ಟ್ರಂಪ್ಗೆ ಹಿನ್ನಡೆ: ಭಾರತೀಯ ಮೂಲದ ಅಮೆರಿಕನ್ನರ ನಿಲುವು ಏನಾಗಿತ್ತು?
ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ಅಮೆರಿಕನ್ನರು ರಿಪಬ್ಲಿಕನ್ ಪಕ್ಷದ ವಿರುದ್ಧ ಮತ ಚಲಾಯಿಸಲು ಪ್ರಮುಖ ಕಾರಣ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನೀತಿಗಳ ಮೇಲಿನ ಆಕ್ರೋಶವೇ ಹೊರತು, ಅಮೆರಿಕದ ವಿದೇಶಾಂಗ ನೀತಿಯಾಗಲಿ ಅಥವಾ ಭಾರತದ ಕಡೆಗಿನ ಧೋರಣೆಯಾಗಲಿ ಅಲ್ಲ ಎಂದು ಅಮೆರಿಕದ ಮತದಾರರ ಧೋರಣೆಗಳನ್ನು ನಿಕಟವಾಗಿ ಅಧ್ಯಯನ ಮಾಡಿರುವ ತಜ್ಞೆ ಸುಮ

ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ಅಮೆರಿಕನ್ನರು ರಿಪಬ್ಲಿಕನ್ ಪಕ್ಷದ ವಿರುದ್ಧ ಮತ ಚಲಾಯಿಸಲು ಪ್ರಮುಖ ಕಾರಣ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನೀತಿಗಳ ಮೇಲಿನ ಆಕ್ರೋಶವೇ ಹೊರತು, ಅಮೆರಿಕದ ವಿದೇಶಾಂಗ ನೀತಿಯಾಗಲಿ ಅಥವಾ ಭಾರತದ ಕಡೆಗಿನ ಧೋರಣೆಯಾಗಲಿ ಅಲ್ಲ ಎಂದು ಅಮೆರಿಕದ ಮತದಾರರ ಧೋರಣೆಗಳನ್ನು ನಿಕಟವಾಗಿ ಅಧ್ಯಯನ ಮಾಡಿರುವ ತಜ್ಞೆ ಸುಮಿತ್ರಾ ಬದ್ರಿನಾಥನ್ ಸ್ಪಷ್ಟಪಡಿಸಿದ್ದಾರೆ.‘ಪಿಟಿಐ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅಮೆರಿಕ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕಿ ಸುಮಿತ್ರಾ ಬದ್ರಿನಾಥನ್, 'ಟ್ರಂಪ್ ಅವರ ಕಠಿಣ ವಲಸೆ ನೀತಿಗಳಿಂದಾಗಿ ಕಷ್ಟಕರ ವಾತಾವರಣ ಇದ್ದರೂ, ಯುರೋಪಿನ ದೇಶಗಳಿಗಿಂತ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಅಮೆರಿಕವೇ ಸೂಕ್ತ ಎಂದು ಭಾರತೀಯ ಅಮೆರಿಕನ್ನರು ನಂಬಿದ್ದಾರೆ' ಎಂದು ತಿಳಿಸಿದ್ದಾರೆ.ಅಮೆರಿಕದಲ್ಲಿ ಭಾರತೀಯರೊಂದಿಗೆ ದೀಪಾವಳಿ ಆಚರಿಸಿದ ಡೊನಾಲ್ಡ್ ಟ್ರಂಪ್Podcast | ಮಧ್ಯಂತರ ಪರೀಕ್ಷೆ: ಟ್ರಂಪ್ ಸೋಲು–ಹುಚ್ಚು ನೀತಿಗಳಿಗೆ ಮತದಾರನ ಶಿಕ್ಷೆ ಮತದಾರರಿಗೆ ಭಾರತದ ಮೇಲಿನ ನಿಲುವು ಮುಖ್ಯವಲ್ಲವೇ? ಅಮೆರಿಕದ ರಾಜಕಾರಣಿಗಳು ಭಾರತದ ಬಗ್ಗೆ ಯಾವ ನಿಲುವು ಹೊಂದಿದ್ದಾರೆಂಬುದನ್ನು ಭಾರತೀಯ ಅಮೆರಿಕನ್ನರು ಗಂಭೀರವಾಗಿ ಪರಿಗಣಿಸುತ್ತಾರೆಯೇ ಎಂದು ನಾವು ನಿರಂತರವಾಗಿ ಅಧ್ಯಯನ ಮಾಡಿದ್ದೇವೆ. ಆದರೆ, ಅದಕ್ಕೆ ಸಿಕ್ಕ ಉತ್ತರ ಸದಾ ‘ಇಲ್ಲ’ ಎಂದೇ ಆಗಿದೆ ಎಂದು ಬದ್ರಿನಾಥನ್ ಹೇಳಿದ್ದಾರೆ.ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ನ ದಕ್ಷಿಣ ಏಷ್ಯಾ ಕಾರ್ಯಕ್ರಮದ ನಿರ್ದೇಶಕ ಮಿಲನ್ ವೈಷ್ಣವ್ ಹಾಗೂ ಇತರರೊಂದಿಗೆ ಸೇರಿ ಬದ್ರಿನಾಥನ್ ಅವರು, ಅಮೆರಿಕದ ಚುನಾವಣಾ ರಾಜಕಾರಣದಲ್ಲಿ ಭಾರತೀಯ ವಲಸಿಗರು ಹೇಗೆ ಭಾಗವಹಿಸುತ್ತಾರೆ ಎಂಬುದನ್ನು ತಿಳಿಯಲು ‘ಭಾರತೀಯ ಅಮೆರಿಕನ್ನರ ದೃಷ್ಟಿಕೋನ ಸಮೀಕ್ಷೆ’ ಬಿಡುಗಡೆ ಮಾಡಿದ್ದಾರೆ.ಚುನಾವಣೆಯ ಪ್ರಮುಖ ಅಂಶಗಳು:*ಇತ್ತೀಚೆಗೆ ಮುಕ್ತಾಯಗೊಂಡ ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ 6 ಮಂದಿ ಅಮೆರಿಕ ಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದಾರೆ. 30ಕ್ಕೂ ಹೆಚ್ಚು ಮಂದಿ ರಾಜ್ಯ ಶಾಸಕಾಂಗ ಮತ್ತು ಇತರ ಸಾರ್ವಜನಿಕ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. *ಭಾರತ ಮೂಲದ ನಿತ್ಯಾ ರಾಮನ್ (45) ಅವರು ಲಾಸ್ ಏಂಜಲೀಸ್ನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ದೇಶದ ಎರಡನೇ ಅತಿದೊಡ್ಡ ನಗರದ ಮೊದಲ ದಕ್ಷಿಣ ಏಷ್ಯಾ ಮೂಲದ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಅವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.*ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಜೊಹ್ರಾನ್ ಮಮ್ದಾನಿ ಅವರು ಜನವರಿಯಲ್ಲಿ ಆಯ್ಕೆಯಾಗಿದ್ದರು. ಅಮೆರಿಕದ ಎರಡು ಅತಿದೊಡ್ಡ ನಗರಗಳಿಗೆ ಈಗ ಭಾರತೀಯ ಮೂಲದ ವ್ಯಕ್ತಿಗಳು ಮೇಯರ್ಗಳಾಗಿರುವುದು ಗಮನಾರ್ಹ.*ಅಮೆರಿಕದ 2026ರ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಸುಹಾಸ್ ಸುಬ್ರಮಣ್ಯಂ ಮತ್ತು ಅರುಣಾ ಮಿಲ್ಲರ್ ಮರು ಆಯ್ಕೆಯಾಗಿದ್ದರೆ, ಪಿಯಾ ದಾಂಡಿಯಾ ಮೊದಲ ಬಾರಿಗೆ ಅಮೆರಿಕದ ಕಾಂಗ್ರೆಸ್ಗೆ (ಸಂಸತ್) ಆಯ್ಕೆಯಾಗಿದ್ದಾರೆ.*ಒಹಿಯೊ ರಾಜ್ಯದ ಗವರ್ನರ್ ಸ್ಥಾನಕ್ಕೆ ತೀವ್ರ ಸ್ಪರ್ಧೆ ನಡೆಸಿದ್ದ ರಿಪಬ್ಲಿಕನ್ ಪಕ್ಷದ ವಿವೇಕ್ ರಾಮಸ್ವಾಮಿ ಪರಾಭವಗೊಂಡಿದ್ದಾರೆ.*ಅಮೆರಿಕ ಕಾಂಗ್ರೆಸ್ನ ಮೇಲಿನ ನಿಯಂತ್ರಣವನ್ನು ರಿಪಬ್ಲಿಕನ್ ಪಕ್ಷ ಕಳೆದುಕೊಂಡಿದ್ದು, ಟ್ರಂಪ್ ತಮ್ಮ ಆಡಳಿತದ ಕೊನೆಯ ಎರಡು ವರ್ಷಗಳಲ್ಲಿ ದುರ್ಬಲ ಅಧ್ಯಕ್ಷರಾಗುವ ಪರಿಸ್ಥಿತಿ ಎದುರಾಗಿದೆ.ಟ್ರಂಪ್ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖೆಗೆ ಶಪಥಸಂಪಾದಕೀಯ: ಮಧ್ಯಂತರ ಪರೀಕ್ಷೆ; ಟ್ರಂಪ್ ಸೋಲು –ಹುಚ್ಚು ನೀತಿಗಳಿಗೆ ಮತದಾರನ ಶಿಕ್ಷೆ ಫಲಿತಾಂಶಕ್ಕೆ ಹಣದುಬ್ಬರವೇ ಕಾರಣವೇ? ಇರಾನ್ ಯುದ್ಧದಿಂದ ಉಂಟಾದ ತೀವ್ರ ಹಣದುಬ್ಬರದಿಂದ ಜನರಲ್ಲಿ ಆಕ್ರೋಶ ಇತ್ತು. ಹಾಗಾಗಿ ತಮ್ಮ ಪಕ್ಷ ಸೋತಿದೆ ಎಂದು ಅಧ್ಯಕ್ಷ ಟ್ರಂಪ್ ಒಪ್ಪಿಕೊಂಡಿದ್ದಾರೆ. ಆದರೆ ಕೇವಲ ಹಣದುಬ್ಬರ ಮತ್ತು ತೈಲ ಬೆಲೆಯೇ ರಿಪಬ್ಲಿಕನ್ ಪಕ್ಷದ ಸೋಲಿಗೆ ಕಾರಣ ಎನ್ನುವುದು ವಿಷಯಗಳ ಸರಳೀಕರಣವಾಗುತ್ತದೆ ಎಂದು ಬದ್ರಿನಾಥನ್ ವಾದಿಸುತ್ತಾರೆ.‘ಅಮೆರಿಕದ ಸಾಮಾನ್ಯ ನಾಗರಿಕರಿಗೆ ಯಾವ ವಿಷಯಗಳು ಪರಿಣಾಮ ಬೀರುತ್ತವೆಯೋ, ಅದೇ ವಿಷಯಗಳು ಭಾರತೀಯ ಅಮೆರಿಕನ್ನರನ್ನೂ ಪರಿಣಾಮ ಬೀರುತ್ತವೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಉದ್ಯೋಗ, ಆರ್ಥಿಕತೆ ಮತ್ತು ಜೀವನ ವೆಚ್ಚದ ಬಗ್ಗೆ ಅವರು ಮಾತನಾಡುತ್ತಾರೆ. ಬಹುಶಃ ಈ ಬಾರಿ ಎಚ್-1ಬಿ ವೀಸಾ, ತಾರತಮ್ಯದಂತಹ ವಿಷಯಗಳು ಸ್ವಲ್ಪ ಹೆಚ್ಚಿನ ಪಾತ್ರ ವಹಿಸಿರಬಹುದು’ ಎಂದವರು ಅಭಿಪ್ರಾಯಪಟ್ಟಿದ್ದಾರೆ.ಅಮೆರಿಕ ಬಿಟ್ಟು ಹೋಗುತ್ತಿಲ್ಲ ಭಾರತೀಯರು: ಕಠಿಣ ವಲಸೆ ನೀತಿಗಳು ಮತ್ತು ಭಾರತೀಯರ ಮೇಲಿನ ತಾರತಮ್ಯದ ಅನುಭವಗಳಿದ್ದರೂ, ಅಮೆರಿಕದಲ್ಲಿ ಅಧ್ಯಯನ ಮಾಡುವ ಹಾಗೂ ಕೆಲಸ ಮಾಡುವ ಆಸಕ್ತಿ ಕಡಿಮೆಯಾಗಿಲ್ಲ ಎಂದು ಬದ್ರಿನಾಥನ್ ಹೇಳುತ್ತಾರೆ.‘ತಾರತಮ್ಯವಿದೆ ಎಂಬ ಗ್ರಹಿಕೆ ಇದ್ದರೂ, ಪ್ರತಿ ಇಬ್ಬರಲ್ಲಿ ಒಬ್ಬರು ಪ್ರಮುಖವಾಗಿ ವರ್ಣದ ಆಧಾರದ ಮೇಲೆ ತಾರತಮ್ಯವನ್ನು ಎದುರಿಸುತ್ತಾರೆ. ಆದರೂ ಅಮೆರಿಕವನ್ನು ತೊರೆದು ಹೋಗುವ ಪ್ರವೃತ್ತಿ ಕಂಡುಬಂದಿಲ್ಲ. ಜನರು ಕೆಲಸ ಮಾಡಲು ಮತ್ತು ಓದಲು ಅಮೆರಿಕಕ್ಕೆ ಬರಲು ಇಂದಿಗೂ ಉತ್ಸುಕರಾಗಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ ವಾಣಿಜ್ಯ ಒಪ್ಪಂದ ಮೇಲೆ ಪರಿಣಾಮ ಬೀರದು:ಮೂಲಗಳುಅಮೆರಿಕದ ಸಂಸತ್ತಿನ ಮಧ್ಯಂತರ ಚುನಾವಣೆ: ಭಾರತೀಯ ಅಮೆರಿಕನ್ ಸಬಾ ಹೈದರ್ಗೆ ಗೆಲುವು