ಬೆಳಗಾವಿ| ಆಹಾರ ಸುರಕ್ಷತೆ ಅಧಿಕಾರಿಗಳ ಕೊರತೆ: ದಾಳಿಗೆ ಹಿನ್ನಡೆ!
ಬೆಳಗಾವಿ: ಜಿಲ್ಲೆಯ ಹೋಟೆಲ್ಗಳು ಹಾಗೂ ರಸ್ತೆಬದಿಯ ಟೀ–ಸ್ಟಾಲ್ಗಳಲ್ಲಿ ಶುಚಿತ್ವ ಇಲ್ಲದಿರುವುದು, ಅವಧಿ ಮೀರಿದ ವಸ್ತುಗಳು ಹಾಗೂ ಅಪಾಯಕಾರಿ ರಾಸಾಯನಿಕ ಪದಾರ್ಥಗಳನ್ನು ಆಹಾರ ಖಾದ್ಯಗಳ ತಯಾರಿಕೆಗೆ ಬಳಸುತ್ತಿರುವ ದೂರು ಕೇಳಿಬರುತ್ತಲೇ ಇವೆ.ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿನ ಹೋಟೆಲ್ಗಳಿಗೆ ಇತ್ತೀಚೆಗೆ ಭೇಟಿ ಕೊಟ್ಟಿದ್ದ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀ

ಬೆಳಗಾವಿ: ಜಿಲ್ಲೆಯ ಹೋಟೆಲ್ಗಳು ಹಾಗೂ ರಸ್ತೆಬದಿಯ ಟೀ–ಸ್ಟಾಲ್ಗಳಲ್ಲಿ ಶುಚಿತ್ವ ಇಲ್ಲದಿರುವುದು, ಅವಧಿ ಮೀರಿದ ವಸ್ತುಗಳು ಹಾಗೂ ಅಪಾಯಕಾರಿ ರಾಸಾಯನಿಕ ಪದಾರ್ಥಗಳನ್ನು ಆಹಾರ ಖಾದ್ಯಗಳ ತಯಾರಿಕೆಗೆ ಬಳಸುತ್ತಿರುವ ದೂರು ಕೇಳಿಬರುತ್ತಲೇ ಇವೆ.ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿನ ಹೋಟೆಲ್ಗಳಿಗೆ ಇತ್ತೀಚೆಗೆ ಭೇಟಿ ಕೊಟ್ಟಿದ್ದ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಅಲ್ಲಿ ಸ್ವಚ್ಛತೆ ಇಲ್ಲದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಪರಿಶೀಲನೆಗಾಗಿ ಹೋಟೆಲ್ಗಳಿಗೆ ನಿಯಮಿತವಾಗಿ ಭೇಟಿ ಕೊಡದ್ದಕ್ಕೆ ಆಹಾರ ಸುರಕ್ಷತಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.ಆದರೆ, ನಿಯಮ ಉಲ್ಲಂಘಿಸಿ ಆಹಾರ ಪದಾರ್ಥ ತಯಾರಿಸುತ್ತಿರುವ ಅಂಗಡಿಕಾರರ ಮೇಲೆ ಕ್ರಮ ಜರುಗಿಸಲು ಬೇಡಿಕೆಯಷ್ಟು ಆಹಾರ ಸುರಕ್ಷತಾ ಅಧಿಕಾರಿಗಳೇ ಇಲ್ಲ!‘ನಿಯಮಿತವಾಗಿ ದಾಳಿ ನಡೆಯದ ಹಿನ್ನೆಲೆಯಲ್ಲಿ, ವಿವಿಧ ಹೋಟೆಲ್ನವರು ಅಡುಗೆಗೆ ನಿರಾತಂಕವಾಗಿ ಅಪಾಯಕಾರಿ ರಾಸಾಯನಿಕ ಪದಾರ್ಥ ಮತ್ತು ಅವಧಿ ಮೀರಿದ ವಸ್ತು ಬಳಸುತ್ತಿದ್ದಾರೆ’ ಎಂಬ ಆರೋಪ ವ್ಯಾಪಕವಾಗಿದೆ.