NEET UG 2026 Result | ಪಂಜಾಬ್ನ ಆರ್ಯನ್, ಹರಿಯಾಣದ ಪಾಂಶುಲ್ ದೇಶದ ಟಾಪರ್ಸ್
– ಉತ್ತರ ಪ್ರದೇಶದಿಂದ 1.7 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಹ – 19 ವಿದ್ಯಾರ್ಥಿಗಳಿಗೆ 700ಕ್ಕೂ ಹೆಚ್ಚು ಅಂಕ ನವದೆಹಲಿ: ವೈದ್ಯಕೀಯ ಶಿಕ್ಷಣದ ಕನಸು ಹೊತ್ತು ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದ NEET UG 2026 ಪರೀಕ್ಷೆಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಗುರುವಾರ (ಜು.16) ಪ್ರಕಟಿಸಿದೆ. ಪರೀಕ್ಷೆ ಬರೆದಿದ್ದ 20 ಲಕ್ಷಕ್ಕೂ ಅಧಿಕ ವಿದ್ಯ

– ಉತ್ತರ ಪ್ರದೇಶದಿಂದ 1.7 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಹ – 19 ವಿದ್ಯಾರ್ಥಿಗಳಿಗೆ 700ಕ್ಕೂ ಹೆಚ್ಚು ಅಂಕ ನವದೆಹಲಿ: ವೈದ್ಯಕೀಯ ಶಿಕ್ಷಣದ ಕನಸು ಹೊತ್ತು ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದ NEET UG 2026 ಪರೀಕ್ಷೆಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಗುರುವಾರ (ಜು.16) ಪ್ರಕಟಿಸಿದೆ. ಪರೀಕ್ಷೆ ಬರೆದಿದ್ದ 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಪೈಕಿ 11.21 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. NTA ಪ್ರಕಾರ, ಅರ್ಹತೆ ಪಡೆದ ಅಭ್ಯರ್ಥಿಗಳಲ್ಲಿ ಶೇ.58 ಕ್ಕಿಂತ ಹೆಚ್ಚು ಮಹಿಳೆಯರು, 55.1% ಹುಡುಗರು ಉತ್ತೀರ್ಣರಾಗಿದ್ದಾರೆ. NEET UG 2026 ಪರೀಕ್ಷೆಯಲ್ಲಿ ಈ ಬಾರಿ ದೇಶಾದ್ಯಂತ ಹಲವು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಒಟ್ಟು 138 ಅಭ್ಯರ್ಥಿಗಳು 720 ಅಂಕಗಳಲ್ಲಿ 690ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದು, ಅವರಲ್ಲಿ ಶೇ.93ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೊದಲ ಬಾರಿಗೆ NEET ಪರೀಕ್ಷೆ ಬರೆದವರಾಗಿದ್ದಾರೆ. ಇಬ್ಬರು ದೇಶದ ಟಾಪರ್ಸ್ ಇನ್ನು, ಟಾಪರ್ಗಳ ಪೈಕಿ ಶೇ.99ಕ್ಕೂ ಹೆಚ್ಚು ಅಭ್ಯರ್ಥಿಗಳ ವಯಸ್ಸು 17 ರಿಂದ 19 ವರ್ಷದೊಳಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಾಹಿತಿ ನೀಡಿದೆ. ದೇಶದಾದ್ಯಂತ 19 ಅಭ್ಯರ್ಥಿಗಳು 700ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಇವರಲ್ಲಿ ಪಂಜಾಬ್ನ ಆರ್ಯನ್ ಗುಪ್ತಾ ಹಾಗೂ ಹರಿಯಾಣದ ಪಾಂಶುಲ್ ಬನ್ಸಾಲ್ ತಲಾ 715 ಅಂಕಗಳನ್ನ ಗಳಿಸಿ ದೇಶದ ಜಂಟಿ ಟಾಪರ್ಗಳಾಗಿ ಹೊರಹೊಮ್ಮಿದ್ದಾರೆ. ಇದಲ್ಲದೆ, 1,492 ಅಭ್ಯರ್ಥಿಗಳು 650 ಅಥವಾ ಅದಕ್ಕಿಂತ ಹೆಚ್ಚು, 10,160 ಅಭ್ಯರ್ಥಿಗಳು 600 ಅಥವಾ ಅದಕ್ಕಿಂತ ಹೆಚ್ಚು ಮತ್ತು 90,780 ಅಭ್ಯರ್ಥಿಗಳು 500 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಸಾಂದರ್ಭಿಕ ಚಿತ್ರ ಎಲ್ಲಾ ರಾಜ್ಯಗಳಿಂದ ಅಭ್ಯರ್ಥಿಗಳು ಅರ್ಹತೆ NTA ಮಾಹಿತಿ ಪ್ರಕಾರ, ದೇಶದ ಎಲ್ಲಾ 36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಅಭ್ಯರ್ಥಿಗಳು NEET ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ. ಅದರಲ್ಲೂ ಉತ್ತರ ಪ್ರದೇಶದಿಂದ ಅತಿ ಹೆಚ್ಚು 1.7 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇನ್ನು, ಲಕ್ಷದ್ವೀಪದಿಂದ 43 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಾಜ್ಯವಾರು ಟಾಪರ್ಗಳ ಪೈಕಿ: * ಲಡಾಖ್ನ ಜಿಗ್ಮೆಟ್ ಯಾಂಗ್ಚೆನ್ ಲಾಮೋ – 530 ಅಂಕ * ಅಂಡಮಾನ್ ಮತ್ತು ನಿಕೋಬಾರ್ನ ಧ್ರುವ ತ್ರಿಪಾಠಿ – 606 ಅಂಕ * ಲಕ್ಷದ್ವೀಪದ ಫಹ್ಮಿದಾ ಅನೀಸ್ – 573 ಅಂಕ ಗಮನಾರ್ಹ ಸಂಗತಿಯೆಂದರೆ, 17 ರಾಜ್ಯಗಳ ಟಾಪರ್ಗಳು 700 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು, ಹಾಗೂ 26 ರಾಜ್ಯಗಳ ಟಾಪರ್ಗಳು 690ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ವರ್ಗವಾರು ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳ ಸಂಖ್ಯೆ ಸಾಮಾನ್ಯ ವರ್ಗ (General): 2.91 ಲಕ್ಷ ಒಬಿಸಿ-NCL: 5.12 ಲಕ್ಷ ಎಸ್ಸಿ: 1.59 ಲಕ್ಷ ಎಸ್ಸಿ: 63,716 EWS: 95,026 PwBD: 3,666 PwD: 303 13 ಭಾಷೆಗಳಲ್ಲಿ ಪರೀಕ್ಷೆ ಈ ವರ್ಷದ NEET UG ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಯಿತು. ಹಿಂದಿ, ಇಂಗ್ಲಿಷ್, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದು ಭಾಷೆಗಳಲ್ಲಿ ಪರೀಕ್ಷೆ ನಡೆಯಿತು.