ಹಾಸನ ಡಿಸಿ ಮೇಲೆ ಎಚ್ಡಿಕೆ ಆರೋಪ ಆಧಾರರಹಿತ: ಸಚಿವ ಎಂ.ಬಿ. ಪಾಟೀಲ ಆಕ್ರೋಶ
ಬೆಂಗಳೂರು: ‘ಹಾಸನ ಜಿಲ್ಲಾಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪ ಆಧಾರರಹಿತ. ಬಹುಶಃ ಅವರು ಮುಖ್ಯಮಂತ್ರಿ ಆಗಿದ್ದಾಗ ಹೀಗೆ ಮಾಡಿರಬೇಕು’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.ಸುದ್ವಿಗಾರರ ಜೊತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಆಗಿದ್ದವರು ಬಾಯಿಗ
ಬೆಂಗಳೂರು: ‘ಹಾಸನ ಜಿಲ್ಲಾಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪ ಆಧಾರರಹಿತ. ಬಹುಶಃ ಅವರು ಮುಖ್ಯಮಂತ್ರಿ ಆಗಿದ್ದಾಗ ಹೀಗೆ ಮಾಡಿರಬೇಕು’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.ಸುದ್ವಿಗಾರರ ಜೊತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಆಗಿದ್ದವರು ಬಾಯಿಗೆ ಬಂದಂತೆ ಮಾತನಾಡಬಾರದು. ಯಾರಾದರೂ ಜಿಲ್ಲಾಧಿಕಾರಿ ಹತ್ತಿರ ಹಣ ತೆಗೆದುಕೊಳ್ಳುತ್ತಾರೆಯೇ? ಪ್ರತಿ ನಿತ್ಯವೂ ಇಂತಹ ಇಲ್ಲಸಲ್ಲದ ವಿಚಾರಗಳ ಬಗ್ಗೆ ಮಾತನಾಡುವುದನ್ನು ಅವರು ಬಿಡಬೇಕು’ ಎಂದರು.‘ಕುಮಾರಸ್ವಾಮಿ ಈಗ ಕೇಂದ್ರ ಕೈಗಾರಿಕಾ ಮಂತ್ರಿ. ಅವರು ಮಂಡ್ಯದಲ್ಲಿ ವಾಹನ ಪರೀಕ್ಷಾ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ 100 ಎಕರೆ ಕೇಳಿದ್ದರು. ನಾವು ಅದಕ್ಕೆ ಒಪ್ಪಿಕೊಂಡಿದ್ದೆವು. ಈಗ 500 ಎಕರೆ ಬೇಕು ಎನ್ನುತ್ತಿದ್ದಾರೆ. ನಾವು ಇದಕ್ಕೂ ಸಿದ್ಧವಿದ್ದು, ಈ ವಿಚಾರದಲ್ಲಿ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ’ ಎಂದರು.ಕೃಷ್ಣಾ ವಿವಾದ: ಕೇಂದ್ರ, ‘ಮಹಾ’ಗೆ ಪತ್ರ‘ಮಹಾರಾಷ್ಟ್ರ ಸರ್ಕಾರವು ಉಜ್ಜಿನಿ ಬಳಿ 40 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯದ ಅಣೆಕಟ್ಟು ಕಟ್ಟಲು ಮುಂದಾಗುತ್ತಿರುವುದರ ವಿರುದ್ಧ ಕೇಂದ್ರ ಜಲ ಸಂಪನ್ಮೂಲ ಸಚಿವರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು’ ಎಂದು ಎಂ.ಬಿ. ಪಾಟೀಲ ತಿಳಿಸಿದರು.‘ಮಹಾರಾಷ್ಟ್ರದ ತೀರ್ಮಾನವು ಕೃಷ್ಣಾ ನ್ಯಾಯಾಧಿಕರಣದ ತೀರ್ಪಿಗೆ ವಿರುದ್ಧ ವಾಗಿದೆ. ಕೃಷ್ಣಾ ನದಿ ನೀರಿನ ವಿಚಾರದಲ್ಲಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಇಂತಹ ಯೋಜನೆಗೆ ವಿಶ್ವ ಬ್ಯಾಂಕ್ ಹೇಗೆ ಹಣ ಕೊಡುತ್ತದೆ ಎನ್ನುವ ಪ್ರಶ್ನೆ ಬರುತ್ತದೆ’ ಎಂದು ಪಾಟೀಲ ಪ್ರಶ್ನಿಸಿದ್ದಾರೆ.