Mysuru Dasara | ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗದ ವೇಳಾಪಟ್ಟಿಯಲ್ಲಿ ಬದಲಾವಣೆ
ಮೈಸೂರು: ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ (Mysuru Dasara) ಜಟ್ಟಿ ಕಾಳಗದ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಬನ್ನಿ ಪೂಜೆ ಬಳಿಕ ಜಟ್ಟಿ ಕಾಳಗ ನಡೆಸಲು ನಿರ್ಧರಿಸಲಾಗಿದೆ. ಸಾಮಾನ್ಯವಾಗಿ ವಜ್ರಮುಷ್ಠಿ ಜಟ್ಟಿ ಕಾಳಗದ ಪೂಜೆಯಾದ ಬಳಿಕ ರಾಜರ ವಿಜಯಯಾತ್ರೆ ಮತ್ತು ಜಂಬೂಸವಾರಿ ಮೆರವಣಿಗೆ ಆರಂಭವಾಗುತ್ತದೆ. ಮಟ್ಟಿ ಪೂಜೆ ನಡೆದ ಬಳಿಕ ಶ್ವ

ಮೈಸೂರು: ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ (Mysuru Dasara) ಜಟ್ಟಿ ಕಾಳಗದ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಬನ್ನಿ ಪೂಜೆ ಬಳಿಕ ಜಟ್ಟಿ ಕಾಳಗ ನಡೆಸಲು ನಿರ್ಧರಿಸಲಾಗಿದೆ. ಸಾಮಾನ್ಯವಾಗಿ ವಜ್ರಮುಷ್ಠಿ ಜಟ್ಟಿ ಕಾಳಗದ ಪೂಜೆಯಾದ ಬಳಿಕ ರಾಜರ ವಿಜಯಯಾತ್ರೆ ಮತ್ತು ಜಂಬೂಸವಾರಿ ಮೆರವಣಿಗೆ ಆರಂಭವಾಗುತ್ತದೆ. ಮಟ್ಟಿ ಪೂಜೆ ನಡೆದ ಬಳಿಕ ಶ್ವೇತ ವರಾಹ ಸ್ವಾಮಿ ದೇಗುಲದಲ್ಲಿ ಪೈಲ್ವಾನ್ಗಳು ರೆಡಿಯಾಗಿ, ಕರಿಕಲ್ ತೊಟ್ಟಿಗೆ ಪ್ರವೇಶ ಮಾಡುತ್ತಾರೆ. ಬಳಿಕ ಕರಿಕಲ್ ತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ನಡೆಯುತ್ತದೆ.ಇದನ್ನೂ ಓದಿ: Mysuru Dasara Live: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಈ ಬಾರಿ ಬೆಳಿಗ್ಗೆ 6 ಗಂಟೆಯಿಂದ ಜಟ್ಟಿಗಳು ಕಾಯುತ್ತಿದ್ದರೂ ಕೂಡ ವಜ್ರಮುಷ್ಠಿ ಜಟ್ಟಿ ಕಾಳಗದ ಪೂಜೆ ಆರಂಭವಾಗಿರಲಿಲ್ಲ. ಜಟ್ಟಿಗಳ ಪೂಜೆ ಮತ್ತು ಜಟ್ಟಿಗಳ ತಯಾರಿಯಲ್ಲಿ ವಿಳಂಬವಾಗಿದ್ದು, ಮುಹೂರ್ತ ಮೀರಿದರೆ ವಿಜಯಯಾತ್ರೆ ಪೂಜೆ ಮಾಡಲು ಆಗಲ್ಲ ಎಂಬ ಕಾರಣಕ್ಕೆ ಬನ್ನಿ ಪೂಜೆ ಬಳಿಕ ಜಟ್ಟಿ ಕಾಳಗ ನಡೆಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ – ಹಸಿರು ಸೀರೆಯಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ ಈ ಬಾರಿ ಜಟ್ಟಿ ಕಾಳಗಕ್ಕೆ ಬೆಂಗಳೂರು, ಚನ್ನಪಟ್ಟಣ, ಚಾಮರಾಜನಗರ ಮತ್ತು ಮೈಸೂರಿನಿಂದ ಜಟ್ಟಿಗಳು ಬಂದಿದ್ದು, ಒಟ್ಟು ನಾಲ್ಕು ಜಟ್ಟಿಗಳ ನಡುವೆ ವಜ್ರಮುಷ್ಠಿ ಕಾಳಗ ನಡೆಯಬೇಕಿತ್ತು. ಮೈಸೂರು ವರ್ಸಸ್ ಬೆಂಗಳೂರು ಹಾಗೂ ಚನ್ನಪಟ್ಟಣ ವರ್ಸಸ್ ಚಾಮರಾಜನಗರ ಜಿಲ್ಲೆಗಳ ಜೆಟ್ಟಿಗಳ ನಡುವೆ ಸೆಣಸಾಟವಿತ್ತು. ಮೈಸೂರಿನ ಮಹೇಶ್ ಜೆಟ್ಟಿ, ಬೆಂಗಳೂರಿನ ಚೇತನ್ ಜೆಟ್ಟಿ, ಚಾಮರಾಜನಗರದ ಸತೀಶ್ ಜೆಟ್ಟಿ, ಚನ್ನಪಟ್ಟಣದ ತೇಜಸ್ ಶೆಟ್ಟಿ ಭಾಗಿಯಾಗಿದ್ದರು. ರಾಜವಂಶಸ್ಥ ಯದುವೀರ್ ಮುಂದೆ ರಕ್ತ ಸುರಿಸಿ ಸೆಣಸಾಡುವ ಮೂಲಕ ರಾಜವಂಶಸ್ಥರಿಗೆ ನಿಷ್ಠೆ ತೋರಿಸುವ ಜೆಟ್ಟಿ ಕುಲದವರು ಬೆಳಿಗ್ಗೆ 9 ಗಂಟೆಗೆ ಜೆಟ್ಟಿ ಕಾಳಗಕ್ಕೆ ಸಿದ್ಧರಾಗಿದ್ದರು. ಪೊಲೀಸರು ಪಾಸ್ನ ನೆಪ ಹೇಳಿ ಜಟ್ಟಿ ಕಾಳಗಕ್ಕೆ ಜಟ್ಟಿಗಳನ್ನು ಹಾಗೂ ಅವರ ಕಡೆಯವರನ್ನು ಬಿಡಲಿಲ್ಲ. ಈ ವೇಳೆ ಪೊಲೀಸರು ಮತ್ತು ಜಟ್ಟಿಗಳ ನಡುವೆ ವಾಗ್ವಾದ ನಡೆಯಿತು. ಕೊನೆಗೆ ವಿಜಯ ಯಾತ್ರೆಯ ಮುಹೂರ್ತ ಮೀರುವ ಆತಂಕ ಶುರುವಾಗಿ, ಮೊದಲು ಯದುವೀರ್ ವಿಜಯಯಾತ್ರೆಗೆ ಹೊರಟರು. ಹೀಗಾಗಿ ಸದ್ಯ ಬನ್ನಿ ಪೂಜೆ ಬಳಿಕ ಜಟ್ಟಿ ಕಾಳಗ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಜಟ್ಟಿಗಳು ನಿಷ್ಠೆಯ ರಕ್ತ ಸುರಿಸದೇ ಖಾಸಗಿ ದರ್ಬಾರ್ ಅಂತ್ಯಗೊಂಡಿದೆ.ಇದನ್ನೂ ಓದಿ: ಮೈಸೂರು ದಸರಾ ಕೇಕ್ನಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ಗೌರವ