ಗಡಿ ದಾಟಿ ಪರಭಾಷೆಯಲ್ಲೂ ಛಾಪು ಮೂಡಿಸುತ್ತಿರುವ ಕರುನಾಡಿನ ‘ಜೆನ್ ಝೀ’ ಗಾಯಕರು
ಕನ್ನಡ ಚಿತ್ರರಂಗದ ಇಂದಿನ ‘ಜೇನ್ ಝೀ’ ಗಾಯಕರು ತಮ್ಮ ವಿಶಿಷ್ಟ ಧ್ವನಿ, ಆಧುನಿಕ ಶೈಲಿ ಹಾಗೂ ನವೀನ ಸಂಗೀತ ಪ್ರಯೋಗಗಳ ಮೂಲಕ ರಸಿಕರ ಮನಗೆಲ್ಲುತ್ತಿದ್ದಾರೆ. ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ, ತಮ್ಮ ಗಾಯನ ಪ್ರತಿಭೆಯ ಗಡಿಗಳನ್ನು ವಿಸ್ತರಿಸಿಕೊಂಡು ಪರಭಾಷೆಯ ಸಂಗೀತ ಲೋಕದಲ್ಲೇ ಹೊಸ ಅಲೆಯನ್ನೇ ಸೃಷ್ಟಿಸುತ್ತಿದ್ದಾರೆ.ಸಂಜಿತ್ ಹೆಗ್ಡೆ, ಸಾನ್ವಿ ಸುದೀಪ್ ಅವರಂತಹ ಉದಯ

ಕನ್ನಡ ಚಿತ್ರರಂಗದ ಇಂದಿನ ‘ಜೇನ್ ಝೀ’ ಗಾಯಕರು ತಮ್ಮ ವಿಶಿಷ್ಟ ಧ್ವನಿ, ಆಧುನಿಕ ಶೈಲಿ ಹಾಗೂ ನವೀನ ಸಂಗೀತ ಪ್ರಯೋಗಗಳ ಮೂಲಕ ರಸಿಕರ ಮನಗೆಲ್ಲುತ್ತಿದ್ದಾರೆ. ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ, ತಮ್ಮ ಗಾಯನ ಪ್ರತಿಭೆಯ ಗಡಿಗಳನ್ನು ವಿಸ್ತರಿಸಿಕೊಂಡು ಪರಭಾಷೆಯ ಸಂಗೀತ ಲೋಕದಲ್ಲೇ ಹೊಸ ಅಲೆಯನ್ನೇ ಸೃಷ್ಟಿಸುತ್ತಿದ್ದಾರೆ.ಸಂಜಿತ್ ಹೆಗ್ಡೆ, ಸಾನ್ವಿ ಸುದೀಪ್ ಅವರಂತಹ ಉದಯೋನ್ಮುಖ ಗಾಯಕರು ಕನ್ನಡದಲ್ಲಿ ಸೂಪರ್ಹಿಟ್ ಗೀತೆಗಳನ್ನು ನೀಡುವ ಜೊತೆಗೆ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲೂ ಹಾಡುಗಳನ್ನು ಹಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಸಂಜಿತ್ ಹೆಗ್ಡೆಸಂಜಿತ್ ಹೆಗ್ಡೆಕನ್ನಡ ಚಿತ್ರರಂಗದ ಉದಯೋನ್ಮುಖ ಗಾಯಕ ಸಂಜಿತ್ ಹೆಗ್ಡೆ ತಮ್ಮ ವಿಶಿಷ್ಟ ಧ್ವನಿ ಹಾಗೂ ಗಾಯನ ಶೈಲಿಯಿಂದ ಅಲ್ಪಾವಧಿಯಲ್ಲೇ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ಜೀ ಕನ್ನಡದ ಜನಪ್ರಿಯ ಗಾಯನ ರಿಯಾಲಿಟಿ ಶೋ ಸರಿಗಮಪ ಮೂಲಕ ತಮ್ಮ ಸಂಗೀತ ಪಯಣವನ್ನು ಬೆಳೆಸಿಕೊಂಡು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ವಿಭಿನ್ನ ಶೈಲಿಯ ಮೆಲೋಡಿ ಹಾಗೂ ಕಿವಿಗೆ ಇಂಪೆನಿಸುವ ಎನರ್ಜಿಟಿಕ್ ಹಾಡುಗಳ ಮೂಲಕ ಭಾರತೀಯ ಸಂಗೀತ ಲೋಕದಲ್ಲಿ ಹೊಸ ಸಂಚಲನ ಮೂಡಿಸಿರುವ ಇವರು, ಇಂದಿನ ಯುವ ಪೀಳಿಗೆಯ ಅತ್ಯಂತ ಜನಪ್ರಿಯ ಗಾಯಕರಾಗಿ ಹೊರಹೊಮ್ಮಿದ್ದಾರೆ.ಸಂಜಿತ್ ಅವರು ಕನ್ನಡದ ‘ಗತವೈಭವ’, ‘ಕುಶ್ಕಾ’, ‘ಚಮಕ್’, ‘ಬನಾರಸ್’ ಮುಂತಾದ ಸಿನಿಮಾಗಳ ಸೂಪರ್ಹಿಟ್ ಹಾಡುಗಳ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಕೇವಲ ಕನ್ನಡಕ್ಕಷ್ಟೇ ಸೀಮಿತವಾಗದೆ ತಮ್ಮ ಗಾಯನ ಪ್ರತಿಭೆಯನ್ನು ಪರಭಾಷೆಗಳಿಗೂ ವಿಸ್ತರಿಸಿರುವ ಇವರು, ತಮಿಳು, ತೆಲುಗು ಹಾಗೂ ಹಿಂದಿ ಮಲಯಾಳಂನಲ್ಲೂ ಹಾಡುಗಳನ್ನು ಹಾಡುವ ಮೂಲಕ ದಕ್ಷಿಣ ಭಾರತ ಸೇರಿದಂತೆ ಭಾರತೀಯ ಚಿತ್ರರಂಗದ ಪ್ರಮುಖ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ.ಸಾನ್ವಿ ಸುದೀಪ್ಸಾನ್ವಿ ಸುದೀಪ್ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ತಮ್ಮ ವಿಶಿಷ್ಟ ಗಾಯನ ಪ್ರತಿಭೆಯ ಮೂಲಕ ಚಿಕ್ಕ ವಯಸ್ಸಿನಲ್ಲೇ ಸಂಗೀತ ಲೋಕದಲ್ಲಿ ತಮ್ಮದೇ ಆದ ಗುರುತು ಮೂಡಿಸುತ್ತಿದ್ದಾರೆ. ಕೇವಲ ತಂದೆಯ ಹೆಸರಿಗಷ್ಟೇ ಸೀಮಿತವಾಗದೆ, ತಮ್ಮ ಅದ್ಭುತ ಧ್ವನಿ ಹಾಗೂ ರಾಗ ಸಂಯೋಜನೆಯ ಕೌಶಲದಿಂದ ಸಂಗೀತ ಪ್ರಿಯರ ಗಮನ ಸೆಳೆಯುತ್ತಿದ್ದಾರೆ.‘ಮಸ್ತ್ ಮಲೈಕಾ’, ‘ಮ್ಯಾಂಗೋ ಪಚ್ಚಾ’ ಸಿನಿಮಾದ ‘ಗಾಳಿ ನಿಂತಿದೆ’, ‘ಅರಗಿಣಿಯೇ’, ‘ದಿ ಇಂಟ್ರೊಡಕ್ಷನ್’ ಹಿಟ್–3 ಸಿನಿಮಾದ ‘ಹೋರಾಟವೇ 3.0’ ಹಾಡುಗಳನ್ನು ಹಾಡಿದ್ದಾರೆ. ಸಾನ್ವಿ ಅವರ ಗಾಯನದ ಶೈಲಿ ಹಾಗೂ ಸ್ವರ ವಿನ್ಯಾಸವು ಇಂದಿನ ಯುವ ಪೀಳಿಗೆಗೆ ಪ್ರಿಯವಾಗಿದ್ದು, ಕನ್ನಡದಲ್ಲಿ ಅವರು ಹಾಡಿರುವ ಗೀತೆಗಳು ಅಪಾರ ಮೆಚ್ಚುಗೆ ಪಡೆದಿವೆ. ಕೇವಲ ಕನ್ನಡಕ್ಕೆ ಸೀಮಿತವಾಗದೆ ತಮ್ಮ ಗಾಯನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಸಾನ್ವಿ, ತಮಿಳು ನಟ ವಿಜಯ್ ಮಗ ಜೇಸನ್ ಸಂಜಯ್ ಅವರ ನಿರ್ದೇಶನದ ‘ಸಿಗ್ಮಾ’ ಸಿನಿಮಾದ ‘ಸುಲೋಚನ’ ಹಾಡಿಗೆ ಧ್ವನಿ ನೀಡಿದ್ದಾರೆ. ಅದರಂತೆ ತೆಲುಗು ಹಾಗೂ ಇಂಗ್ಲಿಷ್ ಭಾಷೆಗಳಲ್ಲೂ ಹಾಡುಗಳು ಮತ್ತು ಕವರ್ ಸಾಂಗ್ಗಳನ್ನು ಹಾಡುವ ಮೂಲಕ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.