ರಾಮನಗರ: ಹುರುಳಿ, ಮುಸುಕಿನ ಜೋಳ ಬೆಳೆ ವಿಮೆ ನೋಂದಣಿ ಪ್ರಾರಂಭ
ರಾಮನಗರ: 2026ರ ಹಿಂಗಾರು ಹಂಗಾಮಿನಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮೆ ಯೋಜನೆಯಡಿ ಹುರುಳಿ ಮತ್ತು ಮುಸುಕಿನ ಜೋಳ ಬೆಳೆಗೆ ವಿಮೆ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.ಹುರುಳಿಯನ್ನು ಕನಕಪುರ ತಾಲ್ಲೂಕಿನ ಐ. ಗೊಲ್ಲಹಳ್ಳಿ, ಅಚ್ಚಲು, ತುಂಗಣಿ, ಶಿವನಹಳ್ಳಿ, ಸೋಮದ್ಯಾಪನಹಳ್ಳಿ, ಕೊಳಗೊಂಡನಹಳ್ಳಿ, ಕಾಡಹಳ್ಳಿ ಗ್ರಾಮ ಪಂಚಾಯತಿಗಳಲ್ಲಿ, ಮಾಗಡಿ ತಾಲ್ಲೂಕಿನ ಅಜ್ಜನಹಳ್ಳ

ರಾಮನಗರ: 2026ರ ಹಿಂಗಾರು ಹಂಗಾಮಿನಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮೆ ಯೋಜನೆಯಡಿ ಹುರುಳಿ ಮತ್ತು ಮುಸುಕಿನ ಜೋಳ ಬೆಳೆಗೆ ವಿಮೆ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.ಹುರುಳಿಯನ್ನು ಕನಕಪುರ ತಾಲ್ಲೂಕಿನ ಐ. ಗೊಲ್ಲಹಳ್ಳಿ, ಅಚ್ಚಲು, ತುಂಗಣಿ, ಶಿವನಹಳ್ಳಿ, ಸೋಮದ್ಯಾಪನಹಳ್ಳಿ, ಕೊಳಗೊಂಡನಹಳ್ಳಿ, ಕಾಡಹಳ್ಳಿ ಗ್ರಾಮ ಪಂಚಾಯತಿಗಳಲ್ಲಿ, ಮಾಗಡಿ ತಾಲ್ಲೂಕಿನ ಅಜ್ಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಚನ್ನಪಟ್ಟಣ ತಾಲ್ಲೂಕಿನ ಮಳೂರು, ವಿರೂಪಾಕ್ಷಿಪುರ ಹೋಬಳಿ ಹಾಗೂ ರಾಮನಗರ ತಾಲ್ಲೂಕಿನ ಕಸಬಾ, ಕೂಟಗಲ್, ಕೈಲಾಂಚ, ಬಿಡದಿ ಹೋಬಳಿ ಮಟ್ಟಕ್ಕೆ ಹಾಗೂ ಮುಸುಕಿನ ಜೋಳವನ್ನು ಬಿಡದಿ ಹೋಬಳಿ ಮಟ್ಟಕ್ಕೆ ಅಧಿಸೂಚನೆ ಮಾಡಲಾಗಿದೆ.ಹುರುಳಿಗೆ ಶೇ 80ರಷ್ಟು ನಷ್ಟ ಪರಿಹಾರ ಮಟ್ಟವಿದ್ದು ಪ್ರತಿ ಎಕರೆಗೆ ₹9,514 ವಿಮೆ ಮೊತ್ತವಿದ್ದು, ರೈತರು ಶೇ 1.5ರಷ್ಟು ವಿಮಾ ಕಂತು ಪಾವತಿಸಬೇಕು. ಪ್ರತಿ ಎಕರೆಗೆ ₹143 ಸಾಮಾನ್ಯ ವಿಮಾ ಕಂತಿನ ಮೊತ್ತವಾಗಿದೆ. ಈ ಬೆಳೆಗೆ ನ. 16ರೊಳಗೆ ನೋಂದಣಿ ಮಾಡಿಕೊಳ್ಳಬೇಕು.8655988255, 9353700130261108-14-1707890557
Read the complete story at Prajavani