ಚುರುಮುರಿ| ದೀಪಾವಳಿ ಕನಸು
‘ದೀಪಾವಳಿ ಹಬ್ಬಕ್ಕೆ ನಾ ಏನೋ ಕೇಳತೀನಿ, ನೀ ಕೊಡಿಸಬೇಕು’ ಬೆಕ್ಕಣ್ಣ ಮುದ್ದುಗೆರೆಯಿತು. ಬಾಯಿ ತಪ್ಪಿ ‘ಹೂಂ’ ಅನ್ನುವ ಮೊದಲೇ ಎಚ್ಚತ್ತುಕೊಂಡೆ.‘ಪಟಾಕಿ ಅಂತೂ ನಾ ಕೊಡಿಸಂಗಿಲ್ಲ’ ಎಂದೆ.‘ಪಟಾಕಿ ಬ್ಯಾಡ. ಚಿನ್ನದ ನಾಣ್ಯದಂಗೆ ಇರೋ ಈ ಸಣ್ಣ ಮಿಠಾಯಿ ಕೊಡಿಸು...’ ಬೆಕ್ಕಣ್ಣ ಹೇಳುತ್ತಲೇ ಸುದ್ದಿ ಹಾಗೂ ಚಿತ್ರ ತೋರಿಸಿತು.ಜೈಪುರದ ಸಿಹಿ ಅಂಗಡಿಯೊಂದು ಹೊಸದಾಗಿ ಪರಿಚಯಿಸಿದ ಒಂದ

‘ದೀಪಾವಳಿ ಹಬ್ಬಕ್ಕೆ ನಾ ಏನೋ ಕೇಳತೀನಿ, ನೀ ಕೊಡಿಸಬೇಕು’ ಬೆಕ್ಕಣ್ಣ ಮುದ್ದುಗೆರೆಯಿತು. ಬಾಯಿ ತಪ್ಪಿ ‘ಹೂಂ’ ಅನ್ನುವ ಮೊದಲೇ ಎಚ್ಚತ್ತುಕೊಂಡೆ.‘ಪಟಾಕಿ ಅಂತೂ ನಾ ಕೊಡಿಸಂಗಿಲ್ಲ’ ಎಂದೆ.‘ಪಟಾಕಿ ಬ್ಯಾಡ. ಚಿನ್ನದ ನಾಣ್ಯದಂಗೆ ಇರೋ ಈ ಸಣ್ಣ ಮಿಠಾಯಿ ಕೊಡಿಸು...’ ಬೆಕ್ಕಣ್ಣ ಹೇಳುತ್ತಲೇ ಸುದ್ದಿ ಹಾಗೂ ಚಿತ್ರ ತೋರಿಸಿತು.ಜೈಪುರದ ಸಿಹಿ ಅಂಗಡಿಯೊಂದು ಹೊಸದಾಗಿ ಪರಿಚಯಿಸಿದ ಒಂದು ಸಣ್ಣ ಮಿಠಾಯಿ ಬೆಲೆ 1,111 ರೂಪಾಯಿ! ನಾನು ಹೌಹಾರಿದೆ.‘ಹೋಗಲೇ... ಹಾಲು, ಮೊಸರು, ಸಕ್ಕರೆ, ಅಕ್ಕಿ, ಬೇಳೆ, ಹಣ್ಣು, ತರಕಾರಿ ಎಲ್ಲದರ ಬೆಲೆ ಗಗನಕ್ಕೇರೈತಿ. ಹಬ್ಬ ಹೆಂಗೆ ಮಾಡೂದು ಅಂತ ಚಿಂತಿ ಹತ್ತೈತಿ. ಸಾವಿರ ರೂಪಾಯಿ ಕೊಟ್ಟು ಆ ಸಣ್ಣ ಐಷಾರಾಮಿ ಮಿಠಾಯಿ ತಗಳೂ ತಾಕತ್ತು ನನಗಿಲ್ಲ. ಆ ಮಿಠಾಯಿಗಳು ನಮ್ಮಂಥ ಶ್ರೀಸಾಮಾನ್ಯರಿಗಲ್ಲ’ ಎಂದು ಬೈದೆ.‘ಹೋಗ್ಲಿಬಿಡು. ಮಧ್ಯಂತರ ಚುನಾವಣೆಯಲ್ಲಿ ಟ್ರಂಪಣ್ಣಂಗೆ ಮುಖಭಂಗ... ಇತ್ತಾಗೆ ಇಸ್ರೇಲಿನ ನೆತನ್ಯಾಹು ಅಂಕಲ್ಲಿಗೆ ಬಹುಮತ ಇಲ್ಲ... ಛೇ… ನಮ್ ಜ್ಞಾನೇಶ್ ಅಂಕಲ್ಲು ಎರಡೂ ಕಡೆಗೆ ಹೋಗಿದ್ದರೆ ಇಬ್ಬರೂ ಗೆಲ್ಲತಿದ್ದರು’ ಮಾತು ಬದಲಿಸಿದ ಬೆಕ್ಕಣ್ಣ ಅಲವತ್ತುಕೊಂಡಿತು.‘ಅಂವನ್ನ ಹೆಂಗೆ ಕಳಿಸತಾರೆ? ಇಲ್ಲಿ ಮೋದಿ ಮಾಮಂಗೆ ಅಂವಾ ಬೇಕೇಬೇಕು! ಜ್ಞಾನೇಶ್ ಅಂಕಲ್ಲಿನ ಕ್ಲೋನಿಂಗ್ ಮಾಡಿ ಅವನ ಪ್ರತಿರೂಪಿಗಳನ್ನು ಕಳಿಸಬೇಕಷ್ಟೆ’ ಎಂದು ಕಿಚಾಯಿಸಿದೆ.‘ಛೇ... ಮೋದಿ ಮಾಮನ ಮಿತ್ರರು ದುಃಖದಲ್ಲಿದ್ದಾಗ ನಾವು ಹಬ್ಬ ಮಾಡೂದೇ ಬ್ಯಾಡ ಬಿಡು’ ಬೆಕ್ಕಣ್ಣ ವರಸೆ ಬದಲಿಸಿತು.‘ಯುದ್ಧಕೋರರಿಗೆ ಹಿನ್ನಡೆಯಾಗಿದ್ದು ಖುಷಿ ಪಡುವ ವಿಚಾರ. ಹಿಂಗಾಗಿ ನಾವು ಹಬ್ಬ ಮಾಡೂದೆ... ಆದರೆ, ನಮ್ ಬಜೆಟ್ಟಿನಾಗೆ ಮಾಡೂಣು’ ನಾನು ವಾದಿಸಿದೆ.‘ಹಂಗಾರೆ ನಮ್ ಮೋದಿ ಮಾಮಾ ಈ ವರ್ಷ ಎಲ್ಲಿ ದೀಪಾವಳಿ ಆಚರಿಸತಾರೆ ಅಲ್ಲಿಗೆ ನಾವೂ ಹೋಗೂಣು. ಕೊನೇಪಕ್ಷ ಇದಕ್ಕಾದ್ರೂ ಹೂಂ ಅನ್ನು’ ಎಂದು ಬೆಕ್ಕಣ್ಣ ಹೊಸ ವರಾತ ಶುರು ಮಾಡಿತು.