ಬೀದರ್| ಬಗದಲ್ ಸೇತುವೆ ಪರಿಶೀಲಿಸಿದ ಸಂಸದ ಸಾಗರ್ ಖಂಡ್ರೆ
ಬಗದಲ್(ಜನವಾಡ): ಬಿರುಕು ಬಿಟ್ಟಿರುವ ಬೀದರ್ ತಾಲ್ಲೂಕಿನ ಬಗದಲ್ ಸಮೀಪ ಬೀದರ್-ಚಿಂಚೋಳಿ ರಸ್ತೆಯಲ್ಲಿ ಇರುವ ಸೇತುವೆಗೆ ಸಂಸದ ಸಾಗರ್ ಖಂಡ್ರೆ ಈಚೆಗೆ ಭೇಟಿ ನೀಡಿ ಪರಿಶೀಲಿಸಿದರು.ಸೇತುವೆಯ ಪ್ರಸ್ತುತ ಸ್ಥಿತಿಗತಿ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಾಂತ್ರಿಕ ತಜ್ಞರಿಂದ ಸಮಗ್ರ ಪರಿಶೀಲನೆ ಹಾಗೂ ಮೌಲ್ಯಮಾಪನ ನಡೆಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗ

ಬಗದಲ್(ಜನವಾಡ): ಬಿರುಕು ಬಿಟ್ಟಿರುವ ಬೀದರ್ ತಾಲ್ಲೂಕಿನ ಬಗದಲ್ ಸಮೀಪ ಬೀದರ್-ಚಿಂಚೋಳಿ ರಸ್ತೆಯಲ್ಲಿ ಇರುವ ಸೇತುವೆಗೆ ಸಂಸದ ಸಾಗರ್ ಖಂಡ್ರೆ ಈಚೆಗೆ ಭೇಟಿ ನೀಡಿ ಪರಿಶೀಲಿಸಿದರು.ಸೇತುವೆಯ ಪ್ರಸ್ತುತ ಸ್ಥಿತಿಗತಿ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಾಂತ್ರಿಕ ತಜ್ಞರಿಂದ ಸಮಗ್ರ ಪರಿಶೀಲನೆ ಹಾಗೂ ಮೌಲ್ಯಮಾಪನ ನಡೆಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.‘ಸಾರ್ವಜನಿಕರ ಸುರಕ್ಷತೆ ಬಹಳ ಮುಖ್ಯವಾಗಿದೆ. ಹೀಗಾಗಿ ಸೇತುವೆಯನ್ನು ಬಳಸುವ ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.261108-33-552395374
Read the complete story at Prajavani