ಹೊಸಕೋಟೆ| ಹೆದ್ದಾರಿ–35 ಕಾಮಗಾರಿಗೆ ಗ್ರಹಣ: ಸವಾರರು ಹೈರಾಣ
ಹೊಸಕೋಟೆ: ತಾಲ್ಲೂಕಿನ ಸೋಣದೇನಹಳ್ಳಿ ಗ್ರಾಮದಿಂದ ಕಂಬಳಿಪುರ ಗೇಟ್ವರೆಗಿನ ರಾಜ್ಯ ಹೆದ್ದಾರಿ–35ರ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಹಲವು ಕಡೆ ಕಾಮಗಾರಿ ಆರಂಭಿಸದ ಕಾರಣ ಗುಂಡಿಮಯ ರಸ್ತೆಯಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ.ಎರಡೂವರೆ ವರ್ಷಕ್ಕೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಐದು ವರ್ಷವಾದರೂ ಕುಂಟುತ್ತಾ ಸಾಗುತ್ತಿರುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್

ಹೊಸಕೋಟೆ: ತಾಲ್ಲೂಕಿನ ಸೋಣದೇನಹಳ್ಳಿ ಗ್ರಾಮದಿಂದ ಕಂಬಳಿಪುರ ಗೇಟ್ವರೆಗಿನ ರಾಜ್ಯ ಹೆದ್ದಾರಿ–35ರ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಹಲವು ಕಡೆ ಕಾಮಗಾರಿ ಆರಂಭಿಸದ ಕಾರಣ ಗುಂಡಿಮಯ ರಸ್ತೆಯಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ.ಎರಡೂವರೆ ವರ್ಷಕ್ಕೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಐದು ವರ್ಷವಾದರೂ ಕುಂಟುತ್ತಾ ಸಾಗುತ್ತಿರುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.ಬಿಸಿಲು ಇದ್ದಾಗ ಸವಾರರಿಗೆ ದೂಳಿನ ಸ್ನಾನ ಮಾಡಿಸುವ ಈ ರಸ್ತೆ ಮಳೆ ಬಂದಾಗಾ ಮಿನಿ ಕೆರೆಯಂತಾಗುತ್ತದೆ. ಮಳೆ ನೀರು ತುಂಬಿಕೊಂಡು ರಸ್ತೆ ಯಾವುದು?, ಗುಂಡಿ ಯಾವು ಹುಡುಕಾಡಬೇಕಿದೆ. ನಿತ್ಯ ರಸ್ತೆಯಿಂದ ಬರುವ ದೂಳಿನಿಂದ ಸ್ಥಳೀಯರಲ್ಲಿ ಶ್ವಾಸಕೋಶ, ಅಲರ್ಜಿಯಂತಹ ಲಕ್ಷಣ ಕಾಣಿಸಿಕೊಳ್ಳುತ್ತಿದೆ.ಏಕಿಷ್ಟು ವಿಳಂಬ?: ಲೋಕೋಪಯೋಗಿ ಇಲಾಖೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯಿಂದ ಶಿಡ್ಲಘಟ್ಟ ಮತ್ತು ಹೊಸಕೋಟೆ, ಕಾಡಗೋಡಿ ಮಾರ್ಗದ ರಾಜ್ಯ ಹೆದ್ದಾರಿ–35ರಲ್ಲಿ 32 ಕಿ.