ದೇಶದ ಭದ್ರತೆಗಾಗಿ ಸರ್ಕಾರದ ಜತೆ ವಿಪಕ್ಷ ನಿಲ್ಲಬೇಕು:ಅಡ್ವಾಣಿಯನ್ನು ನೆನೆದ ನಿತಿನ್
ನವದೆಹಲಿ: ದೇಶದ ಭದ್ರತೆಗೆ ಸಂಬಂಧಿಸಿದ ವಿಷಯದಲ್ಲಿ ವಿಪಕ್ಷಗಳು ಸರ್ಕಾರದೊಂದಿಗೆ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಪ್ರತಿಪಾದಿಸುತ್ತಿದ್ದ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಅವರ ಮಾರ್ಗವನ್ನು ಇಂದಿನ ವಿಪಕ್ಷಗಳು ಅನುಸರಿಸಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಹೇಳಿದ್ದಾರೆ.ಎಲ್.ಕೆ. ಅಡ್ವಾಣಿ ಅವರ 100ನೇ ಜನ್ಮದಿನದ ಅಂಗವಾಗಿ ದೆಹ

ನವದೆಹಲಿ: ದೇಶದ ಭದ್ರತೆಗೆ ಸಂಬಂಧಿಸಿದ ವಿಷಯದಲ್ಲಿ ವಿಪಕ್ಷಗಳು ಸರ್ಕಾರದೊಂದಿಗೆ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಪ್ರತಿಪಾದಿಸುತ್ತಿದ್ದ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಅವರ ಮಾರ್ಗವನ್ನು ಇಂದಿನ ವಿಪಕ್ಷಗಳು ಅನುಸರಿಸಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಹೇಳಿದ್ದಾರೆ.ಎಲ್.ಕೆ. ಅಡ್ವಾಣಿ ಅವರ 100ನೇ ಜನ್ಮದಿನದ ಅಂಗವಾಗಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್, ಅಡ್ವಾಣಿ ಅವರ ಸೇವೆ ಮತ್ತು ಕೊಡುಗೆಯನ್ನು ಸ್ಮರಿಸಿದರು.ಚಳವಳಿಯೇ ನನ್ನ ಮನೆ: ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಸಂದರ್ಶನಬಸ್ತಾರ್ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ ಅಡ್ವಾಣಿ ಅವರು ಸಂಸತ್ತಿನಲ್ಲಿ ಮಾತನಾಡುವಾಗಲೆಲ್ಲ, ವಿಪಕ್ಷದಲ್ಲಿದ್ದರೂ ದೇಶದ ಭದ್ರತೆಯ ವಿಚಾರ ಬಂದಾಗ ಬಿಜೆಪಿ ಯಾವಾಗಲೂ ಸರ್ಕಾರದ ಪರವಾಗಿ ನಿಲ್ಲುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದರು. ದೇಶದ ಹಿತಾಸಕ್ತಿಯ ವಿಷಯದಲ್ಲಿ ಇಡೀ ವಿಪಕ್ಷವು ಸರ್ಕಾರದ ಜೊತೆ ಇರಬೇಕು ಎಂಬುದನ್ನು ಇಂದಿನ ನಾಯಕರು ಅವರಿಂದ ಕಲಿಯಬೇಕಿದೆ ಎಂದು ನಿತಿನ್ ಹೇಳಿದ್ದಾರೆ.ಅಡ್ವಾಣಿ ಅವರ ನಾಯಕತ್ವವೇ, ಕೇವಲ ಇಬ್ಬರು ಸಂಸದರಿದ್ದ ಬಿಜೆಪಿ ಇಂದು ಬೃಹತ್ ಪಕ್ಷವಾಗಿ ಬೆಳೆಯಲು ಅಡಿಪಾಯ ಹಾಕಿಕೊಟ್ಟಿತು. ಅವರ 'ರಾಷ್ಟ್ರವೇ ಮೊದಲು' ಎಂಬ ಸಿದ್ಧಾಂತ ಹಾಗೂ ಸಮರ್ಪಣಾ ಭಾವನೆಯು ಪಕ್ಷದ ಬೆಳವಣಿಗೆಯನ್ನು ಶಂಕಿಸಿದವರಿಗೆ ಸೂಕ್ತ ಉತ್ತರ ನೀಡಿದೆ ಎಂದಿದ್ದಾರೆ.ಇಳುವರಿ ತೀವ್ರ ಕುಸಿತ: ಸಾರ್ವಕಾಲಿಕ ದಾಖಲೆಯತ್ತ ಮುನ್ನುಗ್ಗಿದ ಹಳದಿ ಚಿನ್ನ!ಹಸಿರು ಪಟಾಕಿ ಸಂಪೂರ್ಣ ಸುರಕ್ಷಿತವಲ್ಲ: ವೈದ್ಯರ ಎಚ್ಚರಿಕೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾತನಾಡಿ, ಅಡ್ವಾಣಿ ಅವರು ಅಷ್ಟೊಂದು ದೊಡ್ಡ ನಾಯಕರಾಗಿದ್ದರೂ ಎಲ್ಲರೊಂದಿಗೂ ಅತ್ಯಂತ ಸರಳವಾಗಿ ನಡೆದುಕೊಳ್ಳುತ್ತಿದ್ದರು. ಎಲ್ಲರೂ ಅವರನ್ನು ಪ್ರೀತಿಯಿಂದ 'ದಾದಾ' ಎಂದು ಕರೆಯುತ್ತಿದ್ದರು. ಸ್ವಾರ್ಥವಿಲ್ಲದೆ ದೇಶ ಮತ್ತು ಪಕ್ಷದ ಬೆಳವಣಿಗೆ ಬಗ್ಗೆ ಮಾತ್ರ ಯೋಚಿಸುತ್ತಿದ್ದ ಅವರ ಶ್ರಮದಿಂದಾಗಿ ಲೋಕಸಭೆಯಲ್ಲಿ ಬಿಜೆಪಿಯ ಬಲ ಹೆಚ್ಚುತ್ತಾ ಹೋಯಿತು ಎಂದು ನೆನಪಿಸಿಕೊಂಡರು.