PUBLIC TV Vidhyamandira | ಮೊದಲು ವಿದ್ಯಾರ್ಹತೆ, ನಂತರ ಟ್ಯಾಲೆಂಟ್ ಕೌಂಟ್ ಆಗುತ್ತೆ: ಪ್ರಿಯಾಂಕ ಉಪೇಂದ್ರ
ಬೆಂಗಳೂರು: ವಿದ್ಯಾರ್ಹತೆ ಮೊದಲು ಮುಖ್ಯವಾಗುತ್ತದೆ. ಬಳಿಕ ನಿಮ್ಮ ಟ್ಯಾಲೆಂಟ್ ಕೌಂಟ್ ಆಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಕೆರಿಯರ್ ಮೇಲೆ ಗಮನ ಕೊಡಬೇಕು ಎಂದು ನಟಿ ಪ್ರಿಯಾಂಕ ಉಪೇಂದ್ರ (Priyanka Upendra) ಸಲಹೆ ನೀಡಿದರು. ಪಬ್ಲಿಕ್ ಟಿವಿ (Public TV) ಪ್ರಸ್ತುತಿಯ ವಿದ್ಯಾಮಂದಿರ (Vidhya Mandira) ‘ಪಿಜಿ ಶೈಕ್ಷಣಿಕ ಮತ್ತು ಉದ್ಯೋಗ ಮೇಳ’ದಲ್ಲಿ ಮಾತನ

ಬೆಂಗಳೂರು: ವಿದ್ಯಾರ್ಹತೆ ಮೊದಲು ಮುಖ್ಯವಾಗುತ್ತದೆ. ಬಳಿಕ ನಿಮ್ಮ ಟ್ಯಾಲೆಂಟ್ ಕೌಂಟ್ ಆಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಕೆರಿಯರ್ ಮೇಲೆ ಗಮನ ಕೊಡಬೇಕು ಎಂದು ನಟಿ ಪ್ರಿಯಾಂಕ ಉಪೇಂದ್ರ (Priyanka Upendra) ಸಲಹೆ ನೀಡಿದರು. ಪಬ್ಲಿಕ್ ಟಿವಿ (Public TV) ಪ್ರಸ್ತುತಿಯ ವಿದ್ಯಾಮಂದಿರ (Vidhya Mandira) ‘ಪಿಜಿ ಶೈಕ್ಷಣಿಕ ಮತ್ತು ಉದ್ಯೋಗ ಮೇಳ’ದಲ್ಲಿ ಮಾತನಾಡಿದ ಅವರು, ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ಒಳ್ಳೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ನಾನು ಅಮೆರಿಕ ಹಾಗೂ ಸಿಂಗಾಪುರದಲ್ಲಿ ಓದಿದ್ದೇನೆ. ನಾನು ಓದುವ ಸಮಯದಲ್ಲಿ ಈ ರೀತಿಯ ಅವಕಾಶಗಳು ಇರಲಿಲ್ಲ. ಈಗ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು. ರಂಗನಾಥ್ ಸರ್ ನಮಗೆ ತುಂಬಾ ಸ್ಫೂರ್ತಿ. ಇದು ಒಳ್ಳೆಯ ಕಾರ್ಯಕ್ರಮ. ಜೀವನದಲ್ಲಿ ಕಾಲೇಜು ದಿನಗಳು ಬೆಸ್ಟ್. ಈಗ ಎಐ ಬಂದಿದೆ. ಸಾಕಷ್ಟು ಹೊಸ ಅವಕಾಶಗಳು ಸಿಗುತ್ತಿವೆ. ವಿದ್ಯಾರ್ಥಿಗಳು ತಮ್ಮ ಮೆಂಟಲ್ ಹೆಲ್ತ್ ಅನ್ನು ಕೂಡ ಸರಿಯಾಗಿ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಉದ್ಘಾಟನಾ ಭಾಷಣದಲ್ಲಿ ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ ಶ್ಯಾಮರಾಜು ಮಾತನಾಡಿ, ನಿರುದ್ಯೋಗದ ಸಮಸ್ಯೆ ಬಹಳ ಹಿಂದಿನಿಂದಲೂ ಇದೆ. 