ಮೀ ಅಭಿವೃದ್ಧಿಗೆ 2019ರ ಮೇನಲ್ಲಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 2021ರ ನವೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. 16.58 ರಿಂದ 21.58 ಕಿ.ಮೀ ವ್ಯಾಪ್ತಿಯ ತಾಲ್ಲೂಕಿನ ಸಂಪರ್ಕ ರಸ್ತೆ ಸುಧಾರಣೆಯನ್ನೂ ಒಳಗೊಂಡಿತ್ತು.ಆದರೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ತಾಂತ್ರಿಕ ಸವಾಲು ಹಾಗೂ ಕೋವಿಡ್-19 ಲಾಕ್ಡೌನ್ ನಂತಹ ಕಾರಣದಿಂದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದರ ನಡುವೆಯೂ 2026 ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.2 ಕಿ.ಮೀ ಸಂಚಾರಕ್ಕೆ ಬೇಕು 20 ನಿಮಿಷ: ಹೊಸಕೋಟೆಯಿಂದ ಬೆಂಡಿಗಾನಹಳ್ಳಿ, ಜಂಗಮಕೋಟೆ, ಶಿಡ್ಲಘಟ್ಟ ಭಾಗಕ್ಕೆ ತೆರಳಲು ರಾಜ್ಯ ಹೆದ್ದಾರಿ–35 ಅತಿ ಸಮೀಪದ ರಸ್ತೆಯಾಗಿದೆ. ಆದರೆ ಸೋಣದೇನಹಳ್ಳಿ ಗ್ರಾಮದಿಂದ ಹೊಸಕೋಟೆ ಡೇರಿ ವರೆಗಿನ 2 ಕಿ.ಮೀ ಅಂತರ ಸಾಗಲು ಕನಿಷ್ಠ 20 ನಿಮಿಷವಾದರೂ ಬೇಕು. ಹದಗೆಟ್ಟ ರಸ್ತೆಯಲ್ಲಿ ಓಡಾಡುವುದನ್ನು ಬಿಟ್ಟು ವಾಹನ ಸವಾರರು ದೂರುವಾದರೂ ಸರಿಯೇ ಎಂದು ಸುತ್ತಿಬಳಸಿ ಓಡಾಡತ್ತಿದ್ದಾರೆ.ನಗರದಿಂದ ಸಂತೆಗೇಟ್, ದೊಡ್ಡಹುಲ್ಲುರು, ಚಿಕ್ಕಹುಲ್ಲುರು ಮಾರ್ಗವಾಗಿ ಪುನಃ ಕಂಬಳಿಪುರ ಗೇಟ್ ಬಳಿಗೆ ಬರುತ್ತಾರೆ. ಇಲ್ಲವೇ ಹೊಸಕೋಟೆ ಸೂಲಿಬೆಲೆ, ಬೆಂಡಿಗಾನಹಳ್ಳಿ ಮೂಲಕ ಶಿಡ್ಲಘಟ್ಟಕ್ಕೆ ತೆರಳಬೇಕಿದೆ.ಇಲಾಖೆ ಮೀನಮೇಷ: ಡೇರಿ ಸಮೀಪ ಆರೇಳು ತಿಂಗಳ ಹಿಂದೆ ಕುರಬರಹಳ್ಳಿ ಗೇಟ್ ನಿಂದ ಹೊಸಕೋಟೆ ಡೇರಿ ವರೆಗೆ ಹದಗೆಟ್ಟಿದ್ದ ರಸ್ತೆಯನ್ನು ದುರಸ್ತಿ ಮಾಡಲು ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಸೇತುವೆ ನಿರ್ಮಾಣದ ನೆಪದಲ್ಲಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಸೇತುವೆ ಕಾಮಗಾರಿ ಪೂರ್ಣಗೊಂಡರೂ ರಸ್ತೆ ಕಾಮಗಾರಿ ಪುನಾರಂಭಿಸಲು ಲೋಕೋಪಯೋಗಿ ಇಲಾಖೆ ಮೀನಮೇಷ ಎಣಿಸುತ್ತಿದೆ.