‘ಬೆಳಗಾವಿಯಲ್ಲಿ ಹೋಟೆಲ್ಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಉದ್ಯೋಗ ಅರಸಿ ಬರುವವರು ಹೋಟೆಲ್ಗಳಲ್ಲೇ ಆಹಾರ ಸೇವಿಸುತ್ತಾರೆ. ಅಲ್ಲಿ ಗುಣಟಮಟ್ಟದ ಆಹಾರ ಸಿಗಬೇಕು. ಇದಕ್ಕಾಗಿ ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸುತ್ತಿರಬೇಕು’ ಎನ್ನುತ್ತಾರೆ ವಡಗಾವಿಯ ನಿವಾಸಿ ಅಭಿಷೇಕ ದಿವಟಗಿ.ಬೆಳಗಾವಿ ಜಿಲ್ಲೆಯಲ್ಲಿ ಈ ಹಿಂದೆ 10 ತಾಲ್ಲೂಕು ಕೇಂದ್ರಗಳಿದ್ದವು. ಈ ಪೈಕಿ ಬೆಳಗಾವಿ ನಗರ ಮತ್ತು ಬೆಳಗಾವಿ ಗ್ರಾಮೀಣ ಭಾಗಕ್ಕೆ ಪ್ರತ್ಯೇಕವಾಗಿ ಎರಡು ಆಹಾರ ಸುರಕ್ಷತಾ ಅಧಿಕಾರಿ ಹುದ್ದೆ ಮಂಜೂರಾಗಿವೆ. ಉಳಿದ ತಾಲ್ಲೂಕಿಗೆ ಒಂದು ಹುದ್ದೆ ಮಂಜೂರು ಮಾಡಲಾಗಿದೆ.ಆದರೆ, ಮಂಜೂರಾದ 11 ಆಹಾರ ಸುರಕ್ಷತಾ ಅಧಿಕಾರಿ ಹುದ್ದೆ ಪೈಕಿ ಬೆಳಗಾವಿ ಗ್ರಾಮೀಣ, ಚಿಕ್ಕೋಡಿ ಮತ್ತು ಗೋಕಾಕ ತಾಲ್ಲೂಕಿಗೆ ಮಾತ್ರ ಪೂರ್ಣಕಾಲಿಕ ಅಧಿಕಾರಿಗಳಿದ್ದಾರೆ. ಅದರಲ್ಲೂ ಮುಖ್ಯವಾಗಿ ಬೆಳಗಾವಿ ನಗರದ ಆಹಾರ ಸುರಕ್ಷತೆ ಹುದ್ದೆಯೇ ಖಾಲಿ ಇದೆ!ಆಹಾರ ಸುರಕ್ಷತೆ ಅಧಿಕಾರಿಗಳು ಇಲ್ಲದ ಕಡೆ, ಆಯಾ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಅವರಿಗೆ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನದ ಜತೆಗೆ, ಆಹಾರ ಸುರಕ್ಷತೆ ಮೇಲೆ ನಿಗಾ ಇರಿಸುವುದು ಕಷ್ಟವಾಗಿ ಪರಿಣಮಿಸಿದೆ.ಈ ಹಿಂದೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿಯಾಗಿದ್ದರು. ಈಗ ಬೆಳಗಾವಿ ಉಪವಿಭಾಗಾಧಿಕಾರಿಗೆ ಆ ಜವಾಬ್ದಾರಿ ನೀಡಲಾಗಿದೆ.₹1.80 ಲಕ್ಷ ದಂಡ‘ಬೆಳಗಾವಿ ಮಹಾನಗರ ವ್ಯಾಪ್ತಿಯ ಹೋಟೆಲ್ಗಳಲ್ಲಿ ಸ್ವಚ್ಛತೆ ಕಾಪಾಡದ ಹಾಗೂ ಅವಧಿ ಮೀರಿದ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಕಳೆದ ಮೂರು ತಿಂಗಳ ಅವಧಿಯಲ್ಲಿ ₹1.80 ಲಕ್ಷ ದಂದ ವಿಧಿಸಿದ್ದೇವೆ. ಸಂಶಯ ಮತ್ತು ದೂರು ಕಂಡುಬಂದ ಕಡೆ ದಾಳಿ ಮಾಡಿ, ಆಹಾರ ಮಾದರಿ ಸಂಗ್ರಹಿಸಿ, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದೇವೆ’ ಎಂದು ಬೆಳಗಾವಿ ಗ್ರಾಮೀಣ ಆಹಾರ ಸುರಕ್ಷತಾ ಅಧಿಕಾರಿ ಹರೀಶ ಎಚ್.