KPSC Scam | 10 ತಿಂಗಳಲ್ಲಿ ಕೋಟಿ ಕೋಟಿ ಕಮಾಯ್ – 8 ಕೋಟಿ ಮೌಲ್ಯದ ಆಸ್ತಿ ಖರೀದಿಸಿದ್ದ ಕನ್ನಾಳೆ
ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಪೊಲೀಸ್ ತನಿಖೆಯಲ್ಲಿ ಕಿಂಗ್ಪಿನ್ ಬಸವರಾಜ್ ಕನ್ನಾಳೆಯ (Basavaraj Kannale) ಕರಾಳ ಮುಖ, ಮತ್ತಷ್ಟು ಮಾಹಿತಿಗಳು ಅನಾವರಣ ಆಗ್ತಿದೆ. 20 ಅಭ್ಯರ್ಥಿಗಳ ಬಳಿ ಹಣ ಪಡೆದ್ದ ಕನ್ನಾಳೆ, ಜನವರಿ 8 ಮತ್ತು 9 ತಾರೀಖಿನಂದು ದೇವನಹಳ್ಳಿಯ ಸಿಂಗಹಳ್ಳಿ ಬಳಿಯ ಆರ್ಕೀಡ್ ನಿರ್ವಾಣದಲ್ಲಿ ರೂಂ ಬುಕ್ಕಿಂ

ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಪೊಲೀಸ್ ತನಿಖೆಯಲ್ಲಿ ಕಿಂಗ್ಪಿನ್ ಬಸವರಾಜ್ ಕನ್ನಾಳೆಯ (Basavaraj Kannale) ಕರಾಳ ಮುಖ, ಮತ್ತಷ್ಟು ಮಾಹಿತಿಗಳು ಅನಾವರಣ ಆಗ್ತಿದೆ. 20 ಅಭ್ಯರ್ಥಿಗಳ ಬಳಿ ಹಣ ಪಡೆದ್ದ ಕನ್ನಾಳೆ, ಜನವರಿ 8 ಮತ್ತು 9 ತಾರೀಖಿನಂದು ದೇವನಹಳ್ಳಿಯ ಸಿಂಗಹಳ್ಳಿ ಬಳಿಯ ಆರ್ಕೀಡ್ ನಿರ್ವಾಣದಲ್ಲಿ ರೂಂ ಬುಕ್ಕಿಂಗ್ ಮಾಡಿದ್ದಾನೆ. 2 ದಿನಕ್ಕೆ ವಿಲ್ಲಾ ಬಾಡಿಗೆ ಪಡೆದು ತನ್ನ ಯುಪಿಐ (UPI) ಮೂಲಕ 37,800 ರೂಪಾಯಿ ಹಣ ಸಂದಾಯ ಮಾಡಿದ್ದಾನೆ. ವಿಲ್ಲಾದಲ್ಲೇ ಅಭ್ಯರ್ಥಿಗಳಿಗೆ ಟ್ರೈನಿಂಗ್ ನೀಡಿ, ಬಳಿಕ ಬಸ್ನಲ್ಲಿ ಎಕ್ಸಾಂ ಸೆಂಟರ್ಗೆ ಡ್ರಾಪ್ ಮಾಡಿಸಿದ್ದಾನೆ. ಕೇವಲ 10 ತಿಂಗಳಲ್ಲಿ ಕೋಟಿ ಕೋಟಿ ಸಂಪದಾನೆ ಮಾಡಿದ್ದ ಕನ್ನಾಳೆ, 8 ಕೋಟಿ ಮೌಲ್ಯದ ಆಸ್ತಿ ಖರೀದಿ ಮಾಡಿದ್ದಾನೆ. ಎಲ್ಲವನ್ನೂ ನಗದು ರೂಪದಲ್ಲಿಯೇ ವ್ಯವಹಾರ ಮಾಡಿದ್ದಾನೆ. ಕನ್ನಾಳೆ ಕೊಡ್ತಿದ್ದ ಹಣವನ್ನು ಭಾಲ್ಕಿಯ ಓಂ ಲಕ್ಷ್ಮಿ ಕೋ ಅಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಓಂಕಾರ್ ವೈಟ್ಮನಿಯಾಗಿ ಕನ್ವರ್ಟ್ ಮಾಡಿಕೊಡುತ್ತಿದ್ದನಂತೆ. ಈ ಮಧ್ಯೆ, ಕೆಪಿಎಸ್ಸಿ ಅಭ್ಯರ್ಥಿಗಳ ಜೊತೆ ಸಂವಾದ ನಡೆಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ಪಶು ವೈದ್ಯಕೀಯ ಪರೀಕ್ಷೆ ಅಕ್ರಮ ಆಗಿದೆ ಅಂತ ಕಿಡಿಕಾರಿದ್ದಾರೆ.