OTT RELEASE: ಈ ವಾರ ಬಿಡುಗಡೆಯಾಗಲಿರುವ ಪ್ರಮುಖ ಸಿನಿಮಾಗಳಿವು...
ತಿಂಗಳ ಕೊನೆಯಲ್ಲಿ ಸಿನಿ ಪ್ರಿಯರಿಗೆ ಸಿಹಿ ಉಣ ಬಡಿಸಲು ಹಲವು ವಿಭಿನ್ನ ಸಿನಿಮಾಗಳು ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿವೆ. ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯ ಅಪರಾಧ ಥ್ರಿಲ್ಲರ್ ಸಿನಿಮಾದಿಂದ ಹಿಡಿದು ಸೈಕಲಾಜಿಕಲ್ ಥ್ರಿಲ್ಲರ್ವರೆಗೆ ಎಲ್ಲಾ ಜಾನರ್ಗಳ ಸಿನಿಮಾಗಳು ಬಿಡುಗಡೆಯಾಗಲಿದೆ. ಹಾಗಾದರೆ ಯಾವ ಸಿನಿಮಾ ಯಾವ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ ಎಂಬ

ತಿಂಗಳ ಕೊನೆಯಲ್ಲಿ ಸಿನಿ ಪ್ರಿಯರಿಗೆ ಸಿಹಿ ಉಣ ಬಡಿಸಲು ಹಲವು ವಿಭಿನ್ನ ಸಿನಿಮಾಗಳು ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿವೆ. ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯ ಅಪರಾಧ ಥ್ರಿಲ್ಲರ್ ಸಿನಿಮಾದಿಂದ ಹಿಡಿದು ಸೈಕಲಾಜಿಕಲ್ ಥ್ರಿಲ್ಲರ್ವರೆಗೆ ಎಲ್ಲಾ ಜಾನರ್ಗಳ ಸಿನಿಮಾಗಳು ಬಿಡುಗಡೆಯಾಗಲಿದೆ. ಹಾಗಾದರೆ ಯಾವ ಸಿನಿಮಾ ಯಾವ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.ಚಿನ್ನ ಚಿನ್ನ ಆಸೈ2026ರಲ್ಲಿ ಬಿಡುಗಡೆಯಾದ ಮಲಯಾಳಂ ಚಲನಚಿತ್ರವಾಗಿದ್ದು, ವರ್ಷಾ ವಾಸುದೇವ್ ನಿರ್ದೇಶಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಇಂದ್ರನ್ಸ್, ಮಧುಬಾಲಾ, ಮತ್ತು ಅಪರ್ಣಾ ಬಲಮುರಳಿ ನಟಿಸಿದ್ದಾರೆ. ವರಾಣಸಿಯಲ್ಲಿ ಭೇಟಿಯಾಗುವ ಇಬ್ಬರು ಭಿನ್ನ ಹಿನ್ನೆಲೆಯ ಏಕಾಂಗಿ ವ್ಯಕ್ತಿಗಳ ಭಾವನಾತ್ಮಕ ಕಥಾ ಹಂದರವನ್ನು ಹೊಂದಿದೆ. ಎಲ್ಲಿ ವೀಕ್ಷಿಸಬೇಕು: ಜಿಯೋ ಹಾಟ್ಸ್ಟಾರ್ಭಾಷೆ: ಮಲಯಾಳಂ ಮತ್ತು ಇತರೆ ದಿನಾಂಕ: ಜುಲೈ 28ಆಜಾದಿ 501ಇದು ತೆಲುಗಿನ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಯಾಗಿದೆ. ಕುಖ್ಯಾತ 'ಫ್ರೀಡಮ್ 251' ಮೊಬೈಲ್ ಹಗರಣದ ನೈಜ ಘಟನೆಗಳ ಆಧಾರದ ಮೇಲೆ ನಿರ್ಮಾಣ ಮಾಡಲಾಗಿದೆ. ಶಿವ ತೇಜ ನಿರ್ದೇಶನದ ಈ ವೆಬ್ ಸರಣಿಯಲ್ಲಿ ತೇಜ ಕಲ್ವಕೋಟ, ಹರ್ಷ ವರ್ಧನ್, ಎಸ್.