ಎಸ್. ಹೇಳಿದರು.ಹೊಸ ತಾಲ್ಲೂಕುಗಳಲ್ಲೂ ಹುದ್ದೆ ಸೃಜಿಸಲಿಬೆಳಗಾವಿ ಜಿಲ್ಲೆಯಲ್ಲಿ ಈ ಹಿಂದೆ 10 ತಾಲ್ಲೂಕುಗಳಿದ್ದವು. ಈಗ ಆ ಸಂಖ್ಯೆ 15ಕ್ಕೇರಿದೆ. ಹೊಸದಾಗಿ ರಚನೆಯಾದ ತಾಲ್ಲೂಕುಗಳಲ್ಲೂ ಪ್ರತ್ಯೇಕವಾಗಿ ಆಹಾರ ಸುರಕ್ಷತೆ ಅಧಿಕಾರಿ ಹುದ್ದೆಗಳನ್ನು ಸರ್ಕಾರ ಸೃಜಿಸಬೇಕು ಎಂಬ ಒತ್ತಾಯ ಸಾರ್ವಜನಿಕರದ್ದು.ದಾಳಿ ಪ್ರಕ್ರಿಯೆ ಚುರುಕುಗೊಳಿಸುತ್ತೇವೆ‘ಈಚೆಗೆ ಬೆಳಗಾವಿ ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಆಹಾರ ಸುರಕ್ಷತೆ ಅಧಿಕಾರಿ ಹುದ್ದೆ ಖಾಲಿ ಇರುವ ಬಗ್ಗೆ ಡಿ.ಸಿ ಗಮನಕ್ಕೆ ತಂದು ಹೆಚ್ಚುವರಿ ಸಿಬ್ಬಂದಿ ಒದಗಿಸುವಂತೆ ಕೋರುತ್ತೇನೆ. ಹೋಟೆಲ್ಗಳ ಮೇಲೆ ದಾಳಿ ಮಾಡುವ ಪ್ರಕ್ರಿಯೆ ಚುರುಕುಗೊಳಿಸುತ್ತೇವೆ’ ಎಂದು ಬೆಳಗಾವಿ ಉಪವಿಭಾಗಾಧಿಕಾರಿ ಬಸವರಾಜ ನಾಗರಾಳ ‘ಪ್ರಜಾವಾಣಿ’ಗೆ ತಿಳಿಸಿದರು.ಅಪಾಯಕ್ಕೆ ಯಾರು ಹೊಣೆ?‘ಬೆಳಗಾವಿ ನಗರವಷ್ಟೇ ಅಲ್ಲದೆ; ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿನ ಹೋಟೆಲ್ಗಳು, ಟೀಸ್ಟಾಲ್ಗಳಲ್ಲಿ ಕೆಲವರು ಆಹಾರ ಸುರಕ್ಷತೆಗೆ ಆದ್ಯತೆಯನ್ನೇ ಕೊಡುತ್ತಿಲ್ಲ. ಅವಧಿ ಮೀರಿದ ವಸ್ತು ಬಳಸಿ ಅಡುಗೆ ಮಾಡುತ್ತಿದ್ದಾರೆ. ಆಹಾರ ಸುರಕ್ಷತೆ ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಆಗೊಮ್ಮೆ, ಈಗೊಮ್ಮೆ ದಾಳಿ ಮಾಡುತ್ತಿದ್ದಾರೆಯೇ ಹೊರತು, ಕಠಿಣ ಕ್ರಮ ಜರುಗಿಸುತ್ತಿಲ್ಲ. ಇಂಥ ಆಹಾರ ಪದಾರ್ಥ ಸೇವಿಸಿ ಜನರ ಜೀವಕ್ಕೆ ಅಪಾಯ ಎದುರಾದರೆ ಯಾರು ಹೊಣೆ’ ಎಂದು ಪ್ರಶ್ನಿಸುತ್ತಾರೆ ಹಸನಸಾಬ್ ಅತ್ತಾರ.261109-21-532639601