‘ರಾಮಾಯಣ’ದ ಕನ್ನಡ ಆವೃತ್ತಿಯಲ್ಲಿ ಸೀತೆಯ ಪಾತ್ರಕ್ಕೆ ಧ್ವನಿ ನೀಡಿದವರು ಇವರೇ ನೋಡಿ
‘ಮಹಾನಟಿ’ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿರುವ ಖ್ಯಾತ ಧ್ವನಿ ಕಲಾವಿದೆ ಆಶಿಕಾ ಶರ್ಮಾ, ಇದೀಗ ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿರುವ ‘ರಾಮಾಯಣ’ ಸಿನಿಮಾದಲ್ಲಿ ಸೀತೆಯಾಗಿ ಕಾಣಿಸಿಕೊಂಡಿರುವ ಸಾಯಿ ಪಲ್ಲವಿ ಅವರಿಗೆ ಕನ್ನಡದಲ್ಲಿ ಧ್ವನಿ ನೀಡಿದ್ದಾರೆ. ಈ ಅಪರೂಪದ ಪಯಣದ ಕುರಿತು ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಬರೆದುಕೊಂ

‘ಮಹಾನಟಿ’ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿರುವ ಖ್ಯಾತ ಧ್ವನಿ ಕಲಾವಿದೆ ಆಶಿಕಾ ಶರ್ಮಾ, ಇದೀಗ ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿರುವ ‘ರಾಮಾಯಣ’ ಸಿನಿಮಾದಲ್ಲಿ ಸೀತೆಯಾಗಿ ಕಾಣಿಸಿಕೊಂಡಿರುವ ಸಾಯಿ ಪಲ್ಲವಿ ಅವರಿಗೆ ಕನ್ನಡದಲ್ಲಿ ಧ್ವನಿ ನೀಡಿದ್ದಾರೆ. ಈ ಅಪರೂಪದ ಪಯಣದ ಕುರಿತು ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.ತಮ್ಮ ಕಲಾ ಪಯಣವನ್ನು ಸ್ಮರಿಸಿರುವ ಆಶಿಕಾ ಶರ್ಮಾ, ‘ರಾಧಾ ಕೃಷ್ಣ’ ಧಾರಾವಾಹಿಯಲ್ಲಿ ರಾಧೆಯಾಗಿ, ‘ಸೀತೆ ರಾಮ’ದಲ್ಲಿ ಸೀತೆಯಾಗಿ, ಇದೀಗ ಮಹಾಕಾವ್ಯ ‘ರಾಮಾಯಣ’ ಸಿನಿಮಾದಲ್ಲೂ ಸೀತೆಯ ಪಾತ್ರಕ್ಕೆ ಧ್ವನಿಯಾಗಿರುವುದು ನನ್ನ ಕಲಾ ಪಯಣದ ಅತ್ಯಂತ ಸುಂದರ ಹಾಗೂ ಪೂರ್ಣತೆಯ ಕ್ಷಣ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.ಮೊದಲ ವಾರಾಂತ್ಯಕ್ಕೆ ದಾಖಲೆ ಬರೆದ ರಾಮಾಯಣ: ಗಳಿಸಿದ್ದೆಷ್ಟು? ರಾಮಾಯಣ - ದಿ ಒಡಿಸ್ಸಿ ದೃಶ್ಯಗಳ ಸಾಮ್ಯತೆ ಕುರಿತು ನಿತೇಶ್ ತಿವಾರಿ ಹೇಳಿದ್ದಿಷ್ಟು View this post on Instagram ಸಿನಿಮಾದಲ್ಲಿ ಸೀತೆಯಾಗಿ ನಟಿಸಿರುವ ಸಾಯಿ ಪಲ್ಲವಿ ಅವರ ಅಭಿನಯವನ್ನು ಕೊಂಡಾಡಿರುವ ಅವರು, ‘ಸಾಯಿ ಪಲ್ಲವಿ ಅವರ ಮುಗ್ಧತೆ, ಸಹಜತೆ ಹಾಗೂ ಅದ್ಭುತ ನಟನೆಯೇ ಈ ಪಾತ್ರಕ್ಕೆ ಧ್ವನಿ ನೀಡುವ ಅನುಭವವನ್ನು ಮತ್ತಷ್ಟು ವಿಶೇಷಗೊಳಿಸಿತು’ ಎಂದು ಪ್ರಶಂಸಿದ್ದಾರೆ.ಈ ಬೃಹತ್ ಸಿನಿಮಾದಲ್ಲಿ ಧ್ವನಿ ನೀಡುವ ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದ ತಿಳಿಸಿರುವ ಆಶಿಕಾ, ‘ಈ ಆಶೀರ್ವಾದಕ್ಕಾಗಿ ವಿಶ್ವಕ್ಕೂ, ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ಇಡೀ ರಾಮಾಯಣ ಚಿತ್ರತಂಡಕ್ಕೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು’ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.ರಿಯಾಲಿಟಿ ಶೋಗಳ ಮೂಲಕ ತಮ್ಮ ಧ್ವನಿ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡಿದ್ದ ಆಶಿಕಾ ಶರ್ಮಾ, ಇದೀಗ ‘ರಾಮಾಯಣ’ದಂತಹ ಬಹುಕೋಟಿ ಬಜೆಟ್ನ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಧ್ವನಿಯಾಗಿರುವುದು ಕನ್ನಡಿಗರಿಗೆ ಹಾಗೂ ಅವರ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರವಾಗಿದೆ.