PUBLiC TV Impact| ಬಳ್ಳಾರಿ ಎಪಿಎಂಸಿ ಭ್ರಷ್ಟಾಚಾರ – ತನಿಖಾ ವರದಿ ಸಲ್ಲಿಕೆ, 7.50 ಕೋಟಿ ಸರ್ಕಾರಕ್ಕೆ ನಷ್ಟ
ಬಳ್ಳಾರಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (APMC) ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರದ (Corruption) ಕುರಿತು ಪಬ್ಲಿಕ್ ಟಿವಿ (PUBLiC TV) ವರದಿಯನ್ನು ಪ್ರಸಾರ ಮಾಡಿದ ಬೆನ್ನಲ್ಲೇ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ತನಿಖೆಗೆ ಆದೇಶಿಸಿದ್ದರು. ಉಪ ವಿಭಾಗಾಧಿಕಾರಿ ರಾಜೇಶ್ ನೇತೃತ್ವದ ತನಿಖಾ ತಂಡವು ಇದೀಗ ಜಿಲ್ಲಾಧಿಕಾರಿಗಳಿಗೆ ತನಿಖಾ ವರದಿ ಸಲ್ಲಿಕ

ಬಳ್ಳಾರಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (APMC) ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರದ (Corruption) ಕುರಿತು ಪಬ್ಲಿಕ್ ಟಿವಿ (PUBLiC TV) ವರದಿಯನ್ನು ಪ್ರಸಾರ ಮಾಡಿದ ಬೆನ್ನಲ್ಲೇ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ತನಿಖೆಗೆ ಆದೇಶಿಸಿದ್ದರು. ಉಪ ವಿಭಾಗಾಧಿಕಾರಿ ರಾಜೇಶ್ ನೇತೃತ್ವದ ತನಿಖಾ ತಂಡವು ಇದೀಗ ಜಿಲ್ಲಾಧಿಕಾರಿಗಳಿಗೆ ತನಿಖಾ ವರದಿ ಸಲ್ಲಿಕೆ ಮಾಡಿದ್ದು, ಕೋಟ್ಯಂತರ ರೂಪಾಯಿ ಅವ್ಯವಹಾರ ಮತ್ತು ಅಕ್ರಮಗಳ ಜಾಲ ಬಟಾಬಯಲಾಗಿದೆ. ತನಿಖಾ ವರದಿಯಲ್ಲಿ ಏನಿದೆ? ಕೃಷಿ ಉತ್ಪನ್ನಗಳ ಮಾರಾಟಕ್ಕೆ ನೀಡಲಾಗಿದ್ದ ಮಳಿಗೆಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತಿದೆ. ಟೈಲರಿಂಗ್, ಜೀನ್ಸ್ ಬಟ್ಟೆ ತಯಾರಿಕೆ, ಬಿಸ್ಕೇಟ್ ಹಾಗೂ ಕಿರಾಣಿ ಅಂಗಡಿ, ಕೂಲ್ ಡ್ರಿಂಕ್ಸ್ ಗೋಡೌನ್ ಮತ್ತು ಆಟೋಮೊಬೈಲ್ ಬಿಡಿಭಾಗಗಳ ಮಾರಾಟದಂತಹ ಕೃಷಿಯೇತರ ಚಟುವಟಿಕೆಗಳಿಗೆ ನಿವೇಶನಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಚಿಲ್ಲರೆ ಇಲ್ಲವೆಂದು ಸಚಿವರನ್ನು ಬಸ್ಸಿನಿಂದ ಕೆಳಗಿಳಿಸಿದ್ದ ನಿರ್ವಾಹಕನ ಅಮಾನತು ವಾಪಸ್ ಎಪಿಎಂಸಿಯಿಂದ ಮೂಲವಾಗಿ ಮಳಿಗೆ/ನಿವೇಶನ ಪಡೆದ ವ್ಯಕ್ತಿಗಳು ಅವುಗಳನ್ನು ಸ್ವಂತಕ್ಕೆ ಬಳಸದೆ, ಬೇರೆಯವರಿಗೆ ಅಕ್ರಮವಾಗಿ ಲೀಸ್ ಅಥವಾ ಬಾಡಿಗೆಗೆ ನೀಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಹಲವು ವರ್ಷಗಳ ಹಿಂದೆ ನಿವೇಶನ ಹಂಚಿಕೆಯಾಗಿದ್ದರೂ ಯಾವುದೇ ಉದ್ದೇಶಕ್ಕೂ ಬಳಸದೆ ಖಾಲಿ ಬಿಡಲಾಗಿದೆ. ಎಪಿಎಂಸಿಗೆ ಸೇರಿದ 15,000 ಚದರ ಅಡಿಯ ಬೆಲೆಬಾಳುವ ಪೆಟ್ರೋಲ್ ಬಂಕ್ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ. ಸಾವಿರಾರು ರೂಪಾಯಿ ಬೆಲೆಬಾಳುವ ಜಾಗವನ್ನು ಚದರಡಿಗೆ ಕೇವಲ 800 ರೂ.ನಂತೆ ಹಂಚಿಕೆ ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿ ದರದಂತೆ 5,000 ರೂ. ಲೆಕ್ಕ ಹಾಕಿದರೂ, ಈ ಒಂದೇ ಹಂಚಿಕೆಯಿಂದ ಸರ್ಕಾರಕ್ಕೆ ಬರೋಬ್ಬರಿ 7.50 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೊಸ ಟೆಂಡರ್ಗೆ ತಕ್ಷಣವೇ ತಡೆ: ಅಕ್ರಮಗಳ ಸರಣಿ ಬಯಲಾದ ಬೆನ್ನಲ್ಲೇ, ತನಿಖೆ ನಡೆಯುತ್ತಿರುವ ಹಂತದಲ್ಲೇ ಎಪಿಎಂಸಿ ಕಾರ್ಯದರ್ಶಿ ಹೊರಡಿಸಿದ್ದ ಹೊಸ ಟೆಂಡರ್ ಪ್ರಕಟಣೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.