ಬೆಂಗಳೂರು | ಕುಂದು –ಕೊರತೆ: ವಿಲೇವಾರಿಯಾಗದ ಕಸ
‘ಬಸ್ ಸೌಲಭ್ಯದ ಕೊರತೆ’ದೇವರಚಿಕ್ಕನಹಳ್ಳಿಯಲ್ಲಿ ಅನಿಯಮಿತ ಬಸ್ ಸಂಚಾರದಿಂದ ಸಾರ್ವಜನಿಕರು ಪರದಾಟ ನಡೆಸುತ್ತಿದ್ದಾರೆ. ಈ ಪ್ರದೇಶದಲ್ಲಿ ಬಸ್ಗಳು ಸರಿಯಾದ ಸಮಯಕ್ಕೆ ಬಾರದಿರುವುದರಿಂದ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸದಿರುವುದರಿಂದ ಜನರು ಅನೇಕ ತೊಂದರೆ ಎದುರಿಸುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಿನ ಸಮಯ ಕಾಯಬೇಕಾಗುತ್ತಿದೆ. ಇದರಿಂದ ವಿದ್ಯಾರ

‘ಬಸ್ ಸೌಲಭ್ಯದ ಕೊರತೆ’ದೇವರಚಿಕ್ಕನಹಳ್ಳಿಯಲ್ಲಿ ಅನಿಯಮಿತ ಬಸ್ ಸಂಚಾರದಿಂದ ಸಾರ್ವಜನಿಕರು ಪರದಾಟ ನಡೆಸುತ್ತಿದ್ದಾರೆ. ಈ ಪ್ರದೇಶದಲ್ಲಿ ಬಸ್ಗಳು ಸರಿಯಾದ ಸಮಯಕ್ಕೆ ಬಾರದಿರುವುದರಿಂದ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸದಿರುವುದರಿಂದ ಜನರು ಅನೇಕ ತೊಂದರೆ ಎದುರಿಸುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಿನ ಸಮಯ ಕಾಯಬೇಕಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಮತ್ತು ಉದ್ಯೋಗಿಗಳು ತಮ್ಮ ಕೆಲಸದ ಸ್ಥಳಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ಅವಧಿಯಲ್ಲಿ ಬಸ್ಗಳ ಕೊರತೆಯಿಂದ ಜನರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಅನಿವಾರ್ಯವಾಗಿ ಹೆಚ್ಚಿನ ಹಣ ಪಾವತಿಸಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ದೇವರಚಿಕ್ಕನಹಳ್ಳಿ ಪ್ರದೇಶದಲ್ಲಿ ಬಸ್ಗಳ ಸಂಚಾರವನ್ನು ಹೆಚ್ಚಿಸಬೇಕು. ಬಸ್ಗಳು ನಿಗದಿತ ಸಮಯಕ್ಕೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಜನದಟ್ಟಣೆ ಹೆಚ್ಚಿರುವ ಸಮಯದಲ್ಲಿ ಹೆಚ್ಚುವರಿ ಬಸ್ಗಳನ್ನು ಒದಗಿಸಬೇಕು. ಕೀರ್ತನಾ, ಸರ್ಕಾರಿ ಕಲಾ ಕಾಲೇಜು ವಿದ್ಯಾರ್ಥಿನಿ ‘ಗ್ರಂಥಾಲಯದ ಬಳಿ ಕಸ’ಯಲಹಂಕದ ನ್ಯಾಯಾಂಗ ಬಡಾವಣೆಗೆ ಹೊಂದಿಕೊಂಡಿರುವ ಅಲ್ಲಾಳಸಂದ್ರ ಗ್ರಾಮದಲ್ಲಿ ಸುಸಜ್ಜಿತವಾದ ಸರ್ಕಾರಿ ಗ್ರಂಥಾಲಯವಿದೆ. ಅದರ ಪಕ್ಕದಲ್ಲೇ ಅಂಗನವಾಡಿ ಕೇಂದ್ರ ಮತ್ತು ನ್ಯಾಯಬೆಲೆ ಅಂಗಡಿಗಳೂ ಇವೆ. ಆದರೆ, ಜನರು ಗ್ರಂಥಾಲಯದ ಪ್ರವೇಶ ದ್ವಾರವನ್ನು ಕಸದ ತೊಟ್ಟಿಯಾಗಿ ಬದಲಾಯಿಸಿದ್ದಾರೆ. ತಮ್ಮ ಮನೆಯ ಕಸವನ್ನು ತಂದು ಅಲ್ಲಿ ಎಸೆಯುತ್ತಿದ್ದಾರೆ. ಇದರಿಂದಾಗಿ ಗ್ರಂಥಾಲಯದ ಒಳಗೆ ಹೋಗುವುದೇ ದುಸ್ಥರವಾಗಿದೆ. ಪಕ್ಕದಲ್ಲಿನ ಅಂಗನವಾಡಿಯ ಎಳೆಯ ಮಕ್ಕಳು ಈ ವಾಸನೆ ಮತ್ತು ನೊಣಗಳ ಹಾವಳಿಯಿಂದ ಅನಾರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಊರಿನ ರಾಜಕೀಯ ಮುಖಂಡರು ಇದನ್ನು ಕಂಡೂ ಕಾಣದಂತೆ ಇದ್ದಾರೆ. ಜಿಬಿಎ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಕೂಡಲೇ ಕ್ರಮವಹಿಸಬೇಕು. ಶಿವಪ್ರಕಾಶ್ ಭೋಗಣ್ಣ, ಅಲ್ಲಾಳಸಂದ್ರ ‘ರಸ್ತೆಯಲ್ಲಿ ಕೊಳಚೆ ನೀರು’ ಗೊಟ್ಟಿಗೆರೆಯಲ್ಲಿರುವ ಪಂಚವಟಿ ಬಿಡಿಎ ಅಪಾರ್ಟ್ಮೆಂಟ್ನಿಂದ ರಾಯಲ್ ಕೌಂಟಿ ನಾಲ್ಕನೇ ಮುಖ್ಯರಸ್ತೆಗೆ ಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕೊಳಚೆ ನೀರು ಹರಿಯುತ್ತಿದೆ. ಕಳೆದ 5–6 ವರ್ಷಗಳಿಂದ ಈ ಸಮಸ್ಯೆಯಿದ್ದು, ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಕೊಳಚೆ ನೀರಿನಿಂದ ದುರ್ವಾಸನೆ ಹರಡಿಕೊಂಡಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕೊಳಚೆ ನೀರು ರಸ್ತೆ ಮೇಲೆ ಹರಿಯುವುದನ್ನು ಕೂಡಲೇ ತಡೆಯಬೇಕು. ಸೂಕ್ತ ಒಳಚರಂಡಿ ವ್ಯವಸ್ಥೆಯ ಮೂಲಕ ತ್ಯಾಜ್ಯ ನೀರು ಸಮರ್ಪಕವಾಗಿ ಹೋಗುವುದನ್ನು ಖಚಿತಪಡಿಸಿಕೊಳ್ಳಬೇಕು. ಸಮೀಪದಲ್ಲಿರುವ ಕುಡಿಯುವ ನೀರಿನ ಪೈಪ್ಲೈನ್ ಪರಿಶೀಲಿಸಿ, ನೀರು ಕಲುಷಿತಗೊಳ್ಳುವುದನ್ನು ತಡೆಯಬೇಕು. ಈ ಸಮಸ್ಯೆ ಮರುಕಳಿಸದಂತೆ ಶಾಶ್ವತ ಪರಿಹಾರೋಪಾಯ ಒದಗಿಸಬೇಕು.ಪಂಚವಟಿ ಬಿಡಿಎ ಅಪಾರ್ಟ್ಮೆಂಟ್ ಸುತ್ತಮುತ್ತಲಿನ ನಿವಾಸಿಗಳು ‘ಪಾದಚಾರಿ ಮಾರ್ಗದಲ್ಲಿ ಕಸ’ಕೆಂಗೇರಿ ಸಮೀಪವಿರುವ ಮೈಲಸಂದ್ರ ಬಸ್ ನಿಲ್ದಾಣದ ಬಳಿ ಮೈಸೂರು ರಸ್ತೆಯ ಪಾದಚಾರಿ ಮಾರ್ಗವು ಕಸದ ರಾಶಿಯಿಂದ ಕೂಡಿದೆ. ತ್ಯಾಜ್ಯದ ರಾಶಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಇಲ್ಲಿ ಓಡಾಡುವುದು ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಇಲ್ಲಿಯೇ ಕೆಲವರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ತ್ಯಾಜ್ಯದ ರಾಶಿಯಿಂದ ಪಾದಚಾರಿ ಮಾರ್ಗ ಕಣ್ಮರೆಯಾದ ಕಾರಣ ರಸ್ತೆಯಲ್ಲಿಯೇ ಸಾಗಬೇಕಾಗಿದೆ. ವಾಹನಗಳು ವೇಗವಾಗಿ ಬರುವುದರಿಂದ ಅಪಘಾತಗಳಾಗುವ ಸಾಧ್ಯತೆಯಿದೆ. ಆದ್ದರಿಂದ ತ್ಯಾಜ್ಯದ ರಾಶಿಯನ್ನು ಕೂಡಲೇ ವಿಲೇವಾರಿ ಮಾಡಿಸಬೇಕು. ಅಕ್ಬರ್ ಶಮ್ನಾಡ್, ಡಾ.ಅಂಬೇಡ್ಕರ್ ರಸ್ತೆ ‘ಗುಂಡಿಯಿಂದ ಕೂಡಿದ ರಸ್ತೆ’ರಾಜರಾಜೇಶ್ವರಿ ನಗರ ಮೆಟ್ರೊ ನಿಲ್ದಾಣ ಮತ್ತು ಹೊಂಡಾ ಶೋರೂಂ ಮಧ್ಯೆ ಇರುವ ರಸ್ತೆಯಲ್ಲಿ ಗುಂಡಿ ಬಿದ್ದು ವರ್ಷವೇ ಕಳೆದಿದೆ. ಸಮೀಪದಲ್ಲಿಯೇ ರಸ್ತೆ ಉಬ್ಬು ಇರುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟಸಾಧ್ಯವಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳೂ ವರದಿಯಾಗಿವೆ. ಆದ್ದರಿಂದ ಜಿಬಿಎ ಅಧಿಕಾರಿಗಳು ಇತ್ತ ಗಮನಹರಿಸಿ, ಆದಷ್ಟು ಶೀಘ್ರ ಈ ಗುಂಡಿಗಳನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಬೇಕು.ನರಸಪ್ಪ ವಿಶ್ವಕರ್ಮ, ವಾಹನ ಸವಾರ ‘ವಿಲೇವಾರಿಯಾಗದ ಕಸ’ಚನ್ನಮ್ಮನಕೆರೆ ಪೊಲೀಸ್ ಠಾಣೆ ಸಮೀಪದ ವಿದ್ಯಾಪೀಠ ವಾರ್ಡ್ನಲ್ಲಿ ಕಸದ ರಾಶಿಯನ್ನು ಹಲವು ದಿನಗಳಿಂದ ವಿಲೇವಾರಿ ಮಾಡಿಲ್ಲ. ಇಲ್ಲಿ ಕಸವನ್ನು ನಿಯಮಿತವಾಗಿ ವಿಲೇವಾರಿ ಮಾಡದ ಪರಿಣಾಮ, ಕಸ ಎಲ್ಲೆಂದರಲ್ಲಿ ಬಿದ್ದು ಚೆಲ್ಲಾಪಿಲ್ಲಿಯಾಗಿದೆ. ಕೆಲವರು ಇಲ್ಲಿ ಹಸಿ ಹಾಗೂ ಒಣ ಕಸವನ್ನು ಎಸೆಯುತ್ತಿದ್ದು, ವಾಸನೆಯಿಂದ ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಕಸದ ರಾಶಿ ಬೆಳೆಯುತ್ತಿದೆ. ಆದ್ದರಿಂದ ಇಲ್ಲಿ ಕಸ ಹಾಕದಂತೆ ಹಾಗೂ ಈಗ ಇರುವ ಕಸವನ್ನು ತುರ್ತಾಗಿ ವಿಲೇವಾರಿ ಮಾಡಲು ಜಿಬಿಎ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಯೋಗೇಶ, ಕತ್ರಿಗುಪ್ಪೆ ‘ಶೌಚಾಲಯದಲ್ಲಿ ಅವ್ಯವಸ್ಥೆ’ಸಾರಕ್ಕಿ ಕೆರೆ ಬಳಿ ನಿರ್ಮಿಸಲಾದ ಶೌಚಾಲಯ ಅವ್ಯವಸ್ಥೆಯಿಂದ ಕೂಡಿದೆ. ಹಲವು ಬಾರಿ ಸ್ವಚ್ಛಗೊಳಿಸಲು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ, ಶೌಚಾಲಯ ಸ್ವಚ್ಛಗೊಳಿಸಲು ಸೂಚಿಸಬೇಕು. ಸಮರ್ಪಕವಾಗಿ ನಿರ್ವಹಣೆ ಮಾಡಬೇಕು.ಜೆ.ಸಿ. ಶಿವಕುಮಾರ್, ಸ್ಥಳೀಯ ನಿವಾಸಿ