NEET Protest: ಆಸ್ಪತ್ರೆಗೆ ಸೊನಮ್, ಹೋರಾಟ ಯಾರ ಹೆಗಲಿಗೆ?
ನವದೆಹಲಿ: ಇದು ಅಭಿಜೀತ್ ದೀಪ್ಕೆ ಅವರಿಗೆ ಪರೀಕ್ಷಾ ಕಾಲ. ಒಂದು ಕಡೆ, ಪ್ರತಿಭಟನೆಯ ಪ್ರಮುಖ ಮುಖವಾಗಿದ್ದ ಸೊನಮ್ ಅವರನ್ನು ದೆಹಲಿ ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನೊಂದೆಡೆ, ಮುಂಗಾರು ಅಧಿವೇಶನದ ಆರಂಭದ ದಿನವೇ ಸಂಸತ್ತಿನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಸಿಜೆಪಿ ನಿರ್ಧರಿಸಿದೆ. ಇದನ್ನೂ ಮುನ್ನಡೆಸಬೇಕಿದೆ.ಶನಿವಾರ ನಡೆದ ಬೆಳವಣಿಗೆಗಳು ದೀಪ್ಕೆ

ನವದೆಹಲಿ: ಇದು ಅಭಿಜೀತ್ ದೀಪ್ಕೆ ಅವರಿಗೆ ಪರೀಕ್ಷಾ ಕಾಲ. ಒಂದು ಕಡೆ, ಪ್ರತಿಭಟನೆಯ ಪ್ರಮುಖ ಮುಖವಾಗಿದ್ದ ಸೊನಮ್ ಅವರನ್ನು ದೆಹಲಿ ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನೊಂದೆಡೆ, ಮುಂಗಾರು ಅಧಿವೇಶನದ ಆರಂಭದ ದಿನವೇ ಸಂಸತ್ತಿನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಸಿಜೆಪಿ ನಿರ್ಧರಿಸಿದೆ. ಇದನ್ನೂ ಮುನ್ನಡೆಸಬೇಕಿದೆ.ಶನಿವಾರ ನಡೆದ ಬೆಳವಣಿಗೆಗಳು ದೀಪ್ಕೆ ಮತ್ತು ಪ್ರತಿಭಟನಾನಿರತ ಇತರ ವಿದ್ಯಾರ್ಥಿ ಸಂಘಟನೆಗಳು, ಅವುಗಳ ನಾಯಕರ ಸಾಮರ್ಥ್ಯವನ್ನು ಒರೆಗೆ ಹಚ್ಚಲಿವೆ. ಜುಲೈ 20– ಇವರ ಮುಂದಿರುವ ತಕ್ಷಣದ ಸವಾಲು.ಅಣ್ಣಾ ಹಜಾರೆ ಅವರು ‘ಇಂಡಿಯಾ ಅಗೆನೆಸ್ಟ್ ಕರಪ್ಷನ್’ (ಇದೇ ಸಂಘಟನೆ ಬಳಿಕ ಆಮ್ ಆದ್ಮಿ ಪಕ್ಷವಾಯಿತು) ಪ್ರತಿಭಟನೆಯ ಪ್ರಮುಖ ಮುಖವಾಗಿದ್ದರು. ಈಗ ಸೊನಮ್ ಕೂಡ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಯ ಪ್ರಮುಖ ಮುಖವಾಗಿದ್ದಾರೆ. ದೀಪ್ಕೆ ಅವರು ಮೊದಲ ಬಾರಿಗೆ ಜಂತರ್ ಮಂತರ್ನಲ್ಲಿ ನಡೆಸಿದ್ದ ಪ್ರತಿಭಟನೆಗೆ ಅಂಥ ಬೆಂಬಲವೇನೂ ವ್ಯಕ್ತವಾಗಿರಲಿಲ್ಲ. ಆದರೆ, ಸೊನಮ್ ಅವರು ಭಾಗಿಯಾಗದ ಮೇಲೆ ಚಿತ್ರಣ ಬದಲಾಗಿತ್ತು.ಸೊನಮ್ ಇಲ್ಲದ ಈ ಹೊತ್ತಿನಲ್ಲಿ ದೀಪ್ಕೆ ಅವರು ಎಲ್ಲರನ್ನೂ ಒಳಗೊಂಡು, ಪ್ರತಿಭಟನೆಯ ಕಾವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ? ಅವರ ನಾಯಕತ್ವ ಹೇಗಿರಲಿದೆ? ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಈಗ ಪೊಲೀಸರು ಹೇಳಿದ್ದಾರೆ. ಹಾಗಿದ್ದರೆ, ಇದಕ್ಕೆ ದೀಪ್ಕೆ ಅವರು ಎಂಥಾ ತಂತ್ರಗಾರಿಕೆ ಹೂಡಲಿದ್ದಾರೆ ಎನ್ನುವುದನ್ನೂ ನೋಡಬೇಕಿದೆ.