SSLC – ದ್ವಿತೀಯ ಪಿಯುಸಿ ಪರೀಕ್ಷೆ – 1, 2 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ – ಆಕ್ಷೇಪಣೆಗೆ 15 ದಿನ ಅವಕಾಶ
ಬೆಂಗಳೂರು: ಮುಂಬರುವ ಎಸ್ಎಸ್ಎಲ್ಸಿ (SSLC) ಮತ್ತು ದ್ವೀತಿಯ ಪಿಯುಸಿ ಪಬ್ಲಿಕ್ ಪರೀಕ್ಷೆ-1 (2nd PUC Exam) ಮತ್ತು ಪರೀಕ್ಷೆ 2ರ ತಾತ್ಕಾಲಿಕ ವೇಳಾಪಟ್ಟಿಯನ್ನ ಕರ್ನಾಟಕ ಪರೀಕ್ಷಾ ಮಂಡಳಿ ಬಿಡುಗಡೆಗೊಳಿಸಿದೆ. ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯನ್ನ ಪ್ರಕಟ ಮಾಡಿದ್ದು, ಅಕ್ಟೋಬರ್ 22 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಎಸ್ಎಸ್ಎಲ್ಸಿ ಪರೀಕ್ಷೆ-1

ಬೆಂಗಳೂರು: ಮುಂಬರುವ ಎಸ್ಎಸ್ಎಲ್ಸಿ (SSLC) ಮತ್ತು ದ್ವೀತಿಯ ಪಿಯುಸಿ ಪಬ್ಲಿಕ್ ಪರೀಕ್ಷೆ-1 (2nd PUC Exam) ಮತ್ತು ಪರೀಕ್ಷೆ 2ರ ತಾತ್ಕಾಲಿಕ ವೇಳಾಪಟ್ಟಿಯನ್ನ ಕರ್ನಾಟಕ ಪರೀಕ್ಷಾ ಮಂಡಳಿ ಬಿಡುಗಡೆಗೊಳಿಸಿದೆ. ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯನ್ನ ಪ್ರಕಟ ಮಾಡಿದ್ದು, ಅಕ್ಟೋಬರ್ 22 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಎಸ್ಎಸ್ಎಲ್ಸಿ ಪರೀಕ್ಷೆ-1, 2 ಪರೀಕ್ಷೆಗಳನ್ನ 2027 ಮಾರ್ಚ್ 22 ರಿಂದ ಏಪ್ರಿಲ್ 5ರ ವರೆಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅದೇ ರೀತಿ ದ್ವಿತೀಯ ಪಿಯುಸಿ ಪರೀಕ್ಷೆ – 1 ಮತ್ತು ಪರೀಕ್ಷೆ – 2 ಅನ್ನು 2027 ಫೆಬ್ರವರಿ 27 ರಿಂದ ಮೇ 15 ರವರೆಗೆ ನಡೆಸಲು ನಿರ್ಧಸಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆ 1 – 2027 ಮಾರ್ಚ್ 22 ರಿಂದ ಏಪ್ರಿಲ್ 5ರ ವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ 2 -2027 ಮೇ 24 ರಿಂದ ಮೇ 31ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ 1 – 2027 ಫೆಬ್ರವರಿ 27 ರಿಂದ ಮಾರ್ಚ್ 17ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ 2 – 2027 ಮೇ 3 ರಿಂದ ಮೇ 15 ರವರೆಗೆ SSLC ಪರೀಕ್ಷೆ -1 ವೇಳಾಪಟ್ಟಿ * ಮಾರ್ಚ್ 22 ಕ್ಕೆ ಪ್ರಥಮ ಭಾಷೆ * ಮಾರ್ಚ್ 25 ಕ್ಕೆ ವಿಜ್ಞಾನ, ರಾಜ್ಯಶಾಸ್ತ್ರ * ಮಾರ್ಚ್ 27 ಕ್ಕೆ ದ್ವಿತೀಯ ಭಾಷೆ * ಮಾರ್ಚ್ 30 ಕ್ಕೆ ಗಣಿತ, ಸಮಾಜಶಾಸ್ತ್ರ * ಏಪ್ರಿಲ್ 2 ಕ್ಕೆ ತೃತೀಯ ಭಾಷೆ * ಏಪ್ರಿಲ್ 3 ಕ್ಕೆ ಅರ್ಥಶಾಸ್ತ್ರ, * ಏಪ್ರಿಲ್ 5 ಕ್ಕೆ ಸಮಾಜವಿಜ್ಞಾನ ಎಸ್ಎಸ್ಎಲ್ಸಿ ಪರೀಕ್ಷೆ-2 ತಾತ್ಕಾಲಿಕ ವೇಳಾಪಟ್ಟಿ * ಮೇ 24- ಪ್ರಥಮ ಭಾಷೆ * ಮೇ 25- ವಿಜ್ಞಾನ * ಮೇ 26- ದ್ವೀತಿಯ ಭಾಷೆ * ಮೇ 27-ಗಣಿತ * ಮೇ 28- ತೃತೀಯ ಭಾಷೆ * ಮೇ 29- ಸಮಾಜ ವಿಜ್ಞಾನ 2nd PUC ಪರೀಕ್ಷೆ 1 ವೇಳಾಪಟ್ಟಿ ಫೆ 27 – ಕನ್ನಡ, ಅರೇಬಿಕ್ ಮಾರ್ಚ್ 1- ಇಂಗ್ಲಿಷ್ ಮಾರ್ಚ್ 2- ತಮಿಳು,ತೆಲುಗು, ಮಲಯಾಳಂ, ಮರಾಠಿ ಉರ್ದು, ಸಂಸ್ಕೃತ, ಫ್ರೆಂಚ್ ಮಾರ್ಚ್ 3- ಭೂಗೋಳ ಶಾಸ್ತ್ರ, ಮನಃಶಾಸ್ತ್ರ ಮಾರ್ಚ್ 4- ಸಮಾಜಶಾಸ್ತ್ರ, ಭೌತಶಾಸ್ತ್ರ ಮಾರ್ಚ್ 5- ಲೆಕ್ಕಶಾಸ್ತ್ರ ಮಾರ್ಚ್ 8- ರಸಾಯನಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ ಮಾರ್ಚ್ 9- ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ ಮಾರ್ಚ್ 11- ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್, ರಿಟೇಲ್, ಆಟೋಮೊಬೈಲ್ ಬಿಸಿನೆಸ್ ಅಂಡ್ ವೆಲ್ ನೆಸ್, ಮಾಹಿತಿ ತಂತ್ರಜ್ಞಾನ. ಮಾರ್ಚ್ 12- ವ್ಯವಹಾರ ಅಧ್ಯಯನ, ಗಣಿತ ಮಾರ್ಚ್ 13- ಐಚ್ಚಿಕ ಕನ್ನಡ, ತರ್ಕಶಾಸ್ತ್ರ, ಗೃಹ ವಿಜ್ಞಾನ ಮಾರ್ಚ್ 15- ರಾಜ್ಯಶಾಸ್ತ್ರ, ತರ್ಕಶಾಸ್ತ್ರ, ಗಣಕಶಾಸ್ತ್ರ ಮಾರ್ಚ್ 16-ಇತಿಹಾಸ, ಜೀವಶಾಸ್ತ್ರ, ಗೃಹವಿಜ್ಞಾನ 2 ಪಿಯುಸಿ ಪರೀಕ್ಷೆ 2 ವೇಳಾಪಟ್ಟಿ ಮೇ 3- ಕನ್ನಡ, ಅರೇಬಿಕ್ ಮೇ 4- ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನಶಾಸ್ತ್ರ ಮೇ 5- ರಾಜ್ಯಶಾಸ್ತ್ರ, ಗಣಕಶಾಸ್ತ್ರ ಮೇ 6- ಇತಿಹಾಸ, ರಸಾಯನಶಾಸ್ತ್ರ ಮೇ 7- ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣ ಶಾಸ್ತ್ರ. ಮೇ 8- ಐಚ್ಛಿಕ ಕನ್ನಡ, ಭೌತಶಾಸ್ತ್ರ, ಮೂಲ ಗಣಿತ ಮೇ 10- ಅರ್ಥಶಾಸ್ತ್ರ, ಗಣಿತ ಮೇ 11-ಹಿಂದಿ ಮೇ 12- ಇಂಗ್ಲಿಷ್ ಮೇ 13- ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ ಮೇ 14- ತರ್ಕಶಾಸ್ತ್ರ, ಭೂಗೋಳಶಾಸ್ತ್ರ, ಗೃಹವಿಜ್ಞಾನ ಮೇ 15- ತಮಿಳು, ತೆಲುಗು, ಮಲಯಾಳಂ,ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ , ಮಾಹಿತಿ ತಂತ್ರಜ್ಞಾನ, ಡೀಟೇಲ್ ಆಟೋಮೊಬೈಲ್.