Stock Market | ಅಮೆರಿಕ–ಇರಾನ್ ಕದನ ವಿರಾಮ ಅಂತ್ಯ? ಷೇರು ಮಾರುಕಟ್ಟೆಯಲ್ಲಿ ತಲ್ಲಣ
ಮುಂಬೈ: ಇರಾನ್ ಜತೆಗಿನ ಮಧ್ಯಂತರ ಕದನ ವಿರಾಮ ಒಪ್ಪಂದವು ಮುಗಿದ ಅಧ್ಯಾಯ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಗಳ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಆತಂಕ ಎದುರಾಗಿದೆ. ಇರಾನ್ ಮೇಲೆ ಅಮೆರಿಕ ಹೊಸ ದಾಳಿಗಳನ್ನು ಆರಂಭಿಸಿದ್ದು, ಇದು ಜಾಗತಿಕ ಮಾರುಕಟ್ಟೆಯ ಹೂಡಿಕೆ ಉತ್ಸಾಹವನ್ನು ಕುಗ್ಗಿಸಿದೆ ಮತ್ತು ಕಚ್ಚಾ

ಮುಂಬೈ: ಇರಾನ್ ಜತೆಗಿನ ಮಧ್ಯಂತರ ಕದನ ವಿರಾಮ ಒಪ್ಪಂದವು ಮುಗಿದ ಅಧ್ಯಾಯ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಗಳ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಆತಂಕ ಎದುರಾಗಿದೆ. ಇರಾನ್ ಮೇಲೆ ಅಮೆರಿಕ ಹೊಸ ದಾಳಿಗಳನ್ನು ಆರಂಭಿಸಿದ್ದು, ಇದು ಜಾಗತಿಕ ಮಾರುಕಟ್ಟೆಯ ಹೂಡಿಕೆ ಉತ್ಸಾಹವನ್ನು ಕುಗ್ಗಿಸಿದೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಾಗುವಂತೆ ಮಾಡಿದೆ.ಈ ಎಲ್ಲ ಬೆಳವಣಿಗೆಗಳ ನಡುವೆ ಬುಧವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಇಳಿಕೆ ದಾಖಲಿಸಿವೆ.ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,677 ಅಂಶ ಇಳಿಕೆಯಾಗಿ, 76,503ಕ್ಕೆ ವಹಿವಾಟು ಕೊನೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 516 ಅಂಶ ಕಡಿಮೆಯಾಗಿ, 23,882ಕ್ಕೆ ಅಂತ್ಯಗೊಂಡಿದೆ.ನಷ್ಟ ಹೀಗೆಯೇ ಮುಂದುವರಿದರೆ, ಕಳೆದ ಎರಡು ತಿಂಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಸೂಚ್ಯಂಕಗಳು ಕಂಡ ಅತಿ ದೊಡ್ಡ ಕುಸಿತ ಇದಾಗಲಿದೆ.ವಿದೇಶಿ ಹೂಡಿಕೆದಾರರ ನೆಚ್ಚಿನ ವಲಯಗಳಾದ ಹಣಕಾಸು ಮತ್ತು ಐಟಿ ವಲಯ ಕ್ರಮವಾಗಿ ಶೇ 2.5 ಮತ್ತು ಶೇ 1.5ರಷ್ಟು ನಷ್ಟ ಅನುಭವಿಸಿದವು. ಅಲ್ಲದೆ, ಮಾರುಕಟ್ಟೆಯ ಎಲ್ಲಾ 16 ಪ್ರಮುಖ ವಲಯಗಳು ನಷ್ಟದಲ್ಲಿದ್ದವು. ಇನ್ನು ಸ್ಮಾಲ್-ಕ್ಯಾಪ್ ಮತ್ತು ಮಿಡ್-ಕ್ಯಾಪ್ ಸೂಚ್ಯಂಕಗಳು ತಲಾ ಶೇ 2ರಷ್ಟು ಕುಸಿತ ಕಂಡಿವೆ.ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯು ಕಂಪನಿಗಳ ಲಾಭ ಗಳಿಕೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕದಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳು, ಪೇಂಟ್ ತಯಾರಕರು, ವಿಮಾನಯಾನ ಸಂಸ್ಥೆಗಳು ಮತ್ತು ಟೈರ್ ತಯಾರಕ ಕಂಪನಿಗಳ ಷೇರುಗಳು ತೀವ್ರ ಕುಸಿತ ದಾಖಲಿಸಿವೆ.ಟ್ರಂಪ್ ಹೇಳಿದ್ದೇನು? ಯುದ್ಧ ಕೊನೆಗೊಳಿಸಲು ಇರಾನ್ನೊಂದಿಗೆ ಸಹಿ ಮಾಡಲಾಗಿದ್ದ ತಿಳುವಳಿಕಾ ಒಪ್ಪಂದ (ಎಂಒಯು) ಈಗ ಮುಗಿದ ಅಧ್ಯಾಯ. ಹಾಗಾಗಿ ಇರಾನ್ ಜತೆ ಯಾವುದೇ ಮಾತುಕತೆ ನಡೆಸಲು ಬಯಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.‘ಇರಾನಿಯನ್ನರು ನಾಲಾಯಕ್ ಜನರು. ಅವರು ವಿಕೃತ ಮನಸ್ಸು ಹೊಂದಿದ್ದಾರೆ. ಅವರನ್ನು ಮುನ್ನಡೆಸುತ್ತಿರುವವರೂ ವಿಕೃತ ಮನಸ್ಸಿನವರೇ ಆಗಿದ್ದಾರೆ. ಅವರೊಂದಿಗೆ ವ್ಯವಹರಿಸುವುದರಿಂದ ಸಮಯ ವ್ಯರ್ಥ’ ಎಂದು ಅವರು ಕಿಡಿಕಾರಿದ್ದಾರೆ.ಇರಾನಿಯನ್ನರು ನಾಲಾಯಕ್, ವಿಕೃತ ಮನಸ್ಸುಳ್ಳವರು: ಡೊನಾಲ್ಡ್ ಟ್ರಂಪ್ಇರಾನ್ ಜತೆಗಿನ ಒಪ್ಪಂದ ಮುಗಿದ ಅಧ್ಯಾಯ ಎಂದ ಟ್ರಂಪ್: ತೈಲ ಬೆಲೆ ದಿಢೀರ್ ಏರಿಕೆ