುಳವೊಂದು ಚಿಟ್ಟೆಯಾಗಿದೆಹಾರಲು ರೆಕ್ಕೆಗಳಿವೆಗಾಳಿಯಿಲ್ಲ !ಗಾಳಿ ಇಲ್ಲದೂರಿನ ತೀರದಲ್ಲಿನಿಂತಿದೆಯೊಂದು ಭೂಮಿ ದೋಣಿಗಿರ ಗಿರ ತಿರುಗವ ಕಪ್ಪು ಚಾವಣಿಮುರಿದ ಬಿದ್ದ ಕಾಮನಬಿಲ್ಲಿನ ಚೂರಿಆಕಾಶಗಂಗೆ ಎದೆಯ ದೋಣಿ ಭೂಮಿಜಾರಿ ಹೋಯಿತು ಮೋಡ ದಾಟಿಧೂಮಕೇತುವಿನ ಬೆನ್ನಮೇಲೆ ಸವಾರಿತಿರುಗಿ ಬಾರದ ಹಸಿರೆಲೆಯ ಹಾಸಿಗಿನೀರು, ಮಣ್ಣು, ಮರ, ಜೀವ ರಾಶಿರಾಕ್ಷಸ ಹಕ್ಕಿ ಬಾಯ ತುದಿರೆಕ್ಕೆ ಬೀಸಿ ಗುಡಿಸಿ ಸಾರಿಸಿಗೂಡು ತುಳಿದ ರಾಕ್ಷಸ ಹಕ್ಕಿಮುಗಿಲ ತುದಿ ಮಡಚಿಟ್ಟುಮಾರಿದ ಫಕೀರ್ಗ್ಯಾಲಕ್ಸಿ ವಿಹಾರದಲ್ಲಿಚುಕ್ಕಿಗಳು ಎಣಿಸಿಕೈಗಳಿಗೆ ಕೊಟ್ಟಿದ್ದು ಪ್ಲ್ಯಾಸ್ಟಿಕ್ ರೊಟ್ಟಿಗಾಳಿ ಹೊತ್ತೊಯ್ದು ಮಾರಿಬಂದ ರಾಕ್ಷಸರೇನಿಮ್ಮ ಮನೆಗಳ ಮೂಲೆಯಲ್ಲಿತಂಗಾಳಿ ಬೀಸುವ ಯಂತ್ರಗಳುನಮ್ಮ ನೆತ್ತಿ ಮೇಲೆಕಪ್ಪು ವಿಷದ ಸುಂಟರಗಾಳಿಅನಂತ ಮುಗಿಲ ಕೆಳಗೆದೇವರಿಟ್ಟ ಭೂಮಿ ದೋಣಿಹುಟ್ಟು ಹಾಕುವ ಕೈಗಳುನಿಮ್ಮ ಕಾರ್ಖಾನೆಗಳ ಮಸಿ ಬಳಿದುಕೊಂಡುನಾಯಿಕೊಡೆ ನಾಜೂಕು ಛತ್ರಿಯೊಳಗೆಬೆಳಕಿಲ್ಲದ, ದಾರಿಯಿಲ್ಲದ ಕಣ್ಣುಗಳು ಹಾಯಿಸಿ ನಿಂತಿವೆಯಾವ ದಾರಿಯೂ ಗೊತ್ತಿಲ್ಲದೆಎಲ್ಲಾ ತಿರುವುಗಳು ಸಾವಿನ ಸವಾರಿಗೆಕನಕಾಂಬರ ಹೂವಿಗೂ ಬೇಸರನಿಮ್ಮ ಎದೆಯ ಮೇಲೆ ತುಸು ಹೊತ್ತುಹೊರಳಾಡಿದ್ದಕ್ಕೆಗಾಳಿ ಕದ್ದವರುಹೊಸ ಭೂಮಿ ದೋಣಿಯಅನ್ವೇಷಣೆಯಲ್ಲಿ ಹೊರಟಿದ್ದಾರೆದಾರಿಯಲ್ಲಿ ನೀರು ಸಿಗದಿದ್ದರೆನೀವು ಕೊಂದ ಜೀವರಾಶಿಯಕಣ್ಣೀರು ಕುಡಿಯಬೇಡಿ!