ಸಂಗೀತ ಸಾಮೀಪ್ಯ: ತಂತಿವಾದನದ ಧ್ರುವತಾರೆ ಪಿಟೀಲು ಮಾಂತ್ರಿಕ ಸಂಗೀತರತ್ನ ಚೌಡಯ್ಯ
ಬೆಂಗಳೂರಿನ ವೈಯ್ಯಾಲಿಕಾವಲ್ ಸಮೀಪ ಪಿಟೀಲು ಆಕಾರದಲ್ಲಿ ಒಂದು ಸಭಾಭವನ ಇದೆ. ಇದರ ಹೆಸರೇ ಚೌಡಯ್ಯ ಸ್ಮಾರಕ ಭವನ. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಮೀಸಲಿಡಲಾದ ಈ ಸಭಾಭವನದ ಹೆಸರು ಒಬ್ಬ ಪಿಟೀಲು ಮಾಂತ್ರಿಕನದ್ದು ಎಂಬ ವಿಚಾರವೇ ಪುಳಕ ತರುವಂಥದ್ದು.ಕರ್ನಾಟಕ ಸಂಗೀತ ಲೋಕದ ಧ್ರುವತಾರೆಯಾಗಿ ಮೆರೆದ ಮೈಸೂರಿನ ಹೆಮ್ಮೆಯ ತಂತಿವಾದಕ ಪಿಟೀಲು ಚೌಡಯ್ಯ (ತಿರುಮಕೂಡಲು ಚೌಡಯ್ಯ) ಅವ

ಬೆಂಗಳೂರಿನ ವೈಯ್ಯಾಲಿಕಾವಲ್ ಸಮೀಪ ಪಿಟೀಲು ಆಕಾರದಲ್ಲಿ ಒಂದು ಸಭಾಭವನ ಇದೆ. ಇದರ ಹೆಸರೇ ಚೌಡಯ್ಯ ಸ್ಮಾರಕ ಭವನ. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಮೀಸಲಿಡಲಾದ ಈ ಸಭಾಭವನದ ಹೆಸರು ಒಬ್ಬ ಪಿಟೀಲು ಮಾಂತ್ರಿಕನದ್ದು ಎಂಬ ವಿಚಾರವೇ ಪುಳಕ ತರುವಂಥದ್ದು.ಕರ್ನಾಟಕ ಸಂಗೀತ ಲೋಕದ ಧ್ರುವತಾರೆಯಾಗಿ ಮೆರೆದ ಮೈಸೂರಿನ ಹೆಮ್ಮೆಯ ತಂತಿವಾದಕ ಪಿಟೀಲು ಚೌಡಯ್ಯ (ತಿರುಮಕೂಡಲು ಚೌಡಯ್ಯ) ಅವರ ಜೀವನವೇ ಒಂದು ಸಂಗೀತ. ಪಿಟೀಲಿಗೆ ಅನ್ವರ್ಥನಾಮವಾಗಿ ಮೆರೆದ ಇವರ ಸಂಗೀತಯಾನದಲ್ಲಿ ಅನೇಕ ರೋಚಕ ಘಟನೆಗಳೂ ಇವೆ. ಇವೆಲ್ಲವೂ ಸ್ಫೂರ್ತಿದಾಯಕವೂ, ಕುತೂಹಲಕಾರಿಯೂ ಆಗಿವೆ.ಸಂಗೀತ ಸಾಮೀಪ್ಯ: ಎದೆ ತುಂಬಿ ಹಾಡಿದ ಮಲ್ಲಿಗೆ ಕಂಪಿನ ಗಾಯಕ ಮೈಸೂರು ಅನಂತಸ್ವಾಮಿಸಂಗೀತ ಸಾಮೀಪ್ಯ: ಹಿಂದೂಸ್ತಾನಿ ಸಂಗೀತದ ಅನರ್ಘ್ಯ ರತ್ನ ಉಸ್ತಾದ್ ಅಮೀರ್ ಖಾನ್ಕಪಾಳಮೋಕ್ಷದ ಬಿಸಿ, ಸಂಗೀತದ ರುಚಿಸಂಗೀತ ಕಲಿಯುವವರಿಗೆ, ಹಾಡುವವರಿಗೆ, ನುಡಿಸುವವರಿಗೆ ಎಲ್ಲರಿಗೂ ತಾಳ್ಮೆ, ಸಹನೆ, ಶ್ರದ್ಧೆ ಎಲ್ಲವೂ ಬೇಕು. ಇವೆಲ್ಲದರಲ್ಲೂ ಪಿಟೀಲು ಚೌಡಯ್ಯನವರಲ್ಲಿ ಮೈಗೂಡಿಕೊಂಡಿದ್ದೇ ಹೆಚ್ಚುಗಾರಿಕೆ ಎನ್ನಬಹುದು.ಇದು ಚೌಡಯ್ಯನವರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿದ್ದಾಗ ನಡೆದ ಘಟನೆ. ಆಗ ಅವರು ಖ್ಯಾತ ಕಲಾವಿದ ಬಿಡಾರಂ ಕೃಷ್ಣಪ್ಪ ಅವರ ಬಳಿ ಸಂಗೀತ ಕಲಿಯುತ್ತಿದ್ದರು. ಒಮ್ಮೆ ಮೈಸೂರಿನಲ್ಲಿ ನಡೆದ ಸಂಗೀತ ಕಛೇರಿಯಲ್ಲಿ ಚೌಡಯ್ಯನವರು ಪಿಟೀಲು ಪಕ್ಕವಾದ್ಯ ನುಡಿಸುತ್ತಿದ್ದರು. ಆಗ ಅಚಾನಕ್ ಆಗಿ ಅವರು ತಪ್ಪು ಸ್ವರ ನುಡಿಸಿದರು. ಇದನ್ನು ಕೇಳಿದ ಗುರು ಬಿಡಾರಂ ಕೃಷ್ಣಪ್ಪ ಅವರ ಕೋಪ ನೆತ್ತಿಗೇರಿತು. ವೇದಿಕೆಗೆ ಧಾವಿಸಿ ಬಂದವರೇ ಚೌಡಯ್ಯನವರ ಕೆನ್ನೆಗೆ ಬಾರಿಸಿಯೇ ಬಿಟ್ಟರು. ಚೌಡಯ್ಯನವರಿಗೆ ತುಂಬ ಬೇಸರವಾಯಿತು, ಅವಮಾನವೂ ಆಯಿತು. ಆದರೂ ಧೃತಿಗೆಡದೆ ಇಡೀ ಕಛೇರಿಯನ್ನು ಯಶಸ್ವಿಯಾಗಿ ಮುಗಿಸಿದರು. ಕೇಳುಗರು ಎದ್ದುನಿಂತು ಚಪ್ಪಾಳೆ ಹೊಡೆದರು. ವೇದಿಕೆಯಿಂದ ಇಳಿದು ಬಂದ ಚೌಡಯ್ಯನವರು ಗುರುಗಳ ಬಳಿ ಬಂದು, ’ಗುರುಗಳೇ ನೀವು ಮಾಡಿದ ಕಪಾಳಮೋಕ್ಷ ನನ್ನ ಕಣ್ಣು ತೆರೆಸಿತು. ನಾನು ಇನ್ನಷ್ಟು ಸಾಧಿಸಲು ಇದು ಪ್ರೇರಣೆಯಾಯಿತು ಅಲ್ಲದೆ ಸದಾ ಎಚ್ಚರಿಕೆಯಿಂದ ಇರುವಂತೆ ಪಾಠ ಕಲಿಸಿತು’ ಎಂದು ವಿನಮ್ರವಾಗಿ ನುಡಿದರು. ಈ ಛಲವೇ ಇವರನ್ನು ಮಹಾನ್ ವಿದ್ವಾಂಸರನ್ನಾಗಿಸಿತು.ಸಂಗೀತ ಸಾಮೀಪ್ಯ: ವೀಣೆ ಸಾರ್ವಭೌಮ ದೊರೆಸ್ವಾಮಿ ಅಯ್ಯಂಗಾರ್ಸಂಗೀತ ಸಾಮೀಪ್ಯ: ಕಾಳಿಂಗರಾಯರು ಭಿಕ್ಷುಕಿ ದನಿಗೆ ಮಾರುಹೋಗಿದ್ದೇಕೆ?ಏಳು ತಂತಿ ಪಿಟೀಲುಆರಂಭದಲ್ಲಿ ಪಿಟೀಲಿನಲ್ಲಿ ಕೇವಲ ನಾಲ್ಕೇ ನಾಲ್ಕು ತಂತಿಗಳಿರುತ್ತಿದ್ದವು. ಚೌಡಯ್ಯನವರ ಕಾಲದಲ್ಲಿ ಮೈಕ್ರೋಫೋನ್, ಧ್ವನಿವರ್ಧಕಗಳೂ ಇರಲಿಲ್ಲ. ಮೈಕ್ ಇಲ್ಲದೆ ದೊಡ್ಡ ದೊಡ್ಡ ಸಭಾಂಗಣಗಳಲ್ಲಿ ಸಂಗೀತ ಕಛೇರಿ ನಡೆಯುವಾಗ, ಹಿಂದಿನ ಸಾಲಿನಲ್ಲಿ ಕುಳಿತ ಕೇಳುಗರಿಗೆ ಪಿಟೀಲಿನ ನಾದ ಸರಿಯಾಗಿ ಕೇಳಿಸುತ್ತಿರಲಿಲ್ಲ. ಈ ಕೊರತೆಯನ್ನು ನೀಗಿಸುವುದು ಹೇಗೆ ಎಂಬುದು ಚೌಡಯ್ಯನವರಿಗೆ ಚಿಂತೆಯಾಗಿತ್ತು. ಇದೇ ಯೋಚನೆಯಲ್ಲಿ ತೊಡಗಿರುವಾಗ ಥಟ್ಟನೆ ಹೊಳೆದದ್ದು ನಾಲ್ಕು ತಂತಿಯ ಪಿಟೀಲು ಬದಲಾಗಿ ಏಳು ತಂತಿಯ ಪಿಟೀಲು ರೂಪಿಸುವ ಪರಿಹಾರ ಮಾರ್ಗ.ನಾಲ್ಕು ತಂತಿಗಳ ಬದಲಾಗಿ ಇನ್ನೂ ಮೂರು ತಂತಿಗಳನ್ನು ಸೇರಿಸಿ ‘ಸಪ್ತ ತಂತಿ ಪಿಟೀಲು’ ಮಾಡಿದರು. ಈ ಏಳು ತಂತಿಗಳ ಪಿಟೀಲು ನುಡಿಸುವುದು ಕಷ್ಟ. ಇದನ್ನು ಸವಾಲಾಗಿ ಸ್ವೀಕರಿಸಿ ವೇದಿಕೆಯಿಂದ ಕೊನೆಯ ಸಾಲಿನವರೆಗೂ ಸ್ಪಷ್ಟವಾಗಿ ಪಿಟೀಲು ನಾದ ಕೇಳುವಂತೆ ಮಾಡಿದ ಚೌಡಯ್ಯನವರ ಸಾಧನೆ ನಿಜಕ್ಕೂ ಅನನ್ಯವಾದುದು. ಇದು ಒಂದು ಇತಿಹಾಸವನ್ನೇ ಸೃಷ್ಟಿಸಿತು.ಸಂಗೀತ ಸಾಮೀಪ್ಯ: ಧ್ವನಿ ಒಡೆದರೂ ಧೃತಿಗೆಡದ ನಾದಯೋಗಿ; ಶೆಮ್ಮಂಗುಡಿ ಜೀವನ ಪಯಣಸಂಗೀತ ಸಾಮೀಪ್ಯ: ಗಾಂಧೀಜಿಯನ್ನು ಮಂತ್ರಮುಗ್ಧಗೊಳಿಸಿದ್ದ ನಾದ ಯೋಗಿ ವೀಣೆ ಶೇಷಣ್ಣ ಬಯಸದೇ ಬಂದ ಭಾಗ್ಯಯಾವುದನ್ನೂ ಏನನ್ನೂ ನಿರೀಕ್ಷಿಸದೇ ಕೆಲವೊಮ್ಮೆ ಅದೃಷ್ಟ ಒಲಿದು ಬರುವುದುಂಟು. ಚೌಡಯ್ಯನವರ ಬದುಕಿನಲ್ಲೂ ಒಮ್ಮೆ ಹೀಗೆಯೇ ಆಯಿತು. ಆಗ ಅವರಿಗೆ ವಯಸ್ಸು ಕೇವಲ ಹದಿನೇಳು. ಮೈಸೂರಿನಲ್ಲಿ ಒಂದು ದೊಡ್ಡ ಸಂಗೀತ ಕಛೇರಿ ಆಯೋಜನೆಯಾಗಿತ್ತು. ಅಂದು ಬರಬೇಕಾಗಿದ್ದ ಪಿಟೀಲು ವಾದಕ ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ. ಆಗ ಬಿಡಾರಂ ಕೃಷ್ಣಪ್ಪನವರು ಚೌಡಯ್ಯನವರನ್ನು ಕರೆದು ಪಿಟೀಲು ನುಡಿಸುವಂತೆ ಹೇಳಿದರು. ಈ ಬಯಸದೇ ಬಂದ ಭಾಗ್ಯವನ್ನು ಚೌಡಯ್ಯನವರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಗುರುಗಳಿಂದ ಸೈ ಎನಿಸಿಕೊಂಡರು.ಚಲನಚಿತ್ರದಲ್ಲೂ ಕೈಯಾಡಿಸಿದ ಚೌಡಯ್ಯನವರುಸಿನಿಮಾ ರಂಗದಲ್ಲೂ ಚೌಡಯ್ಯನವರು ಕೈಯಾಡಿಸಿದ್ದರು. 1943ರಲ್ಲಿ ತೆರೆಕಂಡ ‘ವಾಣಿ’ ಎಂಬ ಚಲನಚಿತ್ರವನ್ನು ತಾವೇ ನಿರ್ಮಿಸಿ, ಸಂಗೀತ ಸಂಯೋಜನೆಯನ್ನೂ ಮಾಡಿದ್ದಲ್ಲದೆ ತಂದೆ–ಮಗನ ದ್ವಿಪಾತ್ರದಲ್ಲೂ ನಟಿಸಿದ್ದರು. ಇದು ಅವರ ಬಹುಮುಖ ಪ್ರತಿಭೆ ಹಾಗೂ ವ್ಯಕ್ತಿತ್ವಕ್ಕೆ ಸಾಕ್ಷಿ.ಪಿಟೀಲು ವಾದನಕ್ಕೆ ಅನ್ವರ್ಥಚೌಡಯ್ಯನವರ ಹೆಸರಿನೊಂದಿಗೇ ಪಿಟೀಲು ವಾದ್ಯ ಬೆಸೆದುಕೊಂಡಿದೆ. ಹುಟ್ಟಿದ್ದು ಜನವರಿ ಒಂದು, 1895ರಲ್ಲಿ . ತಿರುಮಕೂಡಲು ಚೌಡಯ್ಯ ಇವರು ಅಗತ್ಸ್ಯಗೌಡ ಹಾಗೂ ಸುಂದರಮ್ಮ ಅವರ ಮಗನಾಗಿ ಜನಿಸಿದರು. ಚಿಕ್ಕಂದಿನಿಂದಲೇ ಸಂಗೀತದತ್ತ ಒಲವು ಬೆಳೆಸಿಕೊಂಡು ಬಿಡಾರಂ ಕೃಷ್ಣಪ್ಪನವರ ಬಳಿ ಹದಿನೆಂಟು ವರ್ಷ ಪಿಟೀಲು ಕಲಿತ ಬಳಿಕ ತಿರುಚಿ ಗೋವಿಂದಸ್ವಾಮಿ ಅವರ ಬಳಿಯೂ ಹೆಚ್ಚಿನ ಮಾರ್ಗದರ್ಶನ ಪಡೆದರು.ಮೈಸೂರು ಅರಮನೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ‘ಸಂಗೀತ ರತ್ನ’ ಪ್ರಶಸ್ತಿ, ಮದ್ರಾಸ್ ಸಂಗೀತ ಅಕಾಡೆಮಿ ನೀಡಿದ ‘ಸಂಗೀತ ಕಲಾನಿಧಿ’. ಮೈಸೂರು ಸಂಗೀತ ಪರಿಷತ್ ನೀಡಿದ ‘ಗಾನಕಲಾ ಸಿಂಧು’ ಮುಂತಾದ ಪ್ರಶಸ್ತಿಗಳಿಗೆ ಭಾಜನರಾದ ಚೌಡಯ್ಯನವರು, ಜನವರಿ 19, 1967ನೇ ಇಸವಿಯಲ್ಲಿ ಸಂಗೀತಲೋಕವನ್ನು ಬಿಟ್ಟು ಅಗಲಿದರು.ಇಂದಿಗೂ ಕೂಡ ಪಿಟೀಲು ಎಂದರೆ ಚೌಡಯ್ಯನವರು ಎಂಬಷ್ಟು ಹೆಸರು, ಖ್ಯಾತಿ, ಜನಪ್ರಿಯತೆಯನ್ನು ಬಿಟ್ಟು ಹೋದ ಚೌಡಯ್ಯನವರು ನಮ್ಮ ಸಂಗೀತಲೋಕದ ಅಮೂಲ್ಯ ಆಸ್ತಿ ಎಂಬುದಂತೂ ನಿಜ.