ಶ್ರೀನಿಧಿ ಜಿ. ಶಾಸ್ತ್ರಿಶ್ರೀನಿಧಿ ಜಿ. ಶಾಸ್ತ್ರಿ ಶ್ರೀನಿಧಿ ಜಿ. ಶಾಸ್ತ್ರಿ ಅವರು ಕರ್ನಾಟಕದ ಉದಯೋನ್ಮುಖ ಹಿನ್ನೆಲೆ ಗಾಯಕಿಯಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ ಸೀಸನ್-17’ರ ವಿಜೇತೆಯಾಗಿ ಹೊರಹೊಮ್ಮಿದ್ದ ಇವರು, ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ಪರಭಾಷೆಯಲ್ಲೂ ತಮ್ಮ ಮಧುರ ಗಾಯನದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.ಇತ್ತೀಚೆಗೆ ರಾಷ್ಟ್ರೀಯ ಮಟ್ಟದ ಪ್ರಸಿದ್ಧ ಗಾಯನ ರಿಯಾಲಿಟಿ ಶೋ ‘ಇಂಡಿಯನ್ ಐಡಲ್’ನಲ್ಲಿ ಭಾಗವಹಿಸಿದ್ದ ಶ್ರೀನಿಧಿ, ತಮ್ಮ ಸುಮಧುರ ಕಂಠದಿಂದ ತೀರ್ಪುಗಾರರ ಅಪಾರ ಮೆಚ್ಚುಗೆ ಗಳಿಸಿದ್ದಾರೆ. ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕರಾಗಿ ಸಕ್ರಿಯರಾಗಿರುವ ಇವರು ‘ಜಲಪಾತ’ ಚಿತ್ರದ ‘ಎಲ್ಲಿ ಹೋದನೆ ಸಖಿ’ ಹಾಗೂ ‘ಕನ್ನಾಳೆ’ ಮುಂತಾದ ಜನಪ್ರಿಯ ಹಾಡುಗಳಿಗೆ ಧ್ವನಿಯಾಗಿದ್ದಾರೆ.ಶಿವಾನಿ ನವೀನ್ಶಿವಾನಿ ನವೀನ್ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ’ ಅದೆಷ್ಟೋ ಉದಯೋನ್ಮುಖ ಗಾಯಕರನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದೆ. ರಾಜ್ಯದ ಗಾಯಕರು ಕೇವಲ ಕನ್ನಡದಲ್ಲಷ್ಟೇ ಅಲ್ಲದೆ, ಪರಭಾಷೆಯಲ್ಲೂ ತಮ್ಮ ಗಾಯನ ಪ್ರತಿಭೆಯಿಂದ ಸದ್ದು ಮಾಡುತ್ತಿದ್ದಾರೆ. ಚಿಕ್ಕಮಗಳೂರಿನ ಗಾಯಕಿ ಶಿವಾನಿ ನವೀನ್, ತಮಿಳಿನ ‘ಸರಿಗಮಪ ಸೀಸನ್-5’ರಲ್ಲಿ ತಮ್ಮ ಅದ್ಭುತ ಗಾಯನದ ಮೂಲಕ ಪರಭಾಷೆಯಲ್ಲೂ ಭಾರಿ ಛಾಪು ಮೂಡಿಸಿದ್ದಾರೆ.ಚಿಕ್ಕಮಗಳೂರು ಮೂಲದ ಶಿವಾನಿ, ‘ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್-19’ರಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಕನ್ನಡದಲ್ಲಿ ತಮ್ಮ ಮಧುರ ಧ್ವನಿಯ ಮೂಲಕ ವೀಕ್ಷಕರ ಮನಗೆದ್ದಿದ್ದ ಶಿವಾನಿ, ತಮಿಳು ‘ಸರಿಗಮಪ’ ಆಡಿಷನ್ನಲ್ಲಿ ‘ಸೋಜುಗಾದ ಸೂಜುಮಲ್ಲಿಗೆ’ ಹಾಡನ್ನು ಹಾಡಿ ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದರು.ಬಳಿಕ ನಡೆದ ‘ಎಸ್.ಪಿ.ಬಿ. ಸುತ್ತಿ’ನಲ್ಲಿ ರಜನಿಕಾಂತ್ ಅಭಿನಯದ ‘ತಂಗಮಗನ್’ ಸಿನಿಮಾದ ‘ವಾ ವಾ ಪಕ್ಕಂ ವಾ’ ಹಾಡನ್ನು ಅತ್ಯಂತ ಕೌಶಲದಿಂದ ಹಾಡಿ, ವೀಕ್ಷಕರು ಹಾಗೂ ತೀರ್ಪುಗಾರರು ಎದ್ದುನಿಂತು ಚಪ್ಪಾಳೆ ತಟ್ಟುವಂತೆ ಮಾಡಿದ್ದರು.‘ಟಿಕೆಟ್ ಟು ಫಿನಾಲೆ’ ಹಂತದಲ್ಲಿ ಶಿವಾನಿ ‘ಮೈಯಾ ಮೈಯಾ’ ಹಾಡನ್ನು ಅದ್ಭುತವಾಗಿ ಹಾಡಿದ್ದರು. ಈ ಹಾಡನ್ನು ಕೇಳಿ ವೇದಿಕೆಗೆ ಬಂದ ಜನಪ್ರಿಯ ಹಿನ್ನೆಲೆ ಗಾಯಕಿ ಶ್ವೇತಾ ಮೋಹನ್, ‘ನಿಮ್ಮ ‘ಸೋಜುಗಾದ ಸೂಜುಮಲ್ಲಿಗೆ’ ಹಾಡನ್ನು ಕೇಳಿ ನಟ ಧನುಷ್ ಅವರು, ‘ಯಾರೀ ಗಾಯಕಿ? ಇವರಿಂದ ನನ್ನ ಸಿನಿಮಾದಲ್ಲಿ ಹಾಡು ಹಾಡಿಸಬೇಕು’ ಎಂದು ವಿಚಾರಿಸಿದ್ದರು ಎಂಬ ಸಂತಸದ ಸುದ್ದಿಯನ್ನು ಹಂಚಿಕೊಂಡರು. ಅಲ್ಲದೆ, ಶಿವಾನಿಗೆ ಶೀಘ್ರದಲ್ಲೇ ಚಿತ್ರರಂಗದಲ್ಲಿ ದೊಡ್ಡ ಅವಕಾಶ ಸಿಗಲಿ ಎಂದು ಹಾರೈಸಿದ್ದರು.ಶಿವಾನಿ ಶಿವದಾಸ್ ಸ್ವಾಮಿಶಿವಾನಿ ಶಿವದಾಸ್ ಸ್ವಾಮಿ ಕರ್ನಾಟಕದ ಬೀದರ್ ಮೂಲದ ಗಾಯಕಿ ಶಿವಾನಿ ಶಿವದಾಸ್ ಸ್ವಾಮಿ ಅವರು ಕನ್ನಡದ ಸರಿಗಮಪ ಸೀಸನ್ 21ರ ವಿಜೇತೆಯಾಗಿ ಹೊರಹೊಮ್ಮಿದ್ದರು. ತಮ್ಮ ಸುಮಧುರ ಕಂಠ ಹಾಗೂ ವಿಭಿನ್ನ ಗಾಯನ ಶೈಲಿಯ ಮೂಲಕ ಕಾರ್ಯಕ್ರಮದ ಆರಂಭದಿಂದಲೂ ಪ್ರೇಕ್ಷಕರ ಮತ್ತು ತೀರ್ಪುಗಾರರ ಗಮನ ಸೆಳೆದಿದ್ದರು.ಬೀದರ್ನಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿರುವ ಶಿವಾನಿ, ಅಲ್ಲಿನ ಕರ್ನಾಟಕ ಆರ್ಟ್ಸ್, ಸೈನ್ಸ್ ಆ್ಯಂಡ್ ಕಾಮರ್ಸ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿರುವ ಇವರು, ಇದೀಗ ರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ.ಕನ್ನಡದ ಸರಿಗಮಪ ಜನಪ್ರಿಯತೆಯಿಂದ ಪರಭಾಷೆಯ ಪ್ರೇಕ್ಷಕರಿಗೂ ಚಿರಪರಿಚಿತರಾಗಿರುವ ಶಿವಾನಿ, ಜೀ ಟಿವಿಯ (Zee TV) ರಾಷ್ಟ್ರೀಯ ಮಟ್ಟದ ಪ್ರಸಿದ್ಧ ಸಂಗೀತ ರಿಯಾಲಿಟಿ ಶೋ ಸರಿಗಮಪ 2026ರಲ್ಲೂ ಭಾಗವಹಿಸಿ ತಮ್ಮ ಅದ್ಭುತ ಗಾಯನದ ಮೂಲಕ ದೇಶದಾದ್ಯಂತ ಗಮನ ಸೆಳೆದಿದ್ದಾರೆ.ದಿಯಾ ಹೆಗಡೆದಿಯಾ ಹೆಗಡೆಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಬಾಲಗಾಯಕಿ ದಿಯಾ ಹೆಗಡೆ ತಮ್ಮ ಮಧುರ ಹಾಗೂ ಅದ್ಭುತ ಗಾಯನದ ಮೂಲಕವೇ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ ಸೀಸನ್-19’ರಲ್ಲಿ ಗಾಯನ ಪ್ರದರ್ಶನ ನೀಡುವ ಮೂಲಕ ಅವರು ವೀಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದರು.ಕನ್ನಡ ಕಿರುತೆರೆಯಲ್ಲಿ ಸಖತ್ ಸದ್ದು ಮಾಡಿದ ಈ ಪುಟಾಣಿ ಗಾಯಕಿ, ಕೇವಲ ಕನ್ನಡಕ್ಕಷ್ಟೇ ಸೀಮಿತವಾಗದೆ ರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ‘ಇಂಡಿಯನ್ ಐಡಲ್ 14 ಗ್ರ್ಯಾಂಡ್ ಫಿನಾಲೆ’ ವೇದಿಕೆಯಲ್ಲಿ ಪ್ರದರ್ಶನ ನೀಡಿ ರಂಜಿಸಿದ್ದ ದಿಯಾ, ಸೋನಿ ಟಿವಿಯಲ್ಲಿ ಪ್ರಸಾರವಾದ ‘ಸೂಪರ್ ಸ್ಟಾರ್ ಸಿಂಗರ್ ಸೀಸನ್-3’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ದಿಯಾ ಅವರ ಗಾಯನ ಶೈಲಿಗೆ ಮನಸೋತ ತೀರ್ಪುಗಾರರು, ಕಾರ್ಯಕ್ರಮದ ಸಮಾರೋಪದಲ್ಲಿ ಅವರಿಗೆ ‘ಬೆಸ್ಟ್ ಎಂಟರ್ಟೈನರ್’ ಪ್ರಶಸ್ತಿ ನೀಡಿ ಗೌರವಿಸಿದ್ದರು.ದಿಯಾ ಅವರ ಗಾಯನ ಪ್ರತಿಭೆಗೆ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್, ರಕ್ಷಿತಾ ಪ್ರೇಮ್, ವಿಜಯ ಪ್ರಕಾಶ್, ಅರ್ಜುನ್ ಜನ್ಯ ಹಾಗೂ ನಾದಬ್ರಹ್ಮ ಹಂಸಲೇಖ ಸೇರಿದಂತೆ ಹಲವು ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಷ್ಟ್ರೀಯ ವೇದಿಕೆಯಲ್ಲಿ ದಿಯಾ ಹಾಡಿದ ಹಿಂದಿ ಹಾಡುಗಳ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿವೆ.ಸಿನಿ ಸಿಪ್: ರಾವಣನ ಛಾಪೊತ್ತಿದ ಯಶ್ ಸಾಧನೆಯ ಹಾದಿ...ಸಿನಿ ಸಿಪ್: 75ರಲ್ಲೂ ಸೂಪರ್ಸ್ಟಾರ್ ರಜನಿಕಾಂತ್ ಪ್ರಭಾವಳಿʼಕನ್ನಡ ರತ್ನʼ ಪ್ರಶಸ್ತಿ ನೀಡಿ ವಿದ್ಯಾರ್ಥಿಗಳ ಓದಿಗೆ ಆಸರೆಯಾದ ಮಲ್ಲಿಕಾರ್ಜುನ