Sandalwood: ಅಕ್ಟೋಬರ್ 2ಕ್ಕೆ ಬೇಲ್ ರಿಲೀಸ್
ಪವನ್ ಒಡೆಯರ್ ನಿರ್ದೇಶಿಸಿರುವ, ಶಿವರಾಜ್ಕುಮಾರ್ ಮುಖ್ಯಭೂಮಿಕೆಯಲ್ಲಿರುವ ‘ಬೇಲ್’ ಸಿನಿಮಾ ಅ.2ರಂದು ಬಿಡುಗಡೆಯಾಗಲಿದೆ.ಶಿವರಾಜ್ಕುಮಾರ್ ಜನ್ಮದಿನದಂದು (ಜುಲೈ 12) ಚಿತ್ರತಂಡವು ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ರಿಲೀಸ್ ದಿನಾಂಕವನ್ನು ಘೋಷಿಸಿದೆ. ಕೆವಿಎನ್ ನಿರ್ಮಾಣ ಸಂಸ್ಥೆಯು ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಖಡಕ್ ಪೊಲೀಸ್ ಅಧ

ಪವನ್ ಒಡೆಯರ್ ನಿರ್ದೇಶಿಸಿರುವ, ಶಿವರಾಜ್ಕುಮಾರ್ ಮುಖ್ಯಭೂಮಿಕೆಯಲ್ಲಿರುವ ‘ಬೇಲ್’ ಸಿನಿಮಾ ಅ.2ರಂದು ಬಿಡುಗಡೆಯಾಗಲಿದೆ.ಶಿವರಾಜ್ಕುಮಾರ್ ಜನ್ಮದಿನದಂದು (ಜುಲೈ 12) ಚಿತ್ರತಂಡವು ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ರಿಲೀಸ್ ದಿನಾಂಕವನ್ನು ಘೋಷಿಸಿದೆ. ಕೆವಿಎನ್ ನಿರ್ಮಾಣ ಸಂಸ್ಥೆಯು ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಖಡಕ್ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ, ಸಾಯಿಕುಮಾರ್ ಮತ್ತು ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿದ್ದಾರೆ.‘ಗೂಗ್ಲಿ’, ‘ರಣವಿಕ್ರಮ’, ‘ನಟಸಾರ್ವಭೌಮ’, ‘ರೇಮೋ’ ಸೇರಿದಂತೆ ಹಲವು ಹಿಟ್ಗಳನ್ನು ಕೊಟ್ಟಿರುವ ಪವನ್ ಮೊದಲ ಬಾರಿಗೆ ಶಿವರಾಜ್ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅ.2ರಂದು ಗಣೇಶ್ ನಟನೆಯ ‘ಪಿನಾಕ’ ಸಿನಿಮಾವೂ ತೆರೆಕಾಣುತ್ತಿದ್ದು, ಅಂದೇ ‘ಬೇಲ್’ ಕೂಡಾ ರಿಲೀಸ್ ಆಗುತ್ತಿದೆ. vಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260714-51-1156943378