50 ವರ್ಷಗಳ ಹಿಂದೆಯೂ ಈ ಸಮಸ್ಯೆ ಇತ್ತು. ಹೀಗಾಗಿ ಇಂತಹ ಕಾರ್ಯಕ್ರಮಗಳು ಯುವಕರಿಗೆ ಉತ್ತಮ ವೇದಿಕೆಯಾಗುತ್ತವೆ ಎಂದರು. ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ಉದ್ಯೋಗ ಮೇಳದಲ್ಲಿ ಕೆಲಸ ಸಿಕ್ಕವರಿಗೆ ಆಫರ್ ಲೆಟರ್ ವಿತರಣೆ ಬೇರೆ ಬೇರೆ ಕ್ಷೇತ್ರಗಳಲ್ಲಿರುವ ಅವಕಾಶಗಳ ಬಗ್ಗೆ ಇಲ್ಲಿ ಮಾಹಿತಿ ಸಿಗಲಿದೆ. ಎಐ ಕೌಶಲ್ಯವೂ ಹೆಚ್ಚಾಗಿದೆ. ಇಂದು 20 ಜನ ಮಾಡುವ ಕೆಲಸವನ್ನ ಒಂದು ಎಐ ಮಾಡುತ್ತಿದೆ. ಹೀಗಾಗಿ ಎಐ ಮೂಲಕ ಉದ್ಯೋಗಗಳನ್ನ ಹೇಗೆ ಪಡೆದುಕೊಳ್ಳಬೇಕು ಎಂಬುದನ್ನ ಕಲಿಯಬೇಕಿದೆ ಎಂದು ಹೇಳಿದರು. ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಚೇರ್ಮನ್ ಡಿಕೆ ಮೋಹನ್ ಮಾತನಾಡಿ, ಉತ್ತಮ ಸ್ಥಾನಕ್ಕೆ ಹೋಗಬೇಕು ಎಂದರೆ ಪಿಜಿ ಶಿಕ್ಷಣವೂ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಪಿಜಿ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪಿಜಿ ಶೈಕ್ಷಣಿಕ ಮೇಳ ನಡೆಸಲಾಗುತ್ತಿದೆ. ಯುಜಿ ಪೂರ್ಣಗೊಳಿಸಿದವರಲ್ಲಿ ಕೇವಲ ಶೇ.12 ರಷ್ಟು ವಿದ್ಯಾರ್ಥಿಗಳು ಮಾತ್ರ ಪಿಜಿ ಮಾಡುತ್ತಿದ್ದಾರೆ. ಪಿಹೆಚ್ಡಿ ವಿಚಾರದಲ್ಲೂ ನಾವು ಬಹಳ ಕೆಳಮಟ್ಟದಲ್ಲಿದ್ದೇವೆ. ಪಿಜಿ ಮತ್ತು ಪಿಹೆಚ್ಡಿ ಯಾಕೆ ಮುಖ್ಯ ಎಂಬುದನ್ನು ಮಕ್ಕಳಿಗೆ ತಿಳಿಸಬೇಕಿದೆ ಎಂದು ಹೇಳಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಿಜಿ ಮಾಡಿದವರಿಗೆ ಉತ್ತಮ ಹಾಗೂ ಉನ್ನತ ಮಟ್ಟದ ಅವಕಾಶಗಳು ಸಿಗಲಿವೆ. ಇಂತಹ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸಿರುವ ಪಬ್ಲಿಕ್ ಟಿವಿಗೆ ಅಭಿನಂದನೆಗಳು ಎಂದು ಡಿಕೆ ಮೋಹನ್ ಹೇಳಿದರು. ಇದನ್ನೂ ಓದಿ: ಕೌಶಲಗಳನ್ನು ಪಕ್ವ ಮಾಡಿಕೊಳ್ಳಲು, ಬದುಕು ಕಟ್ಟಿಕೊಳ್ಳಲು ಉನ್ನತ ಶಿಕ್ಷಣ ಬೇಕು: ಹೆಚ್.ಆರ್.ರಂಗನಾಥ್