National Awards|ಈಗ ಗೋಡ್ಸೆ ಕುರಿತ ಚಿತ್ರವೂ ಪ್ರಶಸ್ತಿ ಗೆಲ್ಲಬಹುದು: ಎಂ.ಎ.ಬೇಬಿ
ನವದೆಹಲಿ: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ರಣದೀಪ್ ಹೂಡಾ ಅವರ 'ಸ್ವಾತಂತ್ರ್ಯವೀರ್ ಸಾವರ್ಕರ್' ಚಿತ್ರವು ‘ಅತ್ಯುತ್ತಮ ಚೊಚ್ಚಲ ನಿರ್ದೇಶಕ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಈ ಕುರಿತು ಮಾತನಾಡಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ‘ದೇಶದಲ್ಲಿನ ಪ್ರಸ್ತುತ ರಾಜಕೀಯ ವಾತಾವರಣದಿಂದಾಗಿ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ
ನವದೆಹಲಿ: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ರಣದೀಪ್ ಹೂಡಾ ಅವರ 'ಸ್ವಾತಂತ್ರ್ಯವೀರ್ ಸಾವರ್ಕರ್' ಚಿತ್ರವು ‘ಅತ್ಯುತ್ತಮ ಚೊಚ್ಚಲ ನಿರ್ದೇಶಕ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಈ ಕುರಿತು ಮಾತನಾಡಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ‘ದೇಶದಲ್ಲಿನ ಪ್ರಸ್ತುತ ರಾಜಕೀಯ ವಾತಾವರಣದಿಂದಾಗಿ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಕುರಿತಾದ ಚಿತ್ರವೂ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಬಹುದು’ ಎಂದು ಹೇಳಿದ್ದಾರೆ.ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಟೀಕಿಸಿದ ಬೇಬಿ, ‘ಈ ಕುರಿತು ನಾನು ಹೆಚ್ಚಿನದನ್ನು ಹೇಳುವ ಅಗತ್ಯವಿಲ್ಲ. ಇದು ಅತ್ಯಂತ ದುಃಖಕರ ಸಂಗತಿಯಾಗಿದೆ’ ಎಂದು ಹೇಳಿದ್ದಾರೆ.'ಅತ್ಯುತ್ತಮ ಚಲನಚಿತ್ರ' ಪ್ರಶಸ್ತಿಯನ್ನು ಗೆದ್ದ 'ಆರ್ಟಿಕಲ್ 370' ಚಿತ್ರದ ಕುರಿತು ಪತ್ರಕರ್ತರು ಕೇಳಿದಾಗ, ‘ನಾನು ಆ ಚಿತ್ರವನ್ನು ನೋಡಿಲ್ಲ ಮತ್ತು ಆದ್ದರಿಂದ ಅದರ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಒಂದು ವೇಳೆ ಆ ಚಿತ್ರವು ಆರ್ಟಿಕಲ್ 370ರ ರದ್ದತಿಯನ್ನು ಭಾರತೀಯ ಸಂವಿಧಾನದ ಮೂಲ ಆಶಯ ಮತ್ತು ಘನತೆಗೆ ವಿರುದ್ಧವಾದ ಕ್ರಮವೆಂದು ಚಿತ್ರಿಸಿದರೆ, ನಾನು ಆ ದೃಷ್ಟಿಕೋನವನ್ನು ಒಪ್ಪುತ್ತೇನೆ’ ಎಂದು ಹೇಳಿದ್ದಾರೆ. ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಮತ್ತು ಮಲಯಾಳ ಚಲನಚಿತ್ರ ನಿರ್ಮಾಪಕ ಜಯರಾಜ್, ‘ರಾಜಕೀಯ ನಿಲುವುಗಳು ಸಮಿತಿಯ ನಿರ್ಧಾರಗಳ ಮೇಲೆ ಪ್ರಭಾವ ಬೀರಿಲ್ಲ. ನಾವು ಚಿತ್ರವೊಂದನ್ನು ನೋಡುವಾಗ, ಅದು ಕೇವಲ ಒಂದು ಚಲನಚಿತ್ರವಾಗಿರುತ್ತದೆ. ನಮ್ಮ ಮುಂದೆ ರಾಜಕೀಯ ಇರುವುದಿಲ್ಲ. ಸ್ವತಃ ಚಲನಚಿತ್ರ ನಿರ್ಮಾಪಕನಾಗಿ, ಸಮಿತಿಯ ಹತ್ತು ಸದಸ್ಯರೊಂದಿಗೆ ಸೇರಿ ನಾವು ಕೇವಲ ಚಿತ್ರಗಳನ್ನು ವೀಕ್ಷಿಸಿದ್ದೇವೆ’ ಎಂದು ಹೇಳಿದ್ದಾರೆ.'ಸ್ವಾತಂತ್ರ್ಯವೀರ್ ಸಾವರ್ಕರ್' ಚಿತ್ರದಲ್ಲಿ ಚೊಚ್ಚಲ ನಿರ್ದೇಶಕರಾಗಿ ಹೂಡಾ ಅವರ ಕೆಲಸವು ಅತ್ಯುತ್ತಮ ಪ್ರಯತ್ನವಾಗಿತ್ತು. ಒಬ್ಬ ಹೊಸ ನಿರ್ದೇಶಕರಾಗಿ, ಅವರು ಆ ಕಾಲಘಟ್ಟವನ್ನು ಮರುಸೃಷ್ಟಿಸಿರುವ ರೀತಿ ನಿಜಕ್ಕೂ ಅದ್ಭುತವಾಗಿದೆ. ಅದರಲ್ಲೂ ವಿಶೇಷವಾಗಿ ಸೆಲ್ಯುಲಾರ್ ಜೈಲು ಮತ್ತು ಸ್ವಾತಂತ್ರ್ಯ ಹೋರಾಟದ ಸಂಪೂರ್ಣ ಅವಧಿಯನ್ನು ಮರುಸೃಷ್ಟಿಸುವಲ್ಲಿ ಅಪಾರ ಶ್ರಮ ವಹಿಸಿದೆ. 'ಆರ್ಟಿಕಲ್ 370' ಚಿತ್ರವನ್ನು ಕೂಡ ಸುಂದರವಾಗಿ ನಿರ್ಮಿಸಲಾಗಿದೆ, ಅದರಲ್ಲಿ ಯಾಮಿ ಗೌತಮ್ ಉತ್ತಮವಾಗಿ ನಟಿಸಿದ್ದರಿಂದ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ ಎಂದು ಹೇಳಿದ್ದಾರೆ. 72nd National Film Awards: ಕನ್ನಡದ ‘ಮಿಥ್ಯ’ ಸಿನಿಮಾಕ್ಕೆ ಮೂರು ಪ್ರಶಸ್ತಿ