Pakistan Vs West Indies: ಪಾಕ್ಗೆ ಮಣಿದ ವಿಂಡೀಸ್
ಪೋರ್ಟ್ ಆಫ್ ಸ್ಪೇನ್: ಪಾಕಿಸ್ತಾನ ತಂಡವು ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ನ ನಾಲ್ಕನೇ ದಿನವಾದ ಬುಧವಾರ ವೆಸ್ಟ್ ಇಂಡೀಸ್ ವಿರುದ್ಧ ಎಂಟು ವಿಕೆಟ್ಗಳ ಜಯ ಸಾಧಿಸಿತು.ಮೊದಲ ಟೆಸ್ಟ್ನಲ್ಲಿ 90 ರನ್ಗಳಿಂದ ಸೋತಿದ್ದ ಪಾಕ್ ತಂಡವು ಎರಡನೇ ಟೆಸ್ಟ್ನಲ್ಲಿ ನಿರಾಯಾಸದ ಗೆಲುವಿನೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ 1–1ರ

ಪೋರ್ಟ್ ಆಫ್ ಸ್ಪೇನ್: ಪಾಕಿಸ್ತಾನ ತಂಡವು ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ನ ನಾಲ್ಕನೇ ದಿನವಾದ ಬುಧವಾರ ವೆಸ್ಟ್ ಇಂಡೀಸ್ ವಿರುದ್ಧ ಎಂಟು ವಿಕೆಟ್ಗಳ ಜಯ ಸಾಧಿಸಿತು.ಮೊದಲ ಟೆಸ್ಟ್ನಲ್ಲಿ 90 ರನ್ಗಳಿಂದ ಸೋತಿದ್ದ ಪಾಕ್ ತಂಡವು ಎರಡನೇ ಟೆಸ್ಟ್ನಲ್ಲಿ ನಿರಾಯಾಸದ ಗೆಲುವಿನೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ 1–1ರಿಂದ ಸಮಬಲ ಸಾಧಿಸಿತು.ಮೊದಲ ಇನಿಂಗ್ಸ್ನಲ್ಲಿ 43 ರನ್ಗಳ ಹಿನ್ನಡೆ ಅನುಭವಿಸಿದ್ದ ಆತಿಥೇಯ ತಂಡವು ಎರಡನೇ ಇನಿಂಗ್ಸ್ನಲ್ಲಿ 117 ರನ್ಗಳಿಗೆ ಕುಸಿಯಿತು. ಸಾಜಿದ್ ಖಾನ್ (32ಕ್ಕೆ 4) ಮತ್ತು ಅಲಿ ಉಸ್ಮಾನ್ (39ಕ್ಕೆ 4) ವಿಂಡೀಸ್ ತಂಡದ ಕುಸಿತಕ್ಕೆ ಕಾರಣರಾದರು. ಗೆಲುವಿಗೆ 75 ರನ್ಗಳ ಗುರಿ ಪಡೆದ ಪಾಕ್ ತಂಡವು 23.3 ಓವರ್ಗಳಲ್ಲಿ 2 ವಿಕೆಟ್ಗೆ 77 ರನ್ ಗಳಿಸಿ ಸಂಭ್ರಮಿಸಿತು.ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್: 105.4 ಓವರ್ಗಳಲ್ಲಿ 344. ಪಾಕಿಸ್ತಾನ: 115 ಓವರ್ಗಳಲ್ಲಿ 387. ಎರಡನೇ ಇನಿಂಗ್ಸ್: ವೆಸ್ಟ್ ಇಂಡೀಸ್: 46.1 ಓವರ್ಗಳಲ್ಲಿ 117. ಪಾಕಿಸ್ತಾನ: 23.3 ಓವರ್ಗಳಲ್ಲಿ 2 ವಿಕೆಟ್ಗೆ 77.