ಎಸ್. ಶಶಾಂಕ್ ಮತ್ತು ಗೀತಾ ಭಾಸ್ಕರ್ ನಟಿಸಿದ್ದಾರೆ. ಎಲ್ಲಿ ವೀಕ್ಷಿಸಬೇಕು: ಆಹಾ ವಿಡಿಯೊಭಾಷೆ: ತೆಲುಗು ದಿನಾಂಕ: ಜುಲೈ 29ಹಾರ್ಟ್ ಬೀಟ್ ಸೀಸನ್–3ಇದು ಆರ್.ಕೆ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯುವ ವೈದ್ಯಕೀಯ ಕಥೆಯನ್ನು ಆಧರಿಸಿದ ವೆಬ್ ಸರಣಿಯಾಗಿದೆ. ವೈದ್ಯರ ವೈಯಕ್ತಿಕ ಹಾಗೂ ವೃತ್ತಿಪರ ಜೀವನದ ಭಾವನಾತ್ಮಕ ತಿರುವುಗಳನ್ನು ಈ ಸರಣಿ ಒಳಗೊಂಡಿದೆ. ಪ್ರಮುಖ ಪಾತ್ರದಲ್ಲಿ ಅನುಮೋಲ್, ಕಾರ್ತಿಕ್ ಕುಮಾರ್, ಚಾರುಕೇಶ್, ಸಬರೀಶ್ ಮತ್ತು ಯೋಗಲಕ್ಷ್ಮೀ ನಟಿಸಿದ್ದಾರೆ.ಎಲ್ಲಿ ವೀಕ್ಷಿಸಬೇಕು: ಜಿಯೋ ಹಾಟ್ಸ್ಟಾರ್ ಭಾಷೆ: ತಮಿಳು ದಿನಾಂಕ: ಜುಲೈ 30ಸೆಕೆಂಡ್ ಮ್ಯಾರೇಜ್ View this post on Instagram ಈ ವೆಬ್ ಸರಣಿಯು ಪ್ರೀತಿಯಲ್ಲಿ ನೊಂದ ಬಳಿಕ ಜೀವನದಲ್ಲಿ ಹೊಸ ಆರಂಭವನ್ನು ಹುಡುಕುವ ಮತ್ತು ಎರಡನೇ ಮದುವೆಯ ಮೂಲಕ ಪರಸ್ಪರ ನಂಬಿಕೆ ಹಾಗೂ ಬಾಂಧವ್ಯವನ್ನು ಬೆಳೆಸಿಕೊಳ್ಳುವ ಜೋಡಿಯ ಭಾವನಾತ್ಮಕ ಕಥೆಯಾಗಿದೆ. ಎಲ್ಲಿ ವೀಕ್ಷಿಸಬೇಕು: ಈಟಿವಿ ವಿನ್ಭಾಷೆ: ತೆಲುಗು ದಿನಾಂಕ: ಜುಲೈ 30ಗಟ್ಟ ಕುಸ್ತಿ 2ವಿಷ್ಣು ವಿಶಾಲ್ ಹಾಗೂ ಐಶ್ವರ್ಯ ಲಕ್ಷ್ಮೀ ನಟಿಸಿರುವ ಗಟ್ಟ ಕುಸ್ತಿ 2 ಕ್ರೀಡಾ ಹಾಸ್ಯ ಸಿನಿಮಾವಾಗಿದೆ. ಚೆಲ್ಲಾ ಅಯ್ಯಾವು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಎಲ್ಲಿ ವೀಕ್ಷಿಸಬೇಕು: ನೆಟ್ಫ್ಲಿಕ್ಸ್ ಭಾಷೆ: ತಮಿಳು ದಿನಾಂಕ: ಜುಲೈ 31ಲವ್ ಓ ಲವ್ ಮಹೇಶ್ ರಾಜೇಂದ್ರನ್ ನಿರ್ದೇಶನದಲ್ಲಿ ಮೂಡಿಬಂದಿರುವ ತಮಿಳು ರೋಮ್ಯಾಂಟಿಕ್ ಕಾಮಿಡಿ ಚಲನಚಿತ್ರವಾಗಿದೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ. ಪ್ರಮುಖ ಪಾತ್ರದಲ್ಲಿ ಪವಿಶ್ ನಾರಾಯಣ್, ನಾಗದುರ್ಗಾ ಮತ್ತು ಸೆಲ್ವಂ ರಾಘವನ್ ನಟಿಸಿದ್ದಾರೆ.ಎಲ್ಲಿ ವೀಕ್ಷಿಸಬೇಕು: ಪ್ರೈಮ್ ವಿಡಿಯೊಭಾಷೆ: ತಮಿಳು ದಿನಾಂಕ: ಜುಲೈ 31ಬಾಲನ್ ದಿ ಬಾಯ್ಇದು ಸೈಕಲಾಜಿಕಲ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಚಿದಂಬರಂ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರಕಥೆಯು ಒಬ್ಬ ತಾಯಿ ಮತ್ತು ಅವಳ ಮಗನ (ಬಾಲನ್) ಸುತ್ತ ಸುತ್ತುತ್ತದೆ. ಎಲ್ಲಿ ವೀಕ್ಷಿಸಬೇಕು: ಜೀ 5ಭಾಷೆ: ಮಲಯಾಳಂ ದಿನಾಂಕ: ಜುಲೈ 31