OTT Release: ಈ ವಾರದ ಪ್ರಮುಖ ಸಿನಿಮಾಗಳು...
ಈ ವಾರ ಒಟಿಟಿ ವೇದಿಕೆಯಲ್ಲಿ, ಕ್ರೈಮ್ ಮಿಸ್ಟರಿ ಥ್ರಿಲ್ಲರ್ ಸಿನಿಮಾಗಳಿಂದ ಹಿಡಿದು, ಪ್ರೇಮ ಕಥೆಯವರೆಗೆ ಎಲ್ಲಾ ಜಾನರ್ನ ಚಿತ್ರಗಳು ಬಿಡುಗಡೆಯಾಗಲಿವೆ. ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸಿನಿಮಾಗಳಿವು.ಉಯಿರ್ಮಲಯಾಳಂನ ಕ್ರೈಮ್ ಮಿಸ್ಟರಿ ಥ್ರಿಲ್ಲರ್ ಚಲನಚಿತ್ರವಾಗಿದೆ. ಪ್ರಮುಖ ಪಾತ್ರದಲ್ಲಿ ರೋಶನ್ ಮ್ಯಾಥ್ಯೂ, ಬೈಜು ಸಂತೋಷ್ ಮತ್ತು ಶ್ರುತಿ ಮೆನನ್ ನಟಿ

ಈ ವಾರ ಒಟಿಟಿ ವೇದಿಕೆಯಲ್ಲಿ, ಕ್ರೈಮ್ ಮಿಸ್ಟರಿ ಥ್ರಿಲ್ಲರ್ ಸಿನಿಮಾಗಳಿಂದ ಹಿಡಿದು, ಪ್ರೇಮ ಕಥೆಯವರೆಗೆ ಎಲ್ಲಾ ಜಾನರ್ನ ಚಿತ್ರಗಳು ಬಿಡುಗಡೆಯಾಗಲಿವೆ. ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸಿನಿಮಾಗಳಿವು.ಉಯಿರ್ಮಲಯಾಳಂನ ಕ್ರೈಮ್ ಮಿಸ್ಟರಿ ಥ್ರಿಲ್ಲರ್ ಚಲನಚಿತ್ರವಾಗಿದೆ. ಪ್ರಮುಖ ಪಾತ್ರದಲ್ಲಿ ರೋಶನ್ ಮ್ಯಾಥ್ಯೂ, ಬೈಜು ಸಂತೋಷ್ ಮತ್ತು ಶ್ರುತಿ ಮೆನನ್ ನಟಿಸಿದ್ದು, ಎಂ. ಪದ್ಮಕುಮಾರ್ ನಿರ್ದೇಶಿಸಿದ್ದಾರೆ. ಈ ಸಿನಿಮಾ, ಕೇರಳದ ಕಣ್ಣೂರು ಜಿಲ್ಲೆಯ ಧರ್ಮದಡಂ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಸಬ್ ಇನ್ಸ್ಪೆಕ್ಟರ್ ಆಗಿರುವ ಅಜೀಬ್ ಒಬ್ಬ ಅಜ್ಞಾತ ಮಹಿಳೆಯ ಸಾವಿನ ರಹಸ್ಯವನ್ನು ತನಿಖೆ ಮಾಡುವುದನ್ನು ಆಧರಿಸಿದೆ.ಎಲ್ಲಿ ವೀಕ್ಷಿಸಬೇಕು: ಜಿಯೋಹಾಟ್ಸ್ಟಾರ್ ಭಾಷೆ: ಮಲಯಾಳ ದಿನಾಂಕ: ಆಗಸ್ಟ್ 4ವಧಂಧಿ ಸೀಸನ್–2ತಮಿಳು ಭಾಷೆಯ ಅಪರಾಧ ತನಿಖಾ ವೆಬ್ ಸರಣಿಯಾಗಿದೆ. ಮಧುರೈನ ಗ್ರಾಮೀಣ ಪ್ರದೇಶದ ಹೈವೇ ಸೈಟ್ ಒಂದರಲ್ಲಿ ಅಸ್ಥಿಪಂಜರ ಪತ್ತೆಯಾದಾಗ ಆರಂಭವಾಗುವ ರಹಸ್ಯ ತನಿಖೆ ನಡೆಸುವಿಕೆಯನ್ನು ಈ ಸೀಸನ್ ಒಳಗೊಂಡಿದೆ. ಪ್ರಮುಖ ಪಾತ್ರದಲ್ಲಿ ಎಂ. ಸಸಿಕುಮಾರ್, ಅಪರ್ಣಾ ದಾಸ್, ಅನಘಾ ಮರುತೋರ ಸೇರಿದಂತೆ ಇತರರು ನಟಿಸಿದ್ದಾರೆ. ಎಲ್ಲಿ ವೀಕ್ಷಿಸಬೇಕು: ಅಮೆಜಾನ್ ಪ್ರೈಮ್ ವಿಡಿಯೊ ಭಾಷೆ: ತಮಿಳು, ತೆಲುಗು, ಹಿಂದಿ ದಿನಾಂಕ: ಆಗಸ್ಟ್ 7ನೂರು ಸಾಮಿಶಶಿ ನಿರ್ದೇಶನದಲ್ಲಿ ನಿರ್ಮಾಣವಾದ ತಮಿಳು ಸಿನಿಮಾವಾಗಿದೆ. ಗ್ರಾಮೀಣ ಭಾಗದ ವಿಧವೆ ತಾಯಿಯೊಬ್ಬಳ ಬದುಕಿನ ಹೋರಾಟ ಮತ್ತು ಕುಟುಂಬದ ಭಾವನಾತ್ಮಕ ಬಂಧದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಪ್ರಮುಖ ಪಾತ್ರದಲ್ಲಿ ವಿಜಯ್ ಆಂಟೋನಿ, ಸ್ವಾಸಿಕಾ ಮತ್ತು ಅಜಯ್ ದಿಶನ್ ನಟಿಸಿದ್ದಾರೆ. ಎಲ್ಲಿ ವೀಕ್ಷಿಸಬೇಕು: ಜೀ 5ಭಾಷೆ: ತಮಿಳು ದಿನಾಂಕ: ಆಗಸ್ಟ್ 7ರಾವ್ ಬಹದ್ದೂರ್2026ರಲ್ಲಿ ಬಿಡುಗಡೆಯಾದ ಸೈಕಲಾಜಿಕಲ್ ಡಾರ್ಕ್ ಕಾಮಿಡಿ ಮತ್ತು ಮನೋವೈಜ್ಞಾನಿಕ ಸಿನಿಮಾವಾಗಿದೆ. ಸತ್ಯದೇವ್ ಕಾಂಚರಾಣ, ದೀಪಾ ಥಾಮಸ್ ಮತ್ತು ವಿಕಾಸ್ ಮುಪ್ಪಾಳ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕ್ಷೀಣಿಸುತ್ತಿರುವ ರಾಜಪ್ರಭುತ್ವ ಮತ್ತು ಶ್ರೀಮಂತ ಕುಟುಂಬದ ಕೊನೆಯ ವಾರಸುದಾರ ರಾಮಪ್ಪ ರಾವ್ ಬಹದ್ದೂರ್ ಅವರ ಸುತ್ತ ಚಿತ್ರಕಥೆ ಸಾಗುತ್ತದೆ.ಎಲ್ಲಿ ವೀಕ್ಷಿಸಬಹುದು: ನೆಟ್ಫ್ಲಿಕ್ಸ್ಭಾಷೆ: ತೆಲುಗು ಸೇರಿದಂತೆ ಇತರೆ ಭಾಷೆಇದಯಮ್ ಮುರಳಿ ತಮಿಳು ಭಾಷೆಯ ಪ್ರೇಮಕಥೆಯ ಒಳಗೊಂಡ ಸಿನಿಮಾವಾಗಿದೆ. ಆಕಾಶ್ ಬಾಸ್ಕರನ್ ನಿರ್ದೇಶಿಸಿದ್ದು, ಅಥರ್ವ ಮುರಳಿ ಮತ್ತು ಪ್ರೀತಿ ಮುಕುಂದನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕ ತನ್ನ ಮದುವೆಗೆ ಮುನ್ನ ಅಪರಿಚಿತ ವ್ಯಕ್ತಿಯೊಬ್ಬನಿಗೆ ತನ್ನ ಹಳೆಯ ಪ್ರೇಮಕಥೆಯನ್ನು ವಿವರಿಸುವುದರೊಂದಿಗೆ ಸಿನಿಮಾ ಆರಂಭವಾಗುತ್ತದೆ.ಎಲ್ಲಿ ವೀಕ್ಷಿಸಬೇಕು: ನೆಟ್ಫ್ಲಿಕ್ಸ್ಭಾಷೆ: ತಮಿಳು ದಿನಾಂಕ: ಆಗಸ್ಟ್ 7