ಕಾಂಗ್ರೆಸ್ ದೇಣಿಗೆ ಸಂಗ್ರಹ ಶೇ 75ರಷ್ಟು ಕುಸಿತ: ಈ ಸಾಲಿನಲ್ಲಿ ಪಡೆದದ್ದೆಷ್ಟು?
ನವದೆಹಲಿ: ಕಾಂಗ್ರೆಸ್ ಪಕ್ಷದ ದೇಣಿಗೆ ಸಂಗ್ರಹವು ಭಾರಿ ಪ್ರಮಾಣದಲ್ಲಿ ಕುಸಿದಿದೆ. 2025–26ನೇ ಸಾಲಿನಲ್ಲಿ ದೇಣಿಗೆಯಿಂದ ₹ 130.69 ಕೋಟಿ ಸಂಗ್ರಹಿಸಿದೆ.₹ 20,000ಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆ ಸಂಗ್ರಹದ ಕುರಿತು ಕಾಂಗ್ರೆಸ್ ನೀಡಿರುವ ವರದಿ ಆಧರಿಸಿ ಚುನಾವಣಾ ಆಯೋಗ ಈ ಮಾಹಿತಿ ನೀಡಿದೆ.ಈ ಪಕ್ಷಕ್ಕೆ ಕಳೆದ ಸಾಲಿನಲ್ಲಿ (2024-25ರಲ್ಲಿ) ಬಂದಿದ್ದ ₹ 517.39 ಕೋಟಿ

ನವದೆಹಲಿ: ಕಾಂಗ್ರೆಸ್ ಪಕ್ಷದ ದೇಣಿಗೆ ಸಂಗ್ರಹವು ಭಾರಿ ಪ್ರಮಾಣದಲ್ಲಿ ಕುಸಿದಿದೆ. 2025–26ನೇ ಸಾಲಿನಲ್ಲಿ ದೇಣಿಗೆಯಿಂದ ₹ 130.69 ಕೋಟಿ ಸಂಗ್ರಹಿಸಿದೆ.₹ 20,000ಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆ ಸಂಗ್ರಹದ ಕುರಿತು ಕಾಂಗ್ರೆಸ್ ನೀಡಿರುವ ವರದಿ ಆಧರಿಸಿ ಚುನಾವಣಾ ಆಯೋಗ ಈ ಮಾಹಿತಿ ನೀಡಿದೆ.ಈ ಪಕ್ಷಕ್ಕೆ ಕಳೆದ ಸಾಲಿನಲ್ಲಿ (2024-25ರಲ್ಲಿ) ಬಂದಿದ್ದ ₹ 517.39 ಕೋಟಿ ದೇಣಿಗೆಗೆ ಹೋಲಿಸಿದರೆ ಶೇ 75ರಷ್ಟು ಕುಸಿತವಾಗಿದೆ. 2023-24ರಲ್ಲಿ ₹ 281.48 ಕೋಟಿ ದೇಣಿಗೆ ಕಾಂಗ್ರೆಸ್ಗೆ ಪಾವತಿಯಾಗಿತ್ತು.2025–26ರಲ್ಲಿ ಬಿಜೆಪಿಗೆ ಎಷ್ಟು ದೇಣಿಗೆ ಹರಿದುಬಂದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ, 2024–25ರಲ್ಲಿ ಬರೋಬ್ಬರಿ ₹ 6,074.02 ಕೋಟಿ ಸಂಗ್ರಹಿಸಿತ್ತು. ಇದು, ಆ ಸಾಲಿನಲ್ಲಿ ಕಾಂಗ್ರೆಸ್ ಗಳಿಸಿದ್ದಕ್ಕಿಂತ 12 ಪಟ್ಟು ಹೆಚ್ಚು.ಪ್ರುಡೆಂಟ್ ಟ್ರಸ್ಟ್ನಿಂದ ದೇಣಿಗೆ ಕಡಿತಕಾಂಗ್ರೆಸ್ಗೆ ಪ್ರುಡೆಂಟ್ ಎಲೆಕ್ಟೊರಲ್ ಟ್ರಸ್ಟ್ ನೀಡುವ ದೇಣಿಗೆಯಲ್ಲಿ ಗಣನೀಯ ಕುಸಿತವಾಗಿದೆ. 2024–25ರಲ್ಲಿ ಬರೋಬ್ಬರಿ ₹ 216.34 ಕೋಟಿ ನೀಡಿದ್ದ ಈ ಟ್ರಸ್ಟ್ ಈ ಬಾರಿ ನೀಡಿರುವುದು ₹ 25 ಕೋಟಿ ಮಾತ್ರ. ಅಂದರೆ, ಶೇ 88ರಷ್ಟು ದೇಣಿಗೆ ಕುಸಿದಿದೆ.