Stock Market | ರಿಲಯನ್ಸ್, ಐ.ಟಿ ಷೇರು ಖರೀದಿ ಜೋರು: ಸೂಚ್ಯಂಕ ಭಾರಿ ಜಿಗಿತ
ಮುಂಬೈ: ಕಚ್ಚಾ ತೈಲ ದರ ಇಳಿಕೆ ಹಾಗೂ ಬ್ಯಾಂಕಿಂಗ್, ಐಟಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಮೌಲ್ಯ ವರ್ಧನೆಯ ಕಾರಣದಿಂದಾಗಿ ದೇಶದ ಷೇರುಪೇಟೆಯ ಪ್ರಮುಖ ಸೂಚ್ಯಂಕಗಳು ಗುರುವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿವೆ.ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕವು 1,533 ಅಂಶ ಜಿಗಿದಿದೆ. ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ ಸೂಚ್ಯಂಕವು 374 ಅಂಶ ಏರಿಕೆ ಕಂಡಿದೆ. ಇದರೊಂದ

ಮುಂಬೈ: ಕಚ್ಚಾ ತೈಲ ದರ ಇಳಿಕೆ ಹಾಗೂ ಬ್ಯಾಂಕಿಂಗ್, ಐಟಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಮೌಲ್ಯ ವರ್ಧನೆಯ ಕಾರಣದಿಂದಾಗಿ ದೇಶದ ಷೇರುಪೇಟೆಯ ಪ್ರಮುಖ ಸೂಚ್ಯಂಕಗಳು ಗುರುವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿವೆ.ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕವು 1,533 ಅಂಶ ಜಿಗಿದಿದೆ. ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ ಸೂಚ್ಯಂಕವು 374 ಅಂಶ ಏರಿಕೆ ಕಂಡಿದೆ. ಇದರೊಂದಿಗೆ ಸೂಚ್ಯಂಕಗಳ ವಹಿವಾಟು 3 ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್ಟೆಲ್, ಎಟರ್ನಲ್, ಎಚ್ಸಿಎಲ್ಟೆಕ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಟಿಸಿಎಸ್ ಷೇರುಗಳು ಲಾಭ ಗಳಿಸಿವೆ. ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ನ ಅಂಗಸಂಸ್ಥೆ ಜಿಯೊ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ನ ಐಪಿಒ (ಸಾರ್ವಜನಿಕರಿಗೆ ಷೇರು ಮಾರಾಟ) ಪ್ರಕ್ರಿಯೆ ಅಕ್ಟೋಬರ್ 21ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇಕಡ 4.03ರಷ್ಟು ಜಿಗಿತ ಕಂಡಿವೆ.ಭಾರತ್ ಎಲೆಕ್ಟ್ರಾನಿಕ್ಸ್, ಟ್ರೆಂಟ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ನಷ್ಟ ಅನುಭವಿಸಿವೆ.ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 2.34ರಷ್ಟು ಕುಸಿದು, ಪ್ರತಿ ಬ್ಯಾರಲ್ ಬೆಲೆಯು 103.6 ಡಾಲರ್ಗೆ ಮುಟ್ಟಿದೆ.