ಚಿಂತಾಮಣಿ ರಸ್ತೆಯ ಸೋಣದೇನಹಳ್ಳಿ ಬಳಿ ಶಿಡ್ಲಘಟ್ಟ ತಿರುವಿಗೆ ಮಣ್ಣು ಸುರಿದು ನಾಲ್ಕೈದು ತಿಂಗಳು ಕಳೆದರೂ ಕಾಮಗಾರಿಯನ್ನೂ ಆರಂಭಿಸಿಲ್ಲ. ಸಣ್ಣ ವಾಹನ ಹೊರತುಪಡಿಸಿ, ಉಳಿದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.ಸುರಕ್ಷಿತ ನಿಯಮ ಗಾಳಿಗೆರಸ್ತೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸ್ಥಳೀಯ ಜನರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಗುತ್ತಿಗೆದಾರರು ಹಾಗೂ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೆದ್ದಾರಿ ಪ್ರಾಧಿಕಾರ ನಿಯಮ ಹೇಳುತ್ತದೆ. ಆದರೆ ಇಲ್ಲಿ ಎಲ್ಲ ನಿಯಮ ಮತ್ತು ಮಾನದಂಡಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಸಲಾಗುತ್ತಿದೆ. ಯಾವ ಸುರಕ್ಷಿತ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ವಾಹನ ಸವಾರರು ಆರೋಪಿಸಿದ್ದಾರೆ.ಮುಖ್ಯರಸ್ತೆ ಬಂದ್ ಮಾಡುವ ಮುನ್ನ ವಾಹನಗಳ ಓಡಾಡಕ್ಕೆ ಯೋಗ್ಯ ತಾತ್ಕಾಲಿಕ ರಸ್ತೆ ನಿರ್ಮಿಸಿ, ದೂಳು ಮುಕ್ತವಾಗಿರಲು ನಿಯಮಿತವಾಗಿ ನೀರು ಸಿಂಪಡಿಸಬೇಕು. ಕಾಮಗಾರಿ ನಡೆಯುವ ಸ್ಥಳಕ್ಕೆ ಕನಿಷ್ಠ 100 ಮೀಟರ್ ದೂರದಲ್ಲೇ ‘ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ’, ‘ವೇಗ ಮಿತಿ’, ‘ಪರ್ಯಾಯ ಮಾರ್ಗದ ನಕ್ಷೆ’ ಎಂಬ ಒಕ್ಕಣೆವುಳ್ಳ ಸೂಚನಾ ಫಲಕವನ್ನು ಅಳವಡಿಸಬೇಕು. ರಸ್ತೆ ಅಗೆದಿರುವ ಅಥವಾ ಅಪಾಯಕಾರಿ ಇರುವ ಜಾಗಗಲ್ಲಿ ಬೀಳದಂತೆ ಬ್ಯಾರಿಕೇಡ್ ಅಥವಾ ಸುರಕ್ಷತಾ ಜಾಲರಿ ಅಳವಡಿಸಬೇಕು. ಆದರೆ ಇದ್ಯಾವುದು ಇಲ್ಲಿ ಪಾಲನೆ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು.ಅಪಘಾತಹೊಸಕೋಟೆ, ಕಾಡುಗೋಡಿ, ವೈಟ್ ಫೀಲ್ಡ್, ಗುಂಜೂರು, ಸರ್ಜಾಪೂರ, ಅತ್ತಿಬೆಲೆ ಮೂಲಕ ಆನೇಕಲ್ಗೆ ಸಂಪರ್ಕಿಸುವ ಈ ಹೆದ್ದಾರಿ ತುಂಬಾ ಗುಂಡಿಗಳು ಆವರಿಸಿರುವುದರಿಂದ ದಿನದಿಂದ ದಿನಕ್ಕೆ ಜನರ ಪಾಲಿಗೆ ಪಾಲಿಗೆ ಯಮ ಸ್ವರೂಪಿಯಾಗಿ ಮಾರ್ಪಡುತ್ತಿದೆ. ಶಾಸಕರ ಸ್ವಗ್ರಾಮ ಬೆಂಡಿಗಾನಹಳ್ಳಿಯಿಂದ ಹೊಸಕೋಟೆ ನಗರದ ಸಮೀಪದ ಸೋಣದೇನಹಳ್ಳಿ ಗ್ರಾಮದವರೆಗೆ ಆಗ್ಗಾಗ್ಗೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಆದರೆ ಇದ್ಯಾವುದು ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದಿಲ್ಲ ಎನ್ನುತ್ತಾರೆ ಸ್ಥಳೀಯರು.ಜನ ಏನಂತಾರೆ?10 ನಿಮಿಷದ ಹಾದಿಗೆ ಬೇಕು ತಾಸುಇ-ಮುತ್ಸಂದ್ರ ಮತ್ತು ಏಕರಾಜಪುರದಲ್ಲಿ ಈಚೆಗೆ ಕಂಪನಿ ಮತ್ತು ವೇರ್ಹೌಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ವಿವಿಧ ಭಾಗಗಳಿಂದ ಕೆಲಸ ಹರಸಿ ಬರುತ್ತಿದ್ದಾರೆ. ಆದರೆ ರಾಜ್ಯ ಹೆದ್ದಾರಿ–35ರ ರಸ್ತೆಯಲ್ಲಿ ಸೊಣದೇನಹಳ್ಳಿಯಿಂದ ಕಂಬಳಿಪುರ ಗೇಟ್ ವರೆಗೆ 10 ನಿಮಿಷದ ದಾರಿಗೆ ಒಂದು ತಾಸು ಹಿಡಯುತ್ತಿದೆ. ಕೆಲಸದ ಸಮಯಕ್ಕೆ ಸರಿಯಾಗಿ ಬಾರಲಾಗದೆ ಒದ್ದಾಡುವಂತಾಗಿದೆ.ಆನಂದ್, ಕಾರ್ಮಿಕ, ಹೊಸಕೋಟೆಓಡಾಡಲು ಭಯಕೊಲೆ ಬೆದರಿಕೆ ಸುಲಿಗೆಗೆ ಹೆಸರುವಾಸಿಯಾಗಿದ್ದ ಈ ರಸ್ತೆಯಲ್ಲಿ ಒಂದೊಮ್ಮೆ ಓಡಾಡಲು ಜನ ಭಯಪಡುತ್ತಿದ್ದ ದಿನಗಳಿತ್ತು. ಆದರೆ ಈಗ ಅಂತಹ ದಿನಗಳು ದೂರವಾದರೂ ಹದಗೆಟ್ಟ ಈ ರಸ್ತೆಯಲ್ಲಿ ಓಡಾಡಲು ಜನ ಭಯಪಡುವ ದುಸ್ಥಿತಿ ನಿರ್ಮಾಣವಾಗಿದೆ.ಸುಬ್ರಮಣಿ, ಬೈಕ್ ಸವಾರ, ಶಿಡ್ಲಘಟ್ಟದಶಕದಿಂದ ಬದಲಾಗದ ಬದುಕುನಮ್ಮ ಗ್ರಾಮಕ್ಕೆ ಕೂಗಳತೆ ದೂರದಲ್ಲಿ ಶಾಸಕರ ಸ್ವಗ್ರಾಮವಿದೆ. ಪಕ್ಕದ ಊರಿನವರು ರಾಜಕಾರಣದಲ್ಲಿ ಮುಂದಿದ್ದರೆ ನಮ್ಮಗಳ ಬದುಕುಗಳು ಸಹ ಹಸನಾಗುತ್ತೆ ಅಂತ ಕನಸು ಕಂಡಿದ್ದೇವು. ಆದರೆ ದಶಕಗಳೇ ಉರುಳಿದರೂ ಅವರ ಮಕ್ಕಳು ಮೊಮ್ಮಕ್ಕಳು ಬಲಿಷ್ಟಗೊಳ್ಳುತ್ತಿದ್ದಾರೆಯೇ ಹೊರತು ನಮ್ಮ ಬದುಕು ಏನು ಬದಲಾಗುತ್ತಿಲ್ಲ.ಹೆಸರು ಹೇಳಲು ಇಚ್ಛಿಸದ ವ್ಯಕ್ತಿಲೋಕೋಪಯೋಗಿ ಇಲಾಖೆ ಸಿಬ್ಬಂದಿಉದ್ದೇಶಿತ ಕಾಮಗಾರಿಯ ಒಂದು ಭಾಗದಲ್ಲಿ ಅರಣ್ಯ ವಲಯದಲ್ಲಿ ಇರುವ ಕಾರಣ ಅನುಮತಿ ಸಿಗುವುದು ವಿಳಂಬವಾಗಿದೆ. ಶೀಘ್ರ ಅನುಮತಿ ಪಡೆದು ಈ ತಿಂಗಳಲ್ಲಿಯೇ ಕಾಮಗಾರಿ ಪುನರಾರಂಭಿಸಲಾಗುವುದು261109-15-71264600