ಎಚ್.ಡಿ.ಕುಮಾರಸ್ವಾಮಿ ತ್ಯಾಪೆ ಗಿರಾಕಿ: ಸಚಿವ ಎಚ್.ಸಿ.ಬಾಲಕೃಷ್ಣ ವ್ಯಂಗ್ಯ
ಕನಕಪುರ (ರಾಮನಗರ): ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತ್ಯಾಪೆ ಗಿರಾಕಿ. ಕಾಂಗ್ರೆಸ್ ಬಳಿ ಬಂದರೂ, ಬಿಜೆಪಿ ಹತ್ತಿರ ಹೋದರೂ ಅವರದ್ದು ತ್ಯಾಪೆಯೇ. ಇವರಿಗೆ ಬಿಜೆಪಿಯವರು ಅಧಿಕಾರ ಕೊಟ್ಟು ಸುಮ್ಮನಿರುತ್ತಾರಾ? ಅಲ್ಲಿ ಗಂಡಸರಿಲ್ಲವೆ?’ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ವ್ಯಂಗ್ಯವಾಡಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಐದು ವರ್ಷ

ಕನಕಪುರ (ರಾಮನಗರ): ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತ್ಯಾಪೆ ಗಿರಾಕಿ. ಕಾಂಗ್ರೆಸ್ ಬಳಿ ಬಂದರೂ, ಬಿಜೆಪಿ ಹತ್ತಿರ ಹೋದರೂ ಅವರದ್ದು ತ್ಯಾಪೆಯೇ. ಇವರಿಗೆ ಬಿಜೆಪಿಯವರು ಅಧಿಕಾರ ಕೊಟ್ಟು ಸುಮ್ಮನಿರುತ್ತಾರಾ? ಅಲ್ಲಿ ಗಂಡಸರಿಲ್ಲವೆ?’ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ವ್ಯಂಗ್ಯವಾಡಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಐದು ವರ್ಷ ಸಂಪೂರ್ಣ ಅವಧಿಯ ಅಧಿಕಾರ ಕೊಡಿ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ‘ಕುಮಾರಸ್ವಾಮಿ ಕೇಳಿದ ತಕ್ಷಣ ಯಾರು ಐದು ವರ್ಷ ಅಧಿಕಾರ ಬಿಟ್ಟು ಕೊಡುತ್ತಾರೆ? ಜೆಡಿಎಸ್ 125 ಸ್ಥಾನ ಗೆಲ್ಲಲು ಸಾಧ್ಯವೆ? ತಮ್ಮ ಸ್ವಂತ ಬಲದ ಮೇಲೆ ಜೀವಮಾನದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ’ ಎಂದರು.‘ನಾವು ಗೆಲ್ಲಿಸಿ ದೆಹಲಿಗೆ ಕಳಿಸಿರುವ ಪೈಲ್ವಾನ್ ಕುಮಾರಸ್ವಾಮಿ ಇರುವುದೇ ಮನರಂಜನೆಗಾಗಿ. ಹಾಗೆ ಮಾಡದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ. ಬೆಳಿಗ್ಗೆ ಎದ್ದರೆ ಮನರಂಜನೆ ನೀಡುವುದೇ ಅವರ ಕೆಲಸ. ಇಷ್ಟೆಲ್ಲಾ ಮಾತನಾಡುವ ಅವರು ಒಮ್ಮೆಯಾದರೂ ರೈತರು, ದರ ಏರಿಕೆಗಾಗಿ ಹೋರಾಟ ಮಾಡುತ್ತಿರುವ ಕಬ್ಬು ಬೆಳೆಗಾರರ ಬಗ್ಗೆ ಮಾತನಾಡಿದ್ದಾರೆಯೇ?’ ಎಂದು ಪ್ರಶ್ನಿಸಿದರು.ಭೇಟಿ ಸಂದೇಶವೇನು?: ‘ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಪುತ್ರ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ಉದ್ದೇಶವೇನು? ಇದರಿಂದ ಕಾರ್ಯಕರ್ತರಿಗೆ ಕೊಟ್ಟಿರುವ ಸಂದೇಶವೇನು?’ ಎಂದು ಕೇಳಿದರು. ‘ಸಿ.ಎಂ ಕಡೆಯಿಂದ ಏನಾದರೂ ಸಿಗುತ್ತದೆ ಎಂದು ರಾಜಣ್ಣ ವಿರುದ್ಧ ಬಾಲಕೃಷ್ಣ ಮಾತನಾಡುತ್ತಾರೆ’ ಎಂಬ ರಾಜೇಂದ್ರ ಹೇಳಿಕೆಗೆ ಬಾಲಕೃಷ್ಣ ಖಾರವಾಗಿ ಪ್ರತಿಕ್ರಿಯಿಸಿದರು.‘ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಪುಟ್ಟಣ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನಾ? ಇಲ್ಲವಾ? ಎಂದು ಪುಟ್ಟಣ್ಣ ಅವರನ್ನೇ ಕೇಳಲಿ. ಈ ಬಗ್ಗೆ ಪ್ರಮಾಣ ಮಾಡುತ್ತೇನೆ. ರಾಜೇಂದ್ರ ಕೂಡ ಬರಲಿ. ಅವರ ಮನೆ ದೇವರ ಮೇಲೆಯೇ ಆಣೆ ಮಾಡುವೆ’ ಎಂದರು.‘ರಾಜಕೀಯ ವ್ಯಭಿಚಾರ’‘ಎಚ್.ಡಿ. ದೇವೇಗೌಡ ಅವರನ್ನು ನಾಲ್ವರು ಹೊತ್ತುಕೊಂಡು ಹೋಗುತ್ತಾರೆ ಎಂದು ಹಿಂದೆ ಕೆ.ಎನ್. ರಾಜಣ್ಣ ಅವರು ಹೇಳಿದ್ದನ್ನು ರಾಜೇಂದ್ರ ಮರೆತಿದ್ದಾರೆಯೇ? ಈಗ ಇದ್ದಕ್ಕಿದ್ದಂತೆ ಎಚ್ಡಿಕೆ ಮತ್ತು ದೇವೇಗೌಡರ ಮೇಲೆ ಅವರಿಗೆ ಪ್ರೀತಿ ಬಂದಿರುವುದೇಕೆ? ಇದು ರಾಜಕೀಯವಲ್ಲ. ಬದಲಿಗೆ ರಾಜಕೀಯ ವ್ಯಭಿಚಾರ. ಇದಕ್ಕೆ ಕಾರ್ಯಕರ್ತರು ಮುಂದೆ ಉತ್ತರ ಕೊಡುತ್ತಾರೆ’ ಎಂದು ಬಾಲಕೃಷ್ಣ ಕಿಡಿಕಾರಿದರು.261108-14-1644583124