ಮಾನ್ವಿ: ಕಾಲುವೆ ನೀರು ಸಮರ್ಪಕ ಪೂರೈಕೆಗೆ ಕ್ರಮ
ಮಾನ್ವಿ: ‘ತಾಲ್ಲೂಕಿನ ತುಂಗಭದ್ರಾ ಎಡದಂಡೆ ನಾಲೆಯ ಉಪಕಾಲುವೆಗಳ ವ್ಯಾಪ್ತಿಯಲ್ಲಿನ ಜಮೀನುಗಳಿಗೆ ಕಾಲುವೆ ನೀರು ಸಮರ್ಪಕವಾಗಿ ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.‘ತುಂಗಭದ್ರಾ ನೀರಾವರಿ

ಮಾನ್ವಿ: ‘ತಾಲ್ಲೂಕಿನ ತುಂಗಭದ್ರಾ ಎಡದಂಡೆ ನಾಲೆಯ ಉಪಕಾಲುವೆಗಳ ವ್ಯಾಪ್ತಿಯಲ್ಲಿನ ಜಮೀನುಗಳಿಗೆ ಕಾಲುವೆ ನೀರು ಸಮರ್ಪಕವಾಗಿ ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.‘ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಕಾಲುವೆ ನೀರು ಹರಿಸಲಾಗುವುದು.ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಜವಾಬ್ದಾರಿ ನೀಡಲಾಗುವುದು. ಅಕ್ರಮವಾಗಿ ಕಾಲುವೆಯಿಂದ ನೀರು ಪಡೆದುಕೊಳ್ಳುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ರೈತರು ಸಹಕಾರ ನೀಡಬೇಕು’ ಎಂದರು.ಕರ್ನಾಟಕ ನೀರಾವರಿ ನಿಗಮದ ಸಿರವಾರ ವಿಭಾಗದ ಎಇಇ ವಿಜಯಲಕ್ಷ್ಮಿ ಮಾತನಾಡಿ, ‘ತುಂಗಭದ್ರಾ ನೀರಾವರಿ ಸಲಹಾ ಸಮಿತಿಯ ನಿರ್ಣಯದಂತೆ ಪ್ರತಿ ವಿತರಣಾ ನಾಲೆಗೆ 3 ದಿನಗಳಂತೆ ಸರದಿ ಪ್ರಕಾರ ನೀರು ಸರಬರಾಜು ಮಾಡಿ ನಂತರ ಸ್ಥಗಿತಗೊಳಿಸಲಾಗುವುದು. ಈಗ ಲಭ್ಯವಿರುವ 9 ದಿನಗಳಲ್ಲಿ ಕಾಲುವೆಯಲ್ಲಿ ನೀರನ್ನು ಸಮರ್ಪಕವಾಗಿ ಹಂಚಿಕೆ ಮಾಡಲಾಗುವುದು’ ಎಂದು ಹೇಳಿದರು.82ನೇ ವಿತರಣಾ ನಾಲೆ ವ್ಯಾಪ್ತಿಯಲ್ಲಿನ ಗವಿಗಟ್ಟ, ತಾಯಮ್ಮ ಕಟ್ಟೆ ಭಾಗಕ್ಕೆ ಜೋಳದ ಬೆಳೆಗೆ ಅದ್ಯತೆ ನೀಡಿ 3 ದಿನಗಳ ಕಾಲ ರೊಟೇಶನ್ ಪ್ರಕಾರ ಮಂಗಳವಾರದಿಂದ 3 ದಿನಗಳ ಕಾಲ ನೀರು ಹರಿಸಲಾಗುವುದು. 89ನೇ ಉಪಕಾಲುವೆ ವ್ಯಾಪ್ತಿಯಲ್ಲಿ ಬರುವ ನೀರಮಾನ್ವಿ, ಬೆಟ್ಟದೂರು, ಬೆಟ್ಟದೂರು ತಾಂಡಾಗಳಿಗೆ ಸೋಮವಾರದಿಂದ ಶುಕ್ರವಾರದ ವರೆಗೆ ನೀರು ಹರಿಸಲಾಗುವುದು. 82ನೇ ವಿತರಣಾ ನಾಲೆಯ ಕೆಳಭಾಗದ ಜಾನೆಕಲ್, ಮಲ್ಲಿನ ಮಡಗು, ನಸಲಾಪುರವರೆಗೆ ಮಂಗಳವಾರದಿಂದ 3 ದಿನಗಳ ಕಾಲ ಕಾಲುವೆಗಳಿಗೆ ನೀರು ಹರಿಸಲಾಗುವುದು’ ಎಂದರು.ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ‘ಮುಖ್ಯ ಕಾಲುವೆಯಲ್ಲಿ ಸಮರ್ಪಕವಾಗಿ ಗೇಜ್ ನಿರ್ವಹಿಸುವ ಮೂಲಕ ಕೊನೆ ಭಾಗಕ್ಕೆ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.ಪಿಐ ಸೋಮಶೇಖರ ಎಸ್. ಕೆಂಚರೆಡ್ಡಿ, ರೈತ ಮುಖಂಡರಾದ ದೊಡ್ಡಬಸವನಗೌಡ ಬಲ್ಲಟಗಿ, ಸೂಗೂರಯ್ಯ ಆರ್.ಎಸ್.ಮಠ, ಬಸನಗೌಡ ಮಲ್ಲಿನಮಡಗು, ಲಿಂಗಣ್ಣ ಪಾಟೀಲ, ಬಸವನಗೌಡ ಮಾಲಿಪಾಟೀಲ ಬೆಟ್ಟದೂರು, ಶಂಕ್ರಪ್ಪಗೌಡ ದೇವತಗಲ್, ಕಾಡಪ್ಪ, ಶರಣಪ್ಪ, ವಿಕ್ರಮ್ ಗೌಡ ಗವಿಗಟ್ಟ, ಉಮೇಶ ಬೆಟ್ಟದೂರು, ಸಿದ್ದನಗೌಡ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.261109-32-725846978