ತಾಯಿನುಡಿಯಿಂದ ಮಕ್ಕಳ ಜ್ಞಾನ ವಿಕಾಸ: ವಿರಕ್ತಮಠದ ಸಂಗನಬಸವ ಸ್ವಾಮೀಜಿ
ಶಿಗ್ಗಾವಿ: ತಾಯಿನುಡಿ ಒಂದು ಕಲಿಸುವ ಜತೆಗೆ ನೆಲದ ಸಂಸ್ಕೃತಿ ಸಂಸ್ಕಾರಗಳನ್ನು ನೀಡುತ್ತಿದೆ. ಹೀಗಾಗಿ ಕನ್ನಡ ಒಂದು ಭಾಷೆ ಜತೆಗೆ ಸಂಸ್ಕೃತಿಯಾಗಿದೆ. ತಾಯಿ ನೀಡುವ ಭಾಷೆ ಶ್ರೇಷ್ಠವಾಗಿದೆ. ಅದಕ್ಕೆ ಕನ್ನಡ ನಾಡಿನ ಪರಂಪರೆ ಕಾರಣವಾಗಿದೆ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.ಪಟ್ಟಣದ ಗೌರಮ್ಮ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ 71ನ

ಶಿಗ್ಗಾವಿ: ತಾಯಿನುಡಿ ಒಂದು ಕಲಿಸುವ ಜತೆಗೆ ನೆಲದ ಸಂಸ್ಕೃತಿ ಸಂಸ್ಕಾರಗಳನ್ನು ನೀಡುತ್ತಿದೆ. ಹೀಗಾಗಿ ಕನ್ನಡ ಒಂದು ಭಾಷೆ ಜತೆಗೆ ಸಂಸ್ಕೃತಿಯಾಗಿದೆ. ತಾಯಿ ನೀಡುವ ಭಾಷೆ ಶ್ರೇಷ್ಠವಾಗಿದೆ. ಅದಕ್ಕೆ ಕನ್ನಡ ನಾಡಿನ ಪರಂಪರೆ ಕಾರಣವಾಗಿದೆ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.ಪಟ್ಟಣದ ಗೌರಮ್ಮ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಸುಣಕಲ್ಲಬಿದರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ರವಿ ಎಂ. ಸಿದ್ಲಿಪುರ ಮಾತನಾಡಿ, ಕನ್ನಡ ಭಾಷೆಯ ಅಸ್ತಿತ್ವ, ಉಳಿವು ಮತ್ತು ಬೆಳವಣಿಗೆಗಾಗಿ ನಿರಂತರ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಕನ್ನಡ ಭಾಷೆ ಮತ್ತು ನಾಡಿನ ಅಸ್ತಿತ್ವಕ್ಕಾಗಿ ಎಸ್. ನಿಜಲಿಂಗಪ್ಪ ಹಾಗೂ ಡಿ. ದೇವರಾಜ ಅರಸು ಅವರಂತಹ ನಾಯಕರು ಮಹತ್ವದ ಹೋರಾಟ ನಡೆಸಿದ್ದಾರೆ. ಅವರ ಕನ್ನಡಪರ ಚಿಂತನೆ ಹಾಗೂ ಭಾಷಾಭಿಮಾನವನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕು.ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲ್ಲಪ್ಪ ಬಗರಿಕಾರ ಸೇರಿದಂತೆ ವಿವಿಧ ಸಾಧಕರನ್ನು ಅಭಿನಂದಿಸಲಾಯಿತು.ಕಾಲೇಜಿನ ಪ್ರಾಚಾರ್ಯ ಎ.ಸಿ.ವಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭೂದಾನಿ ಈರಣ್ಣ ಅಂಕಲಕೋಟಿ, ಕಾಲೇಜಿನ ಐಕ್ಯೂಎಸಿ ಸಂಚಾಲಕ ಅಂಬಳಿ ಪಿಳ್ಳೈ, ಸಂಘಟನಾ ಕಾರ್ಯದರ್ಶಿ ಆನಂದ ಇಂದೂರ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಇಮ್ತಿಯಾಜ್ ಖಾನ್, ಸೇವಂತಿ ಕಾಂಬಳೆ, ನಾಗರಾಜ ನವಲಗುಂದ, ಮಹಾಂತಯ್ಯ ಮಠದ, ನಂದಿನಿ ಆರ್. ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಇದ್ದರು.261109